ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಸಹಾರ ಟ್ರಸ್ಟ್ ವತಿಯಿಂದ ವಾಲಿಬಾಲ್ ಪಂದ್ಯಾವಳಿ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಣೆ
ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಸಹಾರ ಟ್ರಸ್ಟ್ ವತಿಯಿಂದ ವಾಲಿಬಾಲ್ ಪಂದ್ಯಾವಳಿ
ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಣೆ
ಚಿಂಚೋಳಿ :ಚಿಂಚೋಳಿ - ಚಂದಾಪೂರ ಅವಳಿ ಪಟ್ಟಣದಲ್ಲಿನ ವಿದ್ಯಾನಗರ ಚಂದಾಪೂರದ ಸಹಾರ ಟ್ರಸ್ಟ್ ಹಾಗೂ ಐಪಿಸಿ ಚರ್ಚ್ ವತಿಯಿಂದ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ 19 ವರ್ಷದ ಒಳಗಿನ ಮಕ್ಕಳಿಗೆ ವಾಲಿ ಬಾಲ್ ಪಂದ್ಯಾವಳಿ ನಡೆಯಿತು.
ಈ ಪಂದ್ಯಾವಳಿಯಲ್ಲಿ ತಾಲೂಕಿನ ಕಲ್ಲೂರ್ ರೋಡ, ಐನೋಳಿ, ಪೋಲಕಪಳ್ಳಿ ತಾಂಡಾ, ಕೊರವಿ, ಚಂದಾಪೂರ ಸೇರದಂತೆ ಒಟ್ಟು 12 ತಂಡಗಳು ಭಾಗವಹಿಸಿದವು. ಪಂದ್ಯಾವಳಿಯಲ್ಲಿ ಜಯಗಳಿಸಿದ ಪ್ರಥಮ ಬಹುಮಾನ ಟ್ರೋಫಿದೊಂದಿಗೆ 3 ಸಾವಿರ, ದ್ವಿತೀಯ ಸ್ಥಾನ 2 ಸಾವಿರ ಮತ್ತು ತೃತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿಯನ್ನು ಒಳಗೊಂಡಿದೆ. ಕ್ರಿಸ್ ಮಸ್ ಹಬ್ಬದ ಹಿನ್ನಲೆಯಲ್ಲಿ ಡಿ. 25 ರ ಸಾಯಂಕಾಲ 6 ಗಂಟೆಗೆ ನಡೆಯುವ ಚಂದಾಪೂರದ ಐಪಿಸಿ ಚರ್ಚ್ ನಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳ ಚಟುವಟಿಕೆಗಳು ಹಮ್ಮಿಕೊಂಡ ವೇದಿಕೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದು ಆಯೋಜಕ ಫಾಸ್ಟರ್ ಚಂದ್ರಕಾಂತ ನಂದಿಕೇಶ್ವರ ಅವರು ತಿಳಿಸಿದ್ದಾರೆ.
ಸಂಘಟನೆಗಾರ ಮಾರುತಿ ಗಂಜಗಿರಿ ಪಂದ್ಯಾವಳಿ ಉದ್ಘಾಸಿದರು.
ವಾಲಿ ಬಾಲ್ ಪಂದ್ಯಾವಳಿ ತೀರ್ಪುಗಾರರಾಗಿ ನಿವೃತ್ತ ದೈಹಿಕ ಶಿಕ್ಷಕ ಮೌಲನಾ ಪಟೇಲ್ ಇರಗಪಳ್ಳಿ ಹಾಗೂ ಮಹೇಶಕುಮಾರ ಫಾರೆಸ್ಟ್ ಅವರು ನಡೆಸಿಕೊಟ್ಟರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಆನಂದಕುಮಾರ ಎನ್ ಟೈಗರ್, ಚಿಂಚೋಳಿ ಪಿಎಸ್ಐ ಗಂಗಮ್ಮ, ಮಿರಿಯಾಣ ಪಿಎಸ್ಐ ಮಡಿವಾಳಪ್ಪ ಭಾಗೋಡಿ, ಮುಖಂಡರಾದ ಗೋಪಾಲರಾವ ಕಟ್ಟಿಮನಿ,ಕೆ. ಎಂ. ಬಾರಿ, ಸಂತೋಷ, ಮಾರುತಿ ಗಂಜಗಿರಿ, ವೀರಣ್ಣ ಹೊಸಮನಿ, ನಿಯಾಜ್ ಅಲಿ, ಜಗನ್ನಾಥ ಕಟ್ಟಿ, ರಂಜಿತ್ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.