ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಕಲಬುರಗಿ: ನಗರದ ವಾರ್ಡ ನಂ. 33ರ ಸುಂದರ ನಗರ ಬಡಾವಣೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ನಿರ್ಮಿಸಲಾದ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು.
ಈ ಘಟಕದ ಉದ್ಘಾಟನೆಯ ಮೂಲಕ ಬಡಾವಣೆಯ ನಿವಾಸಿಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಲಭ್ಯವಾಗಲಿದೆ. ಸಮಾರಂಭದಲ್ಲಿ ಕಾಂಗ್ರೆಸನ್ ಐದು ಗ್ಯಾರೆಂಟಿನ್ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಪಾಲಿಕೆ ಸದಸ್ಯೆ ರಾಘಮ್ಮ ಇನಾಮದಾರ್, ರಾಜು ಇನಾಮದಾರ, ಶರಣು ಕಡಗಂಚಿ, ಸಿದ್ದಾರ್ಥ ಕೋರವಾರ, ಲಕ್ಷ್ಮಣ ಮೂಲಭಾರತಿ, ವಿಜಯಕುಮಾರ ಬೇಳಮಗಿ, ನಾಗೇಂದ್ರ ಕೋರೆ, ಸಂಜಯ ಪಾಟೀಲ, ನಾರಾಯಣ ಜೋಶಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಶುದ್ಧಗಂಗಾ ಘಟಕದಿಂದ ಸ್ಥಳೀಯರು ಆರೋಗ್ಯಕರ ನೀರನ್ನು ಕಡಿಮೆ ದರದಲ್ಲಿ ಪಡೆಯಬಹುದಾಗಿದೆ. ಈ ಪ್ರಯತ್ನಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.