ಸೈಬರ್ ಟೆಕ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ 70 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು
ಸೈಬರ್ ಟೆಕ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ 70 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು
ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ 70 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು, ಹಾಗೂ 16 ನೇ ಬ್ಯಾಚಿನ ಒಂದು ವರ್ಷದ ಉಚಿತ ಕಂಪ್ಯೂಟರ್ ತರಬೇತಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ. ಕೋಚಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ವಿಜಯಕುಮಾರ ಗುರುಗಳು ಆಗಮಿಸಿದ್ದರು. ಹಾಗೂ ನರೇಗಲ್ಲಿನ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಶ್ರೀ ಎ.ಆಯ್,ಪಾಪಣ್ಣವರ ಗುರುಗಳು ಆಗಮಿಸಿದ್ದರು, ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ವಿರೂಪಾಕ್ಷಪ್ಪ ಸಂಗನಾಳ, ಶ್ರೀ ರಾಜೇಶ್ವರಿ ಬಂಬಲಾಪುರ, ಕುಮಾರಿ ವಿದ್ಯಾ ಜಕ್ಕಲಿ, ಕುಮಾರ್, ರಾಜು ಬಿಸನಳ್ಳಿ, ಶ್ರೀ ಅಂದಯ್ಯ ಹಿರೇಮಠ , ಶ್ರೀ ಬಸವರಾಜ ಮಡಿವಾಳರ ಉಪಸ್ಥಿತರಿದ್ದರು , ಕುಮಾರಿ ಸುಕನ್ಯಾ ಸಂಗನಾಳ ನಿರೂಪಿಸಿದರು, ಅಂದಯ್ಯ ಹಿರೇಮಠ ವಂದಿಸಿದರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
