ಶಾಸಕ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಗೌರವ ಶ್ರೀರಕ್ಷೆ ಪ್ರದಾನ
ನಾಡಿನ ಅಭ್ಯುದಯಕ್ಕೆ ಮಠ ಮಾನ್ಯಗಳ ಕೊಡುಗೆ ಅವಿಸ್ಮರಣೀಯ ಅಲ್ಲಮಪ್ರಭು ಪಾಟೀಲ
ಸೂಗೂರು ಮಠಕ್ಕೆ ₹10ಲಕ್ಷ ಅನುದಾನ ಘೋಷಿಸಿದ ತಿಪ್ಪಣ್ಣಪ್ಪ ಕಮಕನೂರ ಚಿಂಚೋಳಿ: ನಾಡಿನ ಅಭ್ಯುದಯಕ್ಕೆ ಮಠ ಮಾನ್ಯಗಳ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ತಿಳಿಸಿದರು. ಅವರು ಇಲ್ಲಿಗೆ ಸಮೀಪದ ಸೂಗೂರು(ಕೆ) ಗ್ರಾಮದ ರುದ್ರಮುನೀಶ್ವರ ಸಂಸ್ಥಾನ ಹಿರೇಮಠದ ಡಾ. ಚನ್ನರುದ್ರಮುನಿ ಶಿವಾಚಾರ್ಯರ ಜನ್ಮ ವರ್ಧಂತಿ ಮಹೋತ್ಸವ ಪ್ರಯುಕ್ತ ಕಾರ್ತಿಕ ಶಿವ ದೀಪೋತ್ಸವ, ಕನ್ನಡ ನುಡಿ ಹಬ್ಬ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪಾಳು ಬಿದ್ದ ಮಠವನ್ನು ಭೂಕೈಲಾಸವಾಗಿಸಿದ ಶ್ರೇಯಸ್ಸು ಡಾ.ಚನ್ನರುದ್ರಮುನಿ ಶಿವಾಚಾರ್ಯರಿಗೆ ಸಲ್ಲುತ್ತದೆ. ಮಠದಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪ ಪೂರ್ಣಗೊಳಿಸಲು ಶ್ರೀಮಠದ ಜತೆಗೆ ನಿಲ್ಲುತ್ತೇನೆ ಎಂದರು.
ಮಠಗಳು ನಾಡಿನ ಎಲ್ಲಾ ವರ್ಗದ ಜನರಿಗೆ ಅನ್ನ, ಆಶ್ರಯ, ಅಕ್ಷ ಜ್ಞಾನ ಧಾರೆಎರೆದು ತ್ರಿವಿಧ ದಾಸೋದ ಮೂಲಕ ಕರ್ನಾಟಕದ ಗೌರವ ಹೆಚ್ಚಿಸುವ ಕೆಲಸ ಮಠಗಳು ಮಾಡಿವೆ. ಈ ಕೈಂಕರ್ಯ ಹೀಗೆ ಮು.ಮದುವರಿಯಬೇಕಾದರೆ ಮಠಗಳು ಬೆಳೆಯಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಸೂಗೂರು ಮಠಕ್ಕೆ ಪರಿಷತ್ ಸದಸ್ಯರ ಅನುದಾನದಲ್ಲಿ ₹10ಲಕ್ಷ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಮಠಾಧೀಶರು ಸದಾ ಕಾಲ ಒಳ್ಳೆಯವರಿಗೆ ಬೆಳೆಸಬೇಕು. ನಿಮ್ಮಜವಾಬ್ದಾರಿ ಮತ್ತು ಶಕ್ತಿ ಅತ್ಯಂತ ದೊಡ್ಡದಾಗಿದೆ. ಹೀಗಾಗಿ ಮಠಾಧೀಶರು ಆಶೀರ್ವದಿಸಿದರೆ ಈ ಭಾಗದ ಚಿತ್ರಣ ಬದಲಿಸಲು ಸಾಧ್ಯವಿದೆ ಎಂದರು. ಸದೃಢ ಸಮಾಜ ಕಟ್ಟಲು ಮಠಾಧೀಶರು ಮಾರ್ಗದರ್ಶನ ಮಾಡುತ್ತಿರುಬೇಕು ಎಂದರು. ಸೂಗೂರು ಸಂಸ್ಥಾನ ಹಿರೇಮಠದ ಡಾ.ಚನ್ನರುದ್ರಮುನಿ ಶಿವಾಚಾರ್ಯರು ಮಾತನಾಡಿ ಸಾಮಾಜಿಕ ಕಾಳಜಿ ಮೈಗೂಡಿಕೊಂಡ ನಾಯಕರಾದ ಅಲ್ಲಮಪ್ರಭು ಪಾಟೀಲ ಹಾಗೂ ತಿಪ್ಪಣ್ಣಪ್ಪ ಕಮಕನೂರ ಎಲ್ಲರೊಂದಿಗೆ ಬೆರೆಯುವ ಸರಳ ವ್ಯಕ್ತಿತ್ವ ಹೊಂದಿದ ಜನಪರ ನಾಯಕರಾಗಿದ್ದಾರೆ. ಇಬ್ಬರು ಧುರೀಣರಿಗೆ ಭವಿಷ್ಯದಲ್ಲಿ ಯೋಗ್ಯವಾದ ಸ್ಥಾನಗಳು ಅರಸಿ ಬರಲಿ ಎಂದು ಹಾರೈಸಿದರು. ಹಲಕರ್ಟಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ಚಂದನಕೇರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿದರು. ತೊನಸನಳ್ಳಿಯ ಅಲ್ಲಮಪ್ರಭು ಸಂಸ್ಥಾನಮಠದ ಮಲ್ಲಣ್ಣಪ್ಪ ಮಹಾಸ್ವಾಮೀಜಿ, ಗುಂಡೇಪಲ್ಲಿಯ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು, ಯಲಗೋಳಗ ಶಿದ್ದಲಿಂಗೇಶ್ವರ ಮಠದ ಸೋಮೇಶ್ವರ ಮಹಾಸ್ವಾಮಿಗಳು, ಬೆನಕನಳ್ಳಿ ವಿರಕ್ತ ಮಠದ ಕೇದಾರಲಿಂಗ ದೇವರು ಸಾನಿಧ್ಯ ವಹಿಸಿದ್ದರು. ಕನ್ನಡ ನಾಡು ನುಡಿಯ ಹಿರಿಮೆ ಗರಿಮೆ ಕುರಿತು ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಮಾತನಾಡಿದರು. ಜಿ.ಪಂ. ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ಉದ್ಯಮಿ ಮಲ್ಲಿನಾಥ ಮರತೂರಕರ, ವಜ್ರಪ್ಪ ಬೆಂಗಳೂರು, ಮುಖಂಡರಾದ ಮಲ್ಲಿನಾಥ ಪಾಟೀಲ ಕಾಳಗಿ, ಶೇಖರ ಪಾಟೀಲಕಾಳಗಿ, ವಿಜಯಕುಮಾರ ತುಪ್ಪದ, ಮಲ್ಲಿಕಾರ್ಜುನರಡ್ಡಿ, ಗಜಾನಂದ ಪಾಟೀಲ,ಶರಣು ಪಾಟೀಲ, ಮಹಾಂತೇಶ ಪಾಟೀಲ, ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಶಿವರಾಜ ಪಾಟೀಲ ಗೊಣಗಿ,ವೀರಣ್ಣ ಗಂಗಾಣಿ, ದತ್ತಾತ್ರೆಯ ರಾಯಗೋಳ, ರಾಜಶೇಖರ ಗುಡ್ದಾ, ವೀರೇಶ ಘಂಟಿ ಮೊದಲಾದವರು ಇದ್ದರು. ರಾಜೇಂದ್ರ ಗಡ್ಡಿ ಸ್ವಾಗತಿಸಿದರು. ಭೀಮಾಶಂಕರ ಪಾಟೀಲ ಪ್ರಸ್ತಾವಿಕ ಮಾತನಾಡಿದರು. ಜಗನ್ನಾಥ ಡಿ. ಶೇರಿಕಾರ ನಿರೂಪಿಸಿದರು. ಸಿದ್ದು ಕೇಶ್ವಾರ ವಂದಿಸಿದರು.
450 ಮಂದಿ ನೇತ್ರ ತಪಾಸಣೆ ಡಾ. ಸಂತೋಷ ಪಾಟೀಲಹೆಬ್ಬಾಳರಿಗೆ ದೃಷ್ಟಿ ಸೃಷ್ಟಿ ಪ್ರಶಸ್ತಿ ಪ್ರದಾನ.....ಇದಕ್ಕೂ ಮೊದಲು ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಖ್ಯಾತನೇತ್ರ ತಜ್ಞ ಡಾ.ಸಂತೋಷ ಪಾಟೀಲ ಹೆಬ್ಬಾಳ ಅವರಿಗೆ ಶ್ರೀಮಠದ ವತಿಯಿಂದ ದೃಷ್ಟಿಸೃಷ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಬಿರದಲ್ಲಿ 450 ಜನರ ನೇತ್ರ ತಪಾಸಣೆ ನಡೆಸಲಾಯಿತು. ಜತೆಗೆ ಶಾಸಕ ಅಲ್ಲಮಪ್ರಭು ಪಾಟೀಲರಿಗೆ ಹಾಗೂ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಗೌರವ ಶ್ರೀರಕ್ಷೆ ಹಾಗೂ ಹಾಸ್ಯಕಲಾವಿದ ಗುಂಡಣ್ಣ ಡಿಗ್ಗಿ ಅವರಿಗೆ ಕಲಾ ಭೂಷಣ ಮತ್ತು ಖಾಜಪ್ಪ ಚಂದ್ರಂಪಳ್ಳಿ, ಸಿದ್ದಯ್ಯ ಸ್ವಾಮಿ ಹುಲ್ಸಗೂಡ, ನಾಗೇಂದ್ರ ಮಡಿವಾಳ, ಕಲಾವತಿ ರೇವಣಸಿದ್ದ ಮಡಿವಾಳ, ರಾಜೇಂದ್ರ ಬಂಟನೂರ, ಶಿವಕುಮಾರ ಹಡಪದ ಅವರಿಗೆ ಕಾಯಕ ಭೂಷಣ ಪ್ರಶಸ್ತಿ ಪ್ರದಾನಮಾಡಿದರು.
ರಾಜೇಂದ್ರ ಪ್ರಸಾದ, ಉಮೇಶ ಚವ್ಹಾಣ, ಶರಣಯ್ಯ ಸಾಲಿಮಠ, ಹೀನಾಕುಮಾರ ಚವ್ಹಾಣ, ಶರಣಬಸ್ಸಪ್ಪ ಪಾಟೀಲ, ರಾಜಕುಮಾರ ರಾಜಾಪುರ, ಮಹಾಂತೇಶ ಪಾಟೀಲ, ಮಲ್ಲಿಕಾರ್ಜುನ ರಡ್ಡಿ ಅವರಿಗೆ ಗುರುರಕ್ಷೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ್ ಕೋಬಾಳ, ಪರಶುರಾಮ ಗರೂರು, ರಾಜಕುಮಾರ ರಾಜಾಪುರ, ಜ್ಞಾನೇಶ್ವರ ಬೆಳಕೋಟಾ ಸಂಗೀತ ಸುಧೆ ಹರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಕಲಾ ತಂಡಗಳು, ಶಾಲಾಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.