ಉದಯೋನ್ಮುಖ ಬರಹಗಾರ ಸಂಗಮೇಶ ಎನ್ ಜವಾದಿ. -
ಉದಯೋನ್ಮುಖ ಬರಹಗಾರ ಸಂಗಮೇಶ ಎನ್ ಜವಾದಿ.
ಬೀದರ.ಕಲ್ಯಾಣ ಕರ್ನಾಟಕ ಭಾಗದ ಉದಯೋನ್ಮುಖ ಸಾಹಿತಿ, ಜನರ ಆಶಾಕಿರಣ ,ಎಲೆಮರೆಯ ಸಾಧಕರನ್ನು ಸಮಾಜಕ್ಕೆ ಪರಿಚಯಿಸಿದ ಹವ್ಯಾಸಿ ಬರಹಗಾರ, ಮೌಲ್ಯಾಧಾರಿತ ವಿಚಾರಗಳು ಜಾಗತಿಕ ಸಮುದಾಯಕ್ಕೆ ಮುಟ್ಟಿಸುವ ಆಶಾವಾದಿ ಶರಣ ಪ್ರತಿಭೆ, ರಾಷ್ಟ್ರ - ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ, ಅತ್ಯುತ್ತಮ ಸಮಾಜ ಮುಖಿ ಚಿಂತಕ,ಸರಳ ಸ್ನೇಹ
ಜೀವಿ, ಸಾಹಿತ್ಯ ಆರಾಧಕ, ಕನ್ನಡದ ಸಾರಥಿ ಯುವಜನತೆಯ ಆದರ್ಶ ವ್ಯಕ್ತಿ,ಕರುನಾಡಿನ ಚೈತನ್ಯ ಮೂರ್ತಿ, ಅನಾಥರ, ದೀನರ, ಮಕ್ಕಳ ಸಂರಕ್ಷಕರಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರಮಜೀವಿ ಇವರು.ಒಟ್ಟಿನಲ್ಲಿ ಹೇಳಬೇಕೆಂದರೆ ಇಂದಿನ ಕರುನಾಡಿಗೆ ಇವರು ಮಾದರಿ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಪ್ರಚಲಿತ ವಿದ್ಯಮಾನಗಳ ಕುರಿತು ಹಾಗೂ ವಿವಿಧ ವೈಚಾರಿಕ ಚಿಂತನಾತ್ಮಕ ಲೇಖನಗಳನ್ನು ಬರೆಯುತ್ತಿರುವ ಬರಹಗಾರರು,
ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರಗತಿಪರ ಚಿಂತಕರು. ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯ ನೂತನ ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದ ನಾಗಶೆಟ್ಟಿ ಹಾಗೂ ಸರಸ್ವತಿ ದಂಪತಿಗಳ ಮಗನಾಗಿ ದಿನಾಂಕ 02-08-1984 ರಲ್ಲಿ ಜನಿಸಿ ತಮ್ಮ ಬಡತನದ ನಡುವೆ ಬಿ.ಎಸ್ಸಿ., ಎಂ.ಎಸ್ಸಿ.
ಎಚ್. ಆರ್.ಎಂ.,ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಹಾಗೂ ಕೃಷಿ ಡಿಪ್ಲೊಮಾ(ಸಂಪ್ರದಾಯಕ) ವಿಧ್ಯಾಭ್ಯಾಸ ಮಾಡಿದ್ದಾರೆ.
ಸಾಮಾಜಿಕವಾಗಿ,ಶೈಕ್ಷಣಿಕ,ಧಾರ್ಮಿಕ ಮತ್ತು ಪರಿಸರದ ಸಂರಕ್ಷಣೆ, ದೇಹಾಂಗದಾನ ಜಾಗೃತಿ ಮೂಡಿಸುವ ಕೆಲಸ ಇದಲ್ಲದೆ ಚುಟುಕು ಸಾಹಿತ್ಯದ ಬೆಳವಣಿಗೆಯ ಕೈಂಕರ್ಯ ಮಾಡಿದ್ದಾರೆ. ತಮ್ಮ ಪ್ರಬುದ್ಧ ಭಾವನೆಗಳನ್ನು ಅಕ್ಷರಗಳಲ್ಲಿ ಭಟ್ಟಿ ಇಳಿಸುವ ಮೂಲಕ ಈಗಾಗಲೇ
ಸುಮಾರು 1000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರು ಬರೆದ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಸಾಕಷ್ಟು ಸಮಾಜ ಮುಖಿ ಸೇವೆಗಳ ಉತ್ತಮ ಕಾರ್ಯ ಚಟುವಟಿಕೆಯೊಂದಿಗೆ
ಕನ್ನಡ ನಾಡು ನುಡಿ ಭಾಷೆ,ನೆಲ, ಜಲ ಹಾಗೂ ಗಡಿ ಭಾಗದ ವಿಚಾರಗಳು ಇಂದಿನ ಜನಾಂಗಕ್ಕೆ ಮಾದರಿ ಮತ್ತು ಪ್ರೇರಣೆಯಾಗಿವೆ.
ಸಾಹಿತ್ಯ ಸೇವೆಯಲ್ಲಿ ಸಂಗಮೇಶ ಜವಾದಿ: ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಕನ್ನಡ ನಾಡು ನುಡಿ ಭಾಷೆ ನೆಲ ಜಲ ಗಡಿ ಸಮಸ್ಯೆಗಳು ಬಂದಾಗ ಎದೆ ತಟ್ಟಿ ನಿಲುವ ಎದೆಗಾರಿಕೆ ಜವಾದಿಯವರದು.ಹಲವಾರು ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸಿದ ಹಿರಿಮೆ ಇವರದು.250 ಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನಗಳನ್ನು ವಾಚನ ಮಾಡಿರುತ್ತಾರೆ. 1000 ಅಧಿಕ ವೈಜ್ಞಾನಿಕ ಮತ್ತು ವೈಚಾರಿಕ - ಸಮಾಜ ಮುಖಿ ಲೇಖನಗಳನ್ನು ಬರೆದಿದ್ದಾರೆ.ಅದೇ ರೀತಿಯಲ್ಲಿ 300 ಕ್ಕೂ ಹೆಚ್ಚು ಕವಿತೆಗಳನ್ನು ಸಹ ರಚನೆ ಮಾಡಿದ್ದಾರೆ. ಆದಕಾರಣ ಇವರ ರಚನೆ ಮಾಡಿರುವ ಸಾಹಿತ್ಯ ರಾಷ್ಟ್ರ - ರಾಜ್ಯ ಮಟ್ಟದ
ನಾಡಿನ ವಿವಿಧ ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಣೆಗೊಂಡಿರುತ್ತವೆ ಹಾಗೂ ನಾಡಿನ ಮೂಲೆ ಮೂಲೆಗಳಿಂದ ಇವರಿಗೆ ಅಭಿನಂದನೆಗಳ ಮಾಹಾಪೂರವೇ ಹರಿದು ಬಂದಿರುವುದು ಇವರ ಸಾಹಿತ್ಯ ಸೇವೆಯ ಸಾಕ್ಷಿ ಪ್ರಜ್ಞೆಯಾಗಿದೆ ಬಂಧುಗಳೆ.
ಶರಣ ಸಾಹಿತ್ಯ ಪರಿಷತ್ತು ಹಾಗೂ ಕಲ್ಯಾಣ ಕಾಯಕ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ವಚನ ಚಿಂತನೆ ಗೋಷ್ಠಿ, ದತ್ತಿ ಕಾರ್ಯಕ್ರಮ, ವಿಶೇಷ ಉಪನ್ಯಾಸ, ಮಕ್ಕಳಿಗೆ ವಿವಿಧ ವೈಜ್ಞಾನಿಕ - ವೈಚಾರಿಕ ಕುರಿತು ವಿಶೇಷ ಸ್ವರ್ಧೆಗಳು ಆಯೋಜನೆ,ಮಾಹಾಮನೆ ಕಾರ್ಯಕ್ರಮ, ಸಾಧಕರು - ಪ್ರತಿಭಾವಂತರಗೆ ಸನ್ಮಾನ,ವಚನೋತ್ಸವ ಕಾರ್ಯಕ್ರಮ,ಇತ್ಯಾದಿ ಶರಣ ಸಾಹಿತ್ಯ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳು ಸಂಗಮೇಶ ಜವಾದಿಯವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಸಾಗುತ್ತಿವೆ.ಇವುಗಳಲ್ಲದೆ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿವತಿಯಿಂದ ವಿವಿಧ ಜಾಗೃತಿ ಅಭಿಯಾನ ಕಾರ್ಯಕ್ರಮಗಳು ಬೀದರ ಜಿಲ್ಲಾದ್ಯಾಂತ ಮಾಡಿಕೊಂಡು ಬರುತ್ತಿದ್ದಾರೆ. ಇದರಲ್ಲಿ ದೇಹದಾನ,ನೇತ್ರದಾನ, ಅಂಗಾಂಗಗಳ ದಾನ,ರಕ್ತದಾನ ಕುರಿತು ವಿಶೇಷ ಶಿಬಿರಗಳನ್ನು ಏರ್ಪಡಿಸಿ ಜೊತೆಗೆ ಸಾಹಿತ್ಯ ಪರಿಷತ್ ವತಿಯಿಂದ ಕವಿಗೋಷ್ಠಿ, ಚಿಂತನಾ ಗೋಷ್ಠಿ, ವಿಶೇಷ ಉಪನ್ಯಾಸ ಕಾರ್ಯಕ್ರಮಗಳುನ್ನು ಹಮ್ಮಿಕೊಳ್ಳುವ ಮೂಲಕ ಚುಟುಕು ಸಾಹಿತ್ಯವು ಕಲ್ಯಾಣ ನಾಡಿನಲ್ಲಿ ಬೆಳೆಸಲು ಮುಂದಾಗಿದ್ದಾರೆ.ಕೃಷಿ ಕಾಯಕ ಸಂಸ್ಥೆಯ ಅಧ್ಯಕ್ಷರಾಗಿ ಪ್ರತಿ ಹದಿನೈದು ದಿನಗಳಿಗೊಮ್ಮೆ ರೈತರ ಸಭೆ ನಡೆಸುತ್ತಿದ್ದಾರೆ. ಈ ಮೂಲಕ ರೈತರ ಸಮಸ್ಯೆಗಳು ಆಲಿಸುವುದರೊಂದಿಗೆ ಪರಿಹಾರ ಕಾರ್ಯಕ್ಕೆ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಾರೆ.ಸ್ವತಃ ಕೃಷಿಕರಾಗಿ ದುಡಿಯುತ್ತಿರುವ ಸಂಗಮೇಶ ಜವಾದಿಯವರು ಇಡೀ ರೈತರ ಎಲ್ಲಾ ಸಮಸ್ಯೆಗಳ ಆಗು ಹೋಗುಗಳ ಬಗೆ ಸಂಪೂರ್ಣ ರೈತರ ಸರ್ವತೋಮುಖ ಏಳಿಗೆಗೆ ಶ್ರಮಿಸುವ ಮೂಲಕ ಇವರು ರೈತರ ಆಶಾಕಿರಣವಾಗಿರುವುದು ಇಲ್ಲಿ ಉಲ್ಲೇಖನೀಯ.
ವಿವಿಧ ಕ್ಷೇತ್ರಗಳಲ್ಲಿ ಜವಾದಿಯವರ ಪಾತ್ರ:
ಸಂಗಮೇಶ ಎನ್ ಜವಾದಿಯವರು ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಾಗೆ ಈ ಕ್ಷೇತ್ರದಲ್ಲಿಯೂ ಸಹ ನಿಸ್ವಾರ್ಥಿಯಾಗಿ ದುಡಿಯುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು,ನಮ್ಮೆಗೆಲ್ಲರಿಗೂ ಮಾದರಿಯಾಗಿದ್ದಾರೆ. ಇನ್ನು ಪರಿಸರ ರಕ್ಷಣೆಯಲ್ಲಿ ಜವಾದಿಯವರ ಪಾತ್ರ ದೊಡ್ಡದು ಜೊತೆಗೆ ಅವರ ಸೇವೆ ಅಪಾರವಾಗಿದೆ. ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಹಾಗಾಗಿ
ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ನಾವೆಲ್ಲರೂ ಯೋಚನೆ ಮಾಡಬೇಕಾಗಿದೆ ಎನ್ನುತ್ತಾರೆ. ಕಡ್ಡಾಯವಾಗಿ ಪರಿಸರ ಶಿಕ್ಷಣ ಕೊಡಬೇಕು. ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಪರಿಸರ ನಾಶದಿಂದಾಗುವ ದುಷ್ಟರಿಣಾಮಗಳ ಬಗೆ ತಿಳಿಸುವ ಕೆಲಸ ಆಗಬೇಕೆಂಬುವುದು ಇವರ ಸದಾಶಯವಾಗಿದೆ. ಯೋಜನೆಗಳು ಆಚರಣೆಯಲ್ಲಿ ಬರುವಂತಾಗಬೇಕು ಎಂಬುದು ಇವರ ಅಂತರಾಳದ ದನಿಯಾಗಿದೆ.
ಇನ್ನು ಕನ್ನಡ ನಾಡು ನುಡಿ ಭಾಷೆ ನೆಲ ಜಲ ಗಡಿ ಪರವಾಗಿ ಸದಾ ಹೋರಾಟ ಮಾಡುವುದು ಸೇರಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇವರ ಹೋರಾಟ ಜಾರಿಯಲ್ಲಿದೆ. ಇನ್ನು ಬಡವರ, ಅನಾಥರ, ರೈತರ, ಕೂಲಿಕಾರ್ಮಿಕರ ಉನ್ನತಿಗಾಗಿ ದುಡಿಯುತ್ತಿದ್ದಾರೆ. ಹೀಗೆ ಇವರ ಹೋರಾಟ ಸತ್ಯ, ನ್ಯಾಯಕ್ಕಾಗಿ ಎಂದರೆ ತಪ್ಪಾಗಲಾರದು. ಸದಾ ಸಮಾಜದ ಸರ್ವೋದಯದತ್ತ ಗಮನಹರಿಸಿದ್ದಾರೆ. ಅಲ್ಲದೆ ಇಂದಿನ ದಿನಮಾನಗಳಲ್ಲಿ ಪ್ರಸ್ತುತ ಸಮಾಜದ ಆಗುಹೋಗುಗಳನ್ನು ಹಾಗೂ ರೈತರ ಸಮಸ್ಯೆಗಳನ್ನು ಜೊತೆಗೆ ಸಾಮಾಜಿಕ ಅನೇಕ ವಿಚಾರಗಳನ್ನು ತಮ್ಮ ಲೇಖನಗಳಲ್ಲಿ ಬರೆದು ಅವುಗಳನ್ನು ಪತ್ರಿಕಾ ಪುಟಗಳಲ್ಲಿ ಅಂಕಣಕಾರರಾಗಿ ರಾಜ್ಯ ಮಟ್ಟದಲ್ಲಿ ಬರೆದಿರುವುದು ಇವರ ಧೀರತೆಯನ್ನು ಎತ್ತಿ ತೋರಿಸುತ್ತದೆ ಸರ್ಕಾರ ಮತ್ತು ಸಮಾಜಕ್ಕೆ ಎಚ್ಚರಿಕೆ ಗಂಟೆಯನ್ನು ಕೊಟ್ಟ ಹಾಗೆ ಇವರ ಲೇಖನಗಳಿಂದ ಅನೇಕ ಸುಧಾರಣೆಗಳು ನಡೆದಿರುವುದು ಅಚ್ಚುಮೆಚ್ಚು. ಮತ್ತು ಗಮನಾರ್ಹ ಸಂಗತಿ.
ಸಂಗಮೇಶ ಜವಾದಿಯವರು ಸಾಂಸ್ಕೃತಿಕ ರಾಯಭಾರಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಿರುವುದು ಜೊತೆಗೆ ಆ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಇವರ ಜಾಯಮಾನವಾಗಿದೆ ಈ ಮೂಲಕವಾಗಿ ಹಳ್ಳಿಯಲ್ಲಿ ಮತ್ತು ತಾಲೂಕಿನಲ್ಲಿ ಸಾಂಸ್ಕೃತಿಗಳ ಚಟುವಟಿಗಳ ನಡೆಯುವುದಕ್ಕೆ ಇವರು ಪ್ರೇರಣಾದಾಯಕರಾಗಿರುವುದು ಒಪ್ಪಬೇಕು.
ಅಂದಹಾಗೆ ವಿಕಲಚೇತನರಿಗಾಗಿ ಜವಾದಿಯವರು
ಮನುಷ್ಯನ ಚಾಕುಚಕ್ಯತೆಯನ್ನು ಅವರ ಶಾರೀರಿಕ ಆಕೃತಿಯಿಂದ ಅಳೆಯುವುದು ಸರಿಯಲ್ಲ ಎಂದು ಸಂಗಮೇಶ ಎನ್ ಜವಾದಿಯವರು ಯಾವಾಗಲೂ ಹೇಳುತ್ತಾರೆ. ಅಂಗವೈಕಲ್ಯವು ಮನುಷ್ಯನ ಪ್ರತಿಭೆಯನ್ನು ಕಡಿಮೆ ಮಾಡುವುದಿಲ್ಲ. ವಿಕಲಚೇತನರು ವಿವಿಧಕೌಶಲ್ಯಗಳನ್ನು ಹೊಂದಿದ್ದು, ಅವಕಾಶ ದೊರೆತಲ್ಲಿ ವಿಶ್ವದ ಪ್ರಮುಖರಲ್ಲೊಬ್ಬಾರಾಗುವುದು ಸೂಜಿಗವೇನಲ್ಲ ಎಂದು ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ವಿಕಲಚೇತನರಿಗೆ ಸಮನಾದ ಅವಕಾಶವನ್ನು ಒದಗಿಸಿಕೊಟ್ಟು ಅವರೂ ಕೂಡ ನಮ್ಮಲ್ಲಿ ಒಬ್ಬರು, ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಮಾನ್ಯ ಜೀವನವನ್ನು ನಡೆಸಲು ಅವರಿಗೂ ಹಕ್ಕಿದೆ ಎಂಬುದನ್ನು ನಾವು ಅರಿತು ಬಾಳಬೇಕಾಗಿದೆ. ಅವರು ಈ ಸಮಾಜದ ಬಹು ದೊಡ್ಡ ಆಸ್ತಿ, ಅವರಿಗೂ ಸಮಾಜದಲ್ಲಿ ಜೀವಿಸಲ ಸ್ವಾತಂತ್ರ್ಯವಿದೆ.ಅವರನ್ನು
ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎನ್ನುತ್ತಾರೆ ಜವಾದಿಯವರು. ಈ ದಿಸೆಯಲ್ಲಿ ಸಂಗಮೇಶ ಎನ್ ಜವಾದಿಯವರು ವಿಕಲಚೇತನರ ಸರ್ವಾಂಗೀಣ ಸಮಗ್ರ ಅಭಿವೃದ್ಧಿಗಾಗಿ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಮೂಲಕ
ಶ್ರಮಿಸುತ್ತಿದ್ದಾರೆ.ವಿಕಲಚೇತನರಿಗೆ ಸರಕಾರದ ವತಿಯಿಂದ ಸಿಗುವಂತಹ ಅನೇಕ ಸೌಲಭ್ಯಗಳು ಹಾಗೂ ಸೌಕರ್ಯಗಳ ಕುರಿತು ವ್ಯಾಪಕ ಅರಿವು ಮೂಡಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಮನೆ-ಮನೆಗೆ ಭೇಟಿ ನೀಡಿ ವಿಕಲತೆ ಬಗ್ಗೆ ಕುಟುಂಬದ ಸದಸ್ಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅರ್ಹ ವಿಕಲಚೇತನರಿಗೆ ಸಾಧನ ಸಲಕರಣೆ, ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣ ಪತ್ರ ಮತ್ತು ಬಸ್‌ಪಾಸ್ ಕಲ್ಪಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.ಇನ್ನು ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಶಿಬಿರಗಳನ್ನು ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಮಾಹಿತಿ ನೀಡುತ್ತಿದ್ದಾರೆ.
ಹೀಗೆ ವಿಕಲಚೇತನರಿಗಾಗಿ ದುಡಿದು, ಅವರೆಲ್ಲರೂ
ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ರೀತಿಯಲ್ಲಿ ಅವಕಾಶಗಳನ್ನು ಪಡೆದು ಉತ್ತಮವಾದ ವಿದ್ಯಾಭಾಸ ಮತ್ತು ಕೌಶಲ್ಯಗಳಿಂದ ಸಶಕ್ತರಾಗಿಸುವಲ್ಲಿ ಜವಾದಿಯವರು ಪಾತ್ರ ದೊಡ್ಡದು ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ವಿಕಲಚೇತನರು ಸಾಮಾನ್ಯರಂತೆ ಜೀವನವನ್ನುನಡೆಸಬೇಕು ಎನ್ನುವ ಆಶಾಭಾವನೆ ಇಟ್ಟಿಕೊಂಡು ಹಗಲಿರುಳು ಎನ್ನದೆ. ಉತ್ತಮ ಸೌಲಭ್ಯಗಳನ್ನು ಅವರಿಗೆ ದೊರೆಯಬೇಕು. ಯಾವುದೇ ಅಡೆತಡೆಗಳಿಲ್ಲದ ಮುಕ್ತ ವಾತಾವರಣವನ್ನು
ವಿಕಲಚೇತನರಿಗೆ ಕಲ್ಪಿಸಿಕೊಡಬೇಕೆಂದು ಕಷ್ಟಪಡುತ್ತಿದ್ದಾರೆ.
ಸಂಗಮೇಶ ಜವಾದಿಯವರ ನಿಸ್ವಾರ್ಥ ಸೇವೆಗಳಿಗೆ ಸಂಧ ಗೌರವ ಪ್ರಶಸ್ತಿಗಳು ಹೀಗಿವೆ:
ತಾಲೂಕು, ಜಿಲ್ಲಾ ಮಟ್ಟದ ಲೇಖನ ಮತ್ತು ಪ್ರಬಂಧ ಪ್ರಶಸ್ತಿ.,
ಹುಮನಾಬಾದ ಎಸ್ ಬಿಸಿ ಕಾಲೇಜು ವತಿಯಿಂದ ಪ್ರಶಂಸನಾ ಪ್ರಶಸ್ತಿ.,
ಕವಿಚೇತನ ಪ್ರಶಸ್ತಿ.,
ನೈಜದ್ವೀಪ ಸಾಹಿತ್ಯ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಚಿಂಚೋಳಿ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ.,
ಸಿರಿಗನ್ನಡ ವೇದಿಕೆ (ರಿ)ಮಂಡ್ಯ ಇವರಿಂದ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.,
ಕರ್ನಾಟಕ ಸಾಂಸ್ಕೃತಿಕ ಅಕಡಾಮಿ ವತಿಯಿಂದ ಕಾಯಕ ಶ್ರೀ ಪ್ರಶಸ್ತಿ.,
ವೀರಶೈವ ಸಾಂಸ್ಕೃತಿಕ ಪ್ರತಿಷ್ಠಾನ ಇವರ ವತಿಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿ.,
ಭಾರತ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು ರವರಿಂದ ಕರ್ನಾಟಕ ಭೂಷಣ ಪ್ರಶಸ್ತಿ.,
ಕಲ್ಯಾಣ ನಾಡಿನ ಹಾರಕೂಡ ಮಠದ ವತಿಯಿಂದ ಚನ್ನವೀರ ರತ್ನ ಪ್ರಶಸ್ತಿ.,
ಕರ್ನಾಟಕ ದರ್ಶನ ಮಾಸ ಪತ್ರಿಕೆಯಿಂದ ಜನಸೇವಾ ರತ್ನ ಪ್ರಶಸ್ತಿ.,
ಸಮಾಜ ಕಲ್ಯಾಣ ಸೇವಾ ಸಂಸ್ಥೆಯ ವತಿಯಿಂದ ಸಿರಿಗನ್ನಡ ಸಾಹಿತ್ಯ ಪ್ರಶಸ್ತಿ.,
ಬಸವ ಬೀಮ ಸೇನೆ(ರಿ)ಯ ವತಿಯಿಂದ ಚಿನ್ಮಯ ಜ್ಞಾನಿ ಚನ್ನಬಸವ ಪ್ರಶಸ್ತಿ.,
ಚಿನ್ಮಯ ಪ್ರಕಾಶನ ಸಂಸ್ಥೆ ಬೆಳಗಾವಿ ಇವರಿಂದ ಬಸವ ಚೇತನ ಪ್ರಶಸ್ತಿ.,
ಜನ ಮನ ಫೌಂಡೇಶನ್ ವತಿಯಿಂದ ಸೂಪರ್ ಅಚಿವರ್ ಅವಾರ್ಡ್ ಪ್ರಶಸ್ತಿ.,
ಬೀದರ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.,
ಕೊಪ್ಪಳದ ಇಟಗಿ ಉತ್ಸವ ಪ್ರಯುಕ್ತ ರಾಜ್ಯ ಮಟ್ಟದ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ.,
ವೀರ ಕನ್ನಡಿಗರ ಸೇನೆ ಬೀದರ ರವರಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.,
ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ರವರಿಂದ ವಿಶ್ವ ಕನ್ನಡ ಸೇವಾ ಪ್ರಶಸ್ತಿ.,
ರಾಜ್ಯ ಯುವ ಬರಹಗಾರರ ಒಕ್ಕೂಟ ವತಿಯಿಂದ ರಾಜ್ಯ ಮಟ್ಟದ ಕುದ್ಮಲ್ ರಂಗರಾವ್ ಪ್ರಶಸ್ತಿ.,
ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯ ಸಮಿತಿ ವತಿಯಿಂದ ರಾಜ್ಯ ಮಟ್ಟದ ಕರ್ನಾಟಕ ಸೇವಾ ಮಾಣಿಕ್ಯ ಪ್ರಶಸ್ತಿ.,
ಮಂದಾರ ಕಲಾವಿದರ ವೇದಿಕೆ ವತಿಯಿಂದ ರಾಜ್ಯ ಮಟ್ಟದ ಸಾಹಿತ್ಯ ಕುಸುಮಾಕರ ಪ್ರಶಸ್ತಿ,.
ಸದ್ಗುರು ಯಲ್ಲಾಲಿಂಗೇಶ್ವರ ಸಂಸ್ಥಾನ ಟ್ರಸ್ಟ್ ಸಸ್ತಾಪೂರ ವತಿಯಿಂದ ರಾಜ್ಯ ಮಟ್ಟದ ಯಲ್ಲಾಲಿಂಗೇಶ್ವರ ಪ್ರಶಸ್ತಿ.,
ರಾಜ್ಯ ಮಟ್ಟದ ಲೇಖಕರ ಪ್ರಶಸ್ತಿ.,
ಕನ್ನಡಾಂಬೆ ಶಿಕ್ಷಣ ಸಂಸ್ಥೆ ವತಿಯಿಂದ ಸಂಘಟನಾ ಪ್ರಶಸ್ತಿ., ಯಲ್ಲಾಲಿಂಗೇಶ್ವರ ಸಂಸ್ಥಾನ ಮಠ ಬಸವಕಲ್ಯಾಣ ವತಿಯಿಂದ 2022 ರ ವರ್ಷದ ಸಂಘಟನಾ ಶರಣ ಪ್ರಶಸ್ತಿ., ಉರಿಲಿಂಗ ಪೆದ್ದಿ ಮಠ ಬೆಲೂರು ರವರು ಹಮ್ಮಿಕೊಂಡಿದ್ದ ಪದ್ದಿ ಶ್ರೀಗಳ ಸ್ಮರಣೋತ್ಸವ ಹಾಗೂ ರಾಜ್ಯ ಮಟ್ಟದ ಜಾನಪದ ಸಮ್ಮೇಳನದ ಅಂಗವಾಗಿ
ಕೊಡಮಾಡುವ 2022 ರ ಕರುನಾಡು ರತ್ನ ಪ್ರಶಸ್ತಿ.,
ಭಾಲ್ಕಿ ಹಿರೇಮಠ ಸಂಸ್ಥಾನದ ವತಿಯಿಂದ ಪ್ರತಿ ವರ್ಷ ಜರುಗುವ ಪೂಜ್ಯ ಲಿಂ.ಡಾ. ಚನ್ನಬಸವ ಪಟ್ಟದೇವರ 23ನೇಯ ಸ್ಮರಣೋತ್ಸವದ ಸಂದರ್ಭದಲ್ಲಿ ಚನ್ನಬಸವ ಪಟ್ಟದೇವರ ಸಾಹಿತ್ಯ - 2022 ರ ಪ್ರಶಸ್ತಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ನೀಡುವ ಚುಟುಕು ಚೇತನ ಪ್ರಶಸ್ತಿ -2023, ಗುಲ್ಬರ್ಗ ವಿಶ್ವವಿದ್ಯಾಲಯ ಕಲ್ಬುರ್ಗಿ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ - 2023 ಸೇರಿದಂತೆ
ಐವತ್ತಕ್ಕೂ ಹೆಚ್ಚು ಪ್ರಶಸ್ತಿ, ಗೌರವ ಸನ್ಮಾನಗಳು ಪಡೆದ ಕೀರ್ತಿ, ಶ್ರೇಯಸ್ಸು ಇವರದಾಗಿದೆ.
ಈದಿಗ ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ 2024-25 ನೇ ಸಾಲಿನ ಮಕ್ಕಳ
ವಯಕ್ತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶ್ರೀಯುತರಿಗೆ ಹೆಚ್ಚಿನ ರೀತಿಯಲ್ಲಿ ಪ್ರಶಸ್ತಿ ಸನ್ಮಾನಗಳು ದೊರಕಲಿ. ಈ ಮೂಲಕ ದೇಶಕ್ಕೆ ಮಾದರಿ ಆಗಲೆಂದು ಶುಭ ಹಾರೈಸುತ್ತೇವೆ.
ಲೇಖಕರು - ಎಂ ಜಿ ದೇಶಪಾಂಡೆ
ಖ್ಯಾತ ಸಾಹಿತಿಗಳು,ಬೀದರ.