ಕಾಸರ ಬೊಸಗಾ ಪ್ರೌಢಶಾಲೆಯಲ್ಲಿ ಸೆನಸೈ ಆನಂದ್ ಬಿ ಕೂಡಿ ಅವರಿಂದ ವಿದ್ಯಾರ್ಥಿನಿಯರಿಗೆ ಕರಾಟೆ ಜಾಗೃತಿ ಜಾತ ಮುಷ್ಟಿ ಪ್ರಯೋಗ ಕಾರ್ಯಕ್ರಮಕ್ಕೆ ಚಾಲನೆ.
ಕಾಸರ ಬೊಸಗಾ ಪ್ರೌಢಶಾಲೆಯಲ್ಲಿ ಸೆನಸೈ ಆನಂದ್ ಬಿ ಕೂಡಿ ಅವರಿಂದ ವಿದ್ಯಾರ್ಥಿನಿಯರಿಗೆ ಕರಾಟೆ ಜಾಗೃತಿ ಜಾತ ಮುಷ್ಟಿ ಪ್ರಯೋಗ ಕಾರ್ಯಕ್ರಮಕ್ಕೆ ಚಾಲನೆ.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಯೋಜನೆ ಅಡಿಯಲ್ಲಿ ಜೆವರ್ಗಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಹಾಗೂ ಟಿಪಿಓ ಶಿವಪುತ್ರ ಸರ್ ಅವರ ಸಹಕಾರದೊಂದಿಗೆ ಜೇವರ್ಗಿ ತಾಲೂಕಿನ ಎಲ್ಲ ಪ್ರೌಢಶಾಲೆಗಳಲ್ಲಿ ಸ್ವಯಂ ರಕ್ಷಣಾ ಮುಷ್ಟಿ ಪ್ರಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಅದೇ ರೀತಿಯಾಗಿ ಪಠ್ಯೇತರ ಚಟುವಟಿಕೆಯೊಂದಿಗೆ ವಿದ್ಯಾರ್ಥಿನಿಯರ ಪ್ರತಿಕೂಲ ಸನ್ನಿವೇಶದಲ್ಲಿ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಪ್ರತಿಯೊಂದು ಪ್ರೌಢ ಶಾಲೆಗಳಲ್ಲಿ ಕರಾಟೆ ಶಿಕ್ಷಕರಿಂದ ವಿದ್ಯಾರ್ಥಿನಿಯರಿಗೆ ಕಾನೂನಿನ ಅರಿವು ಮೂಡಿಸುವುದರ ಜೊತೆಗೆ ಆತ್ಮ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎನ್ನುವ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತಿದೆ ಅದೇ ರೀತಿಯಾಗಿ ಜೆವರ್ಗಿ ತಾಲೂಕಿನ ಕಾಸರಬೊಸಗಾ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಜೆನ್ನ್ ಶಿಟೊರೀಯೊ ಕರಾಟೆ ಅಸೋಸಿಯೇಷನ ಶಿಕ್ಷಕರಾದ ಸೇನಸೈ ಆನಂದ ಬಿ ಕೂಡಿ ಬಿಳವಾರ ಅವ್ರು ತರಬೇತಿ ನೀಡುತಿದ್ದಾರೆ . ಶಾಲೆಯ ಮುಖ್ಯ ಗುರುಗಳಾದ ಶ್ರೀ ಅಲಿಸಾಬ್ ಅವರು ವಿದ್ಯಾರ್ಥಿನಿಯರಿಗೆ ಕರಾಟೆ ಸ್ವಯಂ ರಕ್ಷಣಾ ಕಲೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಕ್ಕಳಿಗೆ ಕಿಬಿಮಾತು ಹೇಳಿದರು ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ರಾಮನಗೌಡ ಮತ್ತು ದಿನೇಶ್ ಕಾಂಬ್ಳೆ ಸಹ ಶಿಕ್ಷಕರು ಹಾಗೂ ವಜೀರ್ ಸರ್ ಸಹ ಶಿಕ್ಷಕರು ಅದೇ ರೀತಿಯಾಗಿ ದೈಹಿಕ ಶಿಕ್ಷಣ ವಿಭಾಗದ ದೈಹಿಕ ಶಿಕ್ಷಕರು ಶರಣು ಸರ್ ಬೇಲೂರು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು