ಹೋಟೆಲ್ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಗೆ ಸನ್ಮಾನ
ಹೋಟೆಲ್ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಗೆ ಸನ್ಮಾನ
ಕಲಬುರಗಿ: ಜಿಲ್ಲಾ ಹೋಟೆಲ್ ವಸತಿ ಮತ್ತು ಬೇಕರಿ ಮಾಲಕ ರ ಅಸೋಸಿಯೇಷನ್ ಗೆ ನೂತನ ಅಧ್ಯಕ್ಷರಾಗಿ ಆಯ್ಕೆ ಹೊಂದಿದ ಹೋಟೆಲ್ ಉದ್ಯಮಿ ನರಸಿಂಹ ಮೆಂಡನ್ ಅವರಿಗೆ ಅಶೋಕ್ ಬಡದಾಳ ಗುತ್ತೇದಾರ್ ಮತ್ತು ರಾಘವೇಂದ್ರ ಮೈಲಾಪುರ್ ಸನ್ಮಾನಿಸಿದರು.
ಕಲಬುರಗಿಯ ಯಾತ್ರಿಕ್ ನಿವಾಸ ಸಭಾಂಗಣದಲ್ಲಿ ನವೆಂಬರ್ 4ರಂದು ಸನ್ಮಾನ ನೆರವೇರಿಸಿ ಶಾಲು ಹೂಗುಚ್ಛದೊಂದಿಗೆ ಅಭಿನಂದಿಸಲಾಯಿತು. ಕಲ್ಬುರ್ಗಿ ಜಿಲ್ಲೆಯ ಹೋಟೆಲ್ ವಸತಿ ಮತ್ತು ಬೇಕರಿ ಉದ್ಯಮದ ಬೆಳವಣಿಗೆಗೆ ಅಸೋಸಿಯೇಷನ್ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ಕಲಬುರಾಗಿ ಜಿಲ್ಲೆ ಹೆಸರು ಗಳಿಸಲಿ ಎಂದು ಅಶೋಕ್ ಗುತ್ತೇದಾರ್ ಬಡದಾಳ ಶುಭಕೋರಿದರು. ಜಿಲ್ಲಾ ಅಸೋಸಿಯೇಷನ್ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಪೂರ್ಣ ಬೆಂಬಲದೊಂದಿಗೆ ಸಹಕರಿಸುವುದಾಗಿ ರಾಘವೇಂದ್ರ ಮೈಲಾಪುರ ಹೇಳಿದರು. ಈ ಸಂದರ್ಭದಲ್ಲಿ ಆಕಾಶವಾಣಿ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಹೋಟೆಲ್ ಅಸೋಸಿಯೇಷನ್ ಖಜಾಂಚಿ ಸುನಿಲ್ ಶೆಟ್ಟಿ ನರೇಂದ್ರ ಮೋದಿ ವಿಚಾರ ಮಂಚ್ ನ ರಾಜ್ಯಾಧ್ಯಕ್ಷರಾದ ಶಿವರಾಜ್ ಕೋಟ್ಯಾನ್, ಬೇಕರಿ ಉದ್ಯಮಿ ಮೊಯಿನುದ್ದೀನ್ ಉಪಸ್ಥಿತರಿದ್ದರು.