ಕೊಡ್ಲಾ ಉರಿಲಿಂಗ ಪೆದ್ದಿ ಚತುರ್ಥ ಮಠದ ಪೂಜ್ಯ ಶ್ರೀ ಡಾ ನಂಜುಂಡ ಮಹಾಸ್ವಾಮಿಗಳ ನಿಧನಕ್ಕೆ ಡಾ ಅಂಬಾರಾಯ ಅಷ್ಠಗಿ ಕಂಬನಿ

ಕೊಡ್ಲಾ ಉರಿಲಿಂಗ ಪೆದ್ದಿ ಚತುರ್ಥ ಮಠದ ಪೂಜ್ಯ ಶ್ರೀ ಡಾ ನಂಜುಂಡ ಮಹಾಸ್ವಾಮಿಗಳ ನಿಧನಕ್ಕೆ ಡಾ ಅಂಬಾರಾಯ ಅಷ್ಠಗಿ ಕಂಬನಿ

ಕೊಡ್ಲಾ ಉರಿಲಿಂಗ ಪೆದ್ದಿ ಚತುರ್ಥ ಮಠದ ಪೂಜ್ಯ ಶ್ರೀ ಡಾ ನಂಜುಂಡ ಮಹಾಸ್ವಾಮಿಗಳ ನಿಧನಕ್ಕೆ ಡಾ ಅಂಬಾರಾಯ ಅಷ್ಠಗಿ ಕಂಬನಿ

ಕಲಬುರಗಿ : ಕೊಡ್ಲಾದ ಉರಿಲಿಂಗ ಪೆದ್ದಿ ಮಠದ ಪರಮಪೂಜ್ಯ ಡಾ॥ಶ್ರೀ ನಂಜುಂಡ ಮಹಾಸ್ವಾಮೀಜಿಗಳವರು ಲಿಂಗೈಕ್ಯರಾದ ಸುದ್ದಿ ಮನಸ್ಸಿಗೆ ಅತೀವ ದುಃಖವುಂಟು ಮಾಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಯವರು ಕಂಬನಿ ಮಿಡಿದಿದ್ದಾರೆ.

ಪೂಜ್ಯ ಶ್ರೀಗಳ ಅಗಲಿಕೆಯಿಂದ ಕಲ್ಯಾಣ ಕರ್ನಾಟಕದ ಶರಣ ಪರಂಪರೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಈ ಭಾಗದಲ್ಲಿ ಬಸವಾದಿ ಶರಣರ ತತ್ವಗಳನ್ನು ಪ್ರಚಾರ ಮಾಡುವ ಮೂಲಕ ಪೂಜ್ಯರು ವಚನಕ್ರಾಂತಿ ಮಾಡಿದ್ದರು. ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ಜೀವನದುದ್ದಕ್ಕೂ ನಡೆಸಿದ ಶ್ರೀಗಳು ನಮ್ಮ ಜಂಬಗಿ ಶರಣರ ಕೇರಿ ಭೋಸಗಾ ಸಂಸ್ಥಾನ ಮಠದ ಮಾರ್ಗದರ್ಶಕರಾಗಿದ್ದರು.

 ಲಿಂಗೈಕ್ಯ ಪೂಜ್ಯರಿಗೆ ಬಸವಾದಿ ಶರಣರು ಸದ್ಗತಿ ನೀಡಲಿ, ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಅವರು ಅಗಲಿಕೆಯ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಡಾ ಅಂಬಾರಾಯ ಅಷ್ಠಗಿ ಪ್ರಾರ್ಥಿಸಿದ್ದಾರೆ.