ಯುವ ರೈತ ಆತ್ಮಹತ್ಯೆ: ಭೀಮರಾವ್ ಪ್ರಭು ಸಲಗರರ ಕುಟುಂಬಕ್ಕೆ ಪ್ರಾಂತ ರೈತ ಸಂಘಟನೆಯ ಸಾಂತ್ವನ

ಯುವ ರೈತ ಆತ್ಮಹತ್ಯೆ: ಭೀಮರಾವ್ ಪ್ರಭು ಸಲಗರರ ಕುಟುಂಬಕ್ಕೆ ಪ್ರಾಂತ ರೈತ ಸಂಘಟನೆಯ ಸಾಂತ್ವನ

ಯುವ ರೈತ ಆತ್ಮಹತ್ಯೆ: ಭೀಮರಾವ್ ಪ್ರಭು ಸಲಗರರ ಕುಟುಂಬಕ್ಕೆ ಪ್ರಾಂತ ರೈತ ಸಂಘಟನೆಯ ಸಾಂತ್ವನ

 ಆಳಂದ :ತಾಲೂಕಿನ ಮಾಡಿಯಾಳ ಗ್ರಾಮದ ಯುವ ರೈತ ಭೀಮರಾವ್ ಪ್ರಭು ಸಲಗರ ಅವರು ಕೃಷಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಇಂದು ಅವರ ಮನೆಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಮತ್ತು ಕರ್ನಾಟಕ ಪ್ರಾಂತ ರೈತ ಸಂಘಟನೆಯ ನಿಯೋಗ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸಾಲ ಬಾಧೆ ಹಾಗೂ ಬೆಳೆ ನಷ್ಟ

ಭೀಮರಾವ್ ಅವರು ಕೃಷಿಗಾಗಿ ಕೆಜಿಬಿ ಬ್ಯಾಂಕಿನಿಂದ ಮತ್ತು ಖಾಸಗಿಯಾಗಿ ಸಾಲ ಮಾಡಿದ್ದು, ಬೆಳೆ ನಷ್ಟದಿಂದಾಗಿ ಸಾಲವನ್ನು ತೀರಿಸಲು ವಿಫಲರಾಗಿದ್ದರು ಎಂದು ಅವರ ತಂದೆ ವಿವರಿಸಿದರು.

ಸಂಪೂರ್ಣ ಸಾಲ ಮನ್ನಾ ಮಾಡಲು ಆಗ್ರಹ

ಪಂಚನಾಮ ಮಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಅವರೊಂದಿಗೆ ನಿಯೋಗವು ಮಾತನಾಡಿತು. ತಾಲ್ಲೂಕು ದಂಡಾಧಿಕಾರಿ ಕಚೇರಿಗೆ ಪಂಚನಾಮದ ವರದಿ ತಲುಪಿಸಿ, ಕುಟುಂಬದ ಸಂಪೂರ್ಣ ಸಾಲ ಮನ್ನಾ ಮಾಡಿಸಿ, ಪರಿಹಾರವನ್ನು ತಕ್ಷಣವೇ ಒದಗಿಸಬೇಕೆಂದು ಮನವಿ ಮಾಡಿದರು.

ರೈತರ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆ

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲದಿರುವುದರಿಂದ ಮತ್ತು ಕೃಷಿಗೆ ಸಂಬಂಧಿಸಿದ ಬೀಜ, ಗೊಬ್ಬರಗಳ ದುಬಾರಿ ದರದಿಂದಾಗಿ ದಿವಾಳಿಯಾಗುವ ಪರಿಸ್ಥಿತಿ ಎದುರಾಗಿದ್ದು, ಸಾಲದ ಶೂಲಕ್ಕೆ ಬಲಿಯಾಗುತ್ತಿದ್ದಾರೆ. ರೈತರ ಆತ್ಮಹತ್ಯೆ ಸರಕಾರದ ಪ್ರಾಯೋಜಿತ ಕೊಲೆಗಳಾಗಿ ಪರಿವರ್ತಿತವಾಗಿವೆ ಎಂದು ನಿಯೋಗವು ವಾಗ್ದಾಳಿ ನಡೆಸಿತು.

ಹೋರಾಟದ ನಿರ್ಧಾರಭೀಮರಾವ್ ಅವರ ಕುಟುಂಬಕ್ಕೆ ಸರಕಾರಿ ಹುದ್ದೆ ಹಾಗೂ ಪರಿಹಾರ ಒದಗಿಸಲು, ಆಳಂದನಲ್ಲಿ ಹೋರಾಟ ನಡೆಸುವ ತೀರ್ಮಾನಕ್ಕೆ ನಿಯೋಗವು ಒಮ್ಮತದಿಂದ ತಲುಪಿತು.

ನಿಯೋಗದ ಸದಸ್ಯರುಈ ಸಂದರ್ಭ ಪ್ರಾಂತ ರೈತ ಸಂಘಟನೆಯ ತಾಲೂಕಾ ಕಾರ್ಯದರ್ಶಿ ಪಾಂಡುರಂಗ ಮಾವಿನಕರ, ಪ್ರಕಾಶ ಜಾನೆ, ಕಮಲಾಕರ ಗಂಜಿ ಮತ್ತು ಫೆಡರೇಷನ್‌ನ ಸಲ್ಮಾನ್ ಖಾನ್ ನಗರ, ಪ್ರಮೋದ್ ಪಾಂಚಾಳ, ಪಂಡಿತ್, ಶ್ರೀಗುರು, ಸಮರ್ಥ ಹಾಗೂ ಶರಣು ಉಪಸ್ಥಿತರಿದ್ದರು.

ವರದಿ ಡಾ ಅವಿನಾಶ S ದೇವನೂರ