ಪ್ರಭುದ್ಧ ರಾಜಕಾರಣಿ ಖರ್ಗೆಯವರು ಕುಂಭಮೇಳದ ಕುರಿತು ಅಪ್ರಭುದ್ಧತೆ ಪ್ರದರ್ಶನ
ಪ್ರಭುದ್ಧ ರಾಜಕಾರಣಿ ಖರ್ಗೆಯವರು ಕುಂಭಮೇಳದ ಕುರಿತು ಅಪ್ರಭುದ್ಧತೆ ಪ್ರದರ್ಶನ
ಕಲಬುರಗಿ: ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಬ ಮೇಳವು ಈ ವರ್ಷದ ವಿಶೇಷತೆಯನ್ನು ಹೊಂದಿದೆ. ನೂರಾರು ವರ್ಷಗಳಿಂದ ತ್ರೀವೇಣಿ ಸಂಗಮದಲ್ಲಿ ನಡೆಯುವ ಕುಂಬಮೇಳಕ್ಕೆ ದೇಶ ವಿದೇಶಗಳಿಂದ ಕೋಟ್ಯಾತಂಡಿ ಜನರು ಬರುತ್ತಾರೆ. ಆದರೆ ಪುಣ್ಯಸ್ನಾನದ ಕುರಿತು ಮಲ್ಲಿಕಾರ್ಜುನ ಖರ್ಗೆವರು ಮಾತನಾಡಿ ತಮ್ಮ ಅಪ್ರಭುದ್ಧತೆಯನ್ನು ಹೊರಹಾಕಿದ್ದಾರೆ ಎಂದು ಬಿಜೆಪಿ ಕಲಬುರಗಿ ನಗರ ಓಬಿಸಿ ಮೋರ್ಚಾದ ಅಧ್ಯಕ್ಷ ದೇವಿಂದ್ರ ದೇಸಾಯಿ ಟೀಕಿಸಿದ್ದಾರೆ.
ಝಾರ್ಕಾಂಡದಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ನಮ್ಮ ಕಲಬುರಗಿ ಜಿಲ್ಲೆಯವರಾದ ಡಾ. ಖರ್ಗೆವಯರು ಯಾರನ್ನೋ ಟೀಕಿಸಲು ಹೋಗಿ ಕೋಟ್ಯಾಂತರ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಮಾಡನಾಡಿರುವುದು ಅವರಿಗೆ ಶೋಭೆ ತರುವುದಲ್ಲ.
ಅವರೊಬ್ಬ ಪ್ರಭುದ್ಧ ರಾಜಕಾರಣಿ, ಅವರು ಮಾತನಾಡಬೇಕಾದರೆ ಎದುರಾಗಳ ಬಾಯಿ ಮುಚ್ಚಿಸುವಂತಹ ತಾಕತ್ತು ಅವರಲ್ಲಿ ಇದೆ ಎಂದು ರಾಜಕೀಯವ ವಲಯದಲ್ಲಿ ಕೇಳಿ ಬರುವ ಮಾತುಗಳು . ಆದರೆ ತ್ರೀವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರೆ ನಿಮ್ಮ ಪಾಪಗಳು ತೊಳೆಯುವುದಿಲ್ಲ, ಬಡತನ ನಿರ್ಮೂಲನೆಯಾಗುವುದಿಲ್ಲ, ನಿರುದ್ಯೋಗ ಹೋಗುವುದಿಲ್ಲ ಎಂಬ ಹೇಳಿಕೆ ಕಂಡರೆ ಅವರು ಸಂಗತದಿಂದ ಭ್ರಮನಿರಸರಾಗಿದ್ದಾರೆಯೇ? ಎಂಬ ಅನುಮಾಗಳು ಕಂಡು ಬರುತ್ತದೆ. ಅಪ್ರಬುದ್ಧ ರಾಜಕಾರಣಿಯಾ ರಾಹುಲ ಗಾಂಧಿಯವರು ಇದೇ ರೀತಿ ಹೇಳಿಕೆ ನೀಡುವುದರಲ್ಲಿ ನಿಸೀಮರು. ರಾಹುಲ ಗಾಂಧಿ ಅವರು ಮಾತನಾಡಿದರೆ ಅವರಲ್ಲಿ ಪ್ರಬುದ್ಧತೆ ಎಂತಹದು ಎನ್ನುವುದು ಎದ್ದು ಕಾಣತ್ತದೆ. ಅವರ ಸಂಗತ ಬೆಳೆಸಿ ಡಾ. ಮಲ್ಲಿಕಾರ್ಜುನ ಖರ್ಗೆಯವರು ಕೆಟ್ಟರೆ? ಎಂಬ ಅನುಮಾನ ಮೂಡಲಾರಂಭಿಸಿದೆ.
ಇತರೆ ಅನ್ಯಕೋಮಿನ ಜನರು ತಮ್ಮ ಧಾರ್ಮಿಕ ಕೇಂದ್ರಗಳಿಗೆ ಹೋಗಿ ಭೇಟಿ ನೀಡಿ ತಮ್ಮ ಶ್ರದ್ಧೆಯನ್ನು ಸಲ್ಲಿಸಿ ಬರುತ್ತಾರೆ, ಅದು ಅವರ ನಂಬಿಕೆಯಾಗಿದೆ. ಅದರಂತೆ ಭಾರತದಲ್ಲಿ ಅನೇಕ ವರ್ಷಗಳಿಂದ ತ್ರೀವೇಣಿ ಸಂಗಮಗಳಲ್ಲಿ ಪುಣ್ಯಸ್ನಾನ ಮಾಡಿ ಪಾವನರಾಗುತ್ತೇವೆ ಎಂಬ ಭಾವನೆ ಇಲ್ಲಿನ ಭಕ್ತರಂದ್ದಾಗಿದೆ. ಆದರೆ ಖರ್ಗೆಯವರು ಯಾವುದೋ ಕಾರಣ ಇಟ್ಟುಕೊಂಡು ಮಾತನಾಡುವಾಗ ಧಾರ್ಮಿಕ ಭಾವನೆಗೆ ಧಕ್ಕೆ ಬರಬಹುದೇ ಎನ್ನುವ ಪರಿವಿಲ್ಲದೇ ಮಾತನಾಡಿ ತಮ್ಮ ಅಪ್ರಬುದ್ಧತೆ ಪ್ರದರ್ಶನ ಮಾಡಿದ್ದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಲ್ಲ. ಅವರ ಪುತ್ರನಿಗೆ ಪ್ರತಿ ವಿಷಯದಲ್ಲಿ ವಿರೋಧ ವ್ಯಕ್ತ ಪಡಿಸುವ ಬಾಯಿಚಪಲ ಇದೆ ಎಂಬುವುದು ಜನರಲ್ಲಿ ಕೇಳಿ ಬರುವ ಮಾತಾಗಿದೆ. ಆದರೆ ಡಾ. ಖರ್ಗೆಯವರು ತಮ್ಮ ಪುತ್ರನಂತೆ ಹಾಗೂ ರಾಹುಲ ಗಾಂಧಿಯAಥೆೆ ತಮ್ಮ ಬಾಯಿ ಚಪಲಕ್ಕೆ ನೀರಿನಲ್ಲಿ ಮುಳುಗಿದರೆ ಬಡತನ ನಿಮೂರ್ಲನೆ ಯಾಗಿತೇ? ಎಂಬು ಹೇಳಿರುವುದು ಕಂಡರೆ ಅವರು ಕೂಡ ಮಾನಸಿಕಸ್ಥಿತಿ ಕಳೆದು ಕೊಂಡರೆ? ಎಂಬು ಅನುಮಾನ ಬರಲು ಆರಂಭಿಸುತ್ತದೆ.
ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿರುವ ಭಾರತೀಯರಲ್ಲಿ ಕೋಟ್ಯಾಂತರ ಜನರು ಇದ್ದಾರೆ. ದೇಶದಲ್ಲಿನ ಅನೇಕ ಅನ್ಯಕೋಮಿನ ಜನರು ಯಾತ್ರೆಗೆ ಹೋಡುತ್ತಾರೆ. ಅವರಲ್ಲಿ ಪಣ್ಯಪಾಪಗಳು ಇಲ್ಲವೇ?. ಧರ್ಮಗರುಗಳನ್ನು ಕಾಣಲು ಸಾವಿರಾರು ಮೈಲಿ ಹೋಗಿ ಬರುವ ಅನುಯಾಯಿಗಳು ಅವರಲ್ಲಿ ಪುಣ್ಯಪಾಪಗಳ ನಂಬಿಕೆ ಇಲ್ಲವೇ? ಎಂಬ ಪ್ರಶ್ನೆಗಳು ಬರುತ್ತವೆ.
ಪ್ರಬುದ್ಧ ರಾಜಕಾರಣಿ ಎನ್ನಿಸಿಕೊಂಡಿರುವ ಡಾ. ಮಲ್ಲಿಕಾರ್ಜುನ ಖರ್ಗೆಜೀ ಅವರು ಇನ್ನಾದರೂ ಅಪ್ರಬುದ್ಧತ್ವ ಹೊಂದಿರುವ ಜನರನ್ನು ದೂರವಿಟ್ಟು ತಮ್ಮ ಘನತೆ ಗೌರವ ಕಾಪಾಡಿಕೊಳ್ಳಲಿ. ಯಾರನ್ನೋ ಟೀಕಿಸಲು ಹೋಗಿ ತಾವು ಜನರ ನಗೆಪಾಟಲಿಗಿಡಾಗಬೇಡಿ ಎಂದು ದೇವಿಂದ್ರ ದೇಸಾಯಿ ಕಲ್ಲೂರ ಒತ್ತಾಯಿಸಿದ್ದಾರೆ.