ನೀಲಾಂಬಿಕಾ ಆಶ್ರಮ ಖೇಡ ಸಂಗಮ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು

ನೀಲಾಂಬಿಕಾ ಆಶ್ರಮ ಖೇಡ  ಸಂಗಮ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು

ನೀಲಾಂಬಿಕಾ ಆಶ್ರಮ ಖೇಡ ಸಂಗಮ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು

ಕಮಲನಗರ: ಕಮಲನಗರ ತಾಲೂಕಿನ ನೀಲಾಂಬಿಕಾ ಆಶ್ರಮ ಖೇಡ ಸಂಗಮದಲ್ಲಿ ಇಂದು ಡಾ! ಚನ್ನಬಸವ ಪಟ್ಟದ್ದೇವರು ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿರುವ ಮಾತೊಶ್ರಿ ದೇವಮ್ಮ ತಾಯಿ ಆಶ್ರಮ ಡೋಣಗಾಂವ ಪೂರ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿರುವ ಗಣರಾಜ್ಯೋತ್ಸವವನ್ನು ನಮ್ಮ ಹಬ್ಬವಾಗಿದೆ ಸಂವಿಧಾನ ಮಾನ್ಯತೆ ಪಡೆದುಕೊಂಡು ಅದರ ತಿಳುವಳಿಕೆಯನ್ನು ಅರಿತು ನಡೆದುಕೊಳ್ಳಬೇಕೆಂದು ನುಡಿದರು.

ಮುಖ್ಯ ಗುರುಗಳಾದ ಸಂಜು ಕುಮಾರ್ ಮೇಂಗಾ ಅಧ್ಯಕ್ಷರು ಸ್ಥಾನ ವಹಿಸಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಸಂವಿಧಾನ ಚೌಕಟ್ಟು ಪರಿಪಾಲನೆ ಮಾಡಬೇಕು ಎಂದು ಹೇಳಿದರು.

 ಮಾಜಿ ಸೈನಿಕರಾದ ಮಂಚಕುರೆ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ದೇಶದ ವಿವಿಧ ಸಾಂಸ್ಕೃತಿಕ ಗಳಲ್ಲಿ ಒಂದಾಗಿರುವ ಗಣರಾಜ್ಯೋತ್ಸವು ಒಂದು ಎಂದು ಮಾತನಾಡಿದರು. 

ಅದೇ ರೀತಿ ಇನ್ನೊಬ್ಬ ಅತಿಥಿಗಳಾದ ವೀರೆಂದ್ರಕುಮಾರ ಬೀರಾದಾರ ಖೇಡ ಇವರು ದೇಶ ವಿದೇಶಗಳಲ್ಲಿ ಉನ್ನತ ಮಟ್ಟದ ಸಂವಿಧಾನ ಚೌಕಟ್ಟು ಇದರೆ ಅದು ನಮ್ಮ ಸಂವಿಧಾನ ಎಂಬುದು ಅರಿಯಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ಪತ್ರಕೃತರಾದ ಸಂಗಮೇಶ್ವರ ಎಸ್ ಮುರ್ಕೆ ಹಾಗೂ ಸಂಗಮೇಶ್ ಕಿಡ್ವೆ ಉಪಸ್ಥಿತಿಯಲ್ಲಿದ್ದರು.

.ಶಾಲೆಯ ಮಕ್ಕಳು ದೇಶ ಭಕ್ತಿಗೀತೆಗಳ ಮೇಲೆ ಅನೇಕ ರೀತಿಯ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.ಹೀಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

 ಈ ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ವರ್ಗದವರಾದ ,ಪುಷ್ಪಾವಂತಿ, ಸುರೇಶ ನೀಲಕಂಠ,ಬಸವ ಚಿಂದೆ,ಸಂಗೀತಾ ಮೇತ್ರೆ,,ದೀಪಾಕ ಪಾಟೀಲ್,ರತ್ನಮ್ಮಾ ಸ್ವಾಮಿ, ರವಿ ಕಾಳೆ, ಜ್ಯೋತಿ ಶ್ವೇತಾ ಸೊಲಾಪುರೆ, ಪ್ರತಿಭಾ ಆರ್ ,ವೈಶಾಲಿ ಬೀರಾದಾರ,ಮೇಘಾ ಗೌಡ, ಭಾಗ್ಯಶ್ರೀ ಎಮ್, ರೇಣುಕಾ ಎಸ್ ಶಿಕ್ಷಕರು ಇದ್ದರು.

ಈ ಕಾರ್ಯಕ್ರಮವು ಶ್ರೀಮತಿ ರೇಷ್ಮಾ ಹೊಳೆಸಮುದ್ರೆ ಅವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.ಶಿವಕುಮಾರ ಸ್ವಾಮಿ ಸ್ವಾಗತ ಮಾಡಿದರು.

ಬಸವ ಚಿಂದೆ ವಂದಿಸಿದರು.