ಕನ್ನಡ ಹೃದಯ ಭಾಷೆ -ಬಿ.ಹೆಚ್.ನಿರಗುಡಿ

ಕನ್ನಡ ಹೃದಯ ಭಾಷೆ -ಬಿ.ಹೆಚ್.ನಿರಗುಡಿ

ಕನ್ನಡ ಹೃದಯ ಭಾಷೆ -ಬಿ.ಹೆಚ್.ನಿರಗುಡಿ 

 ಕಲಬುರಗಿ : ನಾವು ಪ್ರತಿಯೊಬ್ಬರು ಪ್ರತಿನಿತ್ಯ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು ಆಗ ಮಾತ್ರ ನಾವು ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯ ವಾಗುತ್ತದೆ ಎಂದು ಪ್ರಾಚಾರ್ಯರಾದ ಬಿ ಎಚ್ ನಿರಗುಡಿ ಹೇಳಿದರು.

ನಗರದ ಸತ್ಯಂ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ರಾಜ್ಯೋತ್ಸವ ಆಚರಣೆ ತುಂಬಾ ಸಂಭ್ರಮದೊಂದಿಗೆ ನಡೆಯಿತು.ಕನ್ನಡ ಹೃದಯ ಭಾಷೆ, ಪ್ರೀತಿಯ ಭಾಷೆ ನಾವು ಕನ್ನಡ ಭಾಷೆಯ ಮೂಲಕ ಶಿಕ್ಷಣ ಪಡೆದರೆ ನಮಗೆ ಮೈಗೆಹತ್ತುತದೆ. ಕನ್ನಡ ಭಾಷೆಯ ಜೊತೆಗೆ ಬೇರೆ ಭಾಷೆಯನ್ನು ಗೌರವಿಸಬೇಕು ಪ್ರೀತಿಸಬೇಕು ಮನುಷ್ಯನಿಗೆ ಅನೇಕ ಭಾಷೆಗಳ ಜ್ಞಾನ ಹೊಂದಬೇಕಾದದ್ದು ಅವಶ್ಯಕತೆ ಇದೆ ಇವತ್ತಿನ ಸಂದರ್ಭದಲ್ಲಿ ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನ ಹಾಗೂ ಗೌರವವಿದೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಹಾಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ಹೊಂದಿದೆ ಅತ್ಯಂತ ಶ್ರೀಮಂತ ಭಾಷೆ ಕನ್ನಡವಾಗಿದೆ ಎಂದು ನಿರಗುಡಿ ಹೇಳಿದರು,

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಮಂಜುನಾಥ ಕಲಾಲ್, ರೂಪಾ ಕುಲಕರ್ಣಿ, ನಿರ್ಮಲಾ ಕಣಮುಸೆ,ರಾಜೇಶ್ರೀ ಸಾಲಿಮಠ, ಉಮೇಶ್ ಚೌದರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.