ಸಂಗಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು

ಸಂಗಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು

 ಸಂಗಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು

ನಮ್ಮ ಉಸಿರೇ ಕನ್ನಡಮಯವಾಗಬೇಕು: ಮಹಾದೇವಮ್ಮಾತಾಯಿ

ಕಮಲನಗರ: ಕಮಲನಗರ ತಾಲೂಕಿನ ಖೇಡ ಸಂಗಮ ನೀಲಾಂಬಿಕ ಆಶ್ರಮದ ಡಾ! ಚೆನ್ನಬಸವ ಪಟ್ಟದ್ದೇವರು ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಪೂಜ್ಯ ಡಾಕ್ಟರ್ ಮಹಾದೇವಮ್ಮಾ ತಾಯಿಯವರು ಎಲ್ಲಾ ಕನ್ನಡದ ಕಟ್ಟಾಳುಗಳನ್ನು ನೆನಪಿಸಿ ಕನ್ನಡದ ಭಾಷೆ ಬೆಳವಣಿಗೆ ಕುರಿತು ಮಾತನಾಡಿದರು. 

ಕನ್ನಡದ ಬಗ್ಗೆ ಅಭಿಮಾನ ಪ್ರೀತಿ ಒಲವು ಪ್ರತಿಯೊಬ್ಬರಲ್ಲಿ ಮೈಗೂಡಿಸಿಕೊಂಡು ಬದುಕಬೇಕು. ಕನ್ನಡ ಅಭಿಮಾನ ಉಸಿರಿರುವವರೆಗೆ ಉಳಿಯಬೇಕು ಎಂದು ನುಡಿದರು.

ಮುಖ್ಯ ಗುರುಗಳಾದ ಸಂಜು ಕುಮಾರ್ ಮೇಂಗಾ ಶಾಲಾ ಮುಖ್ಯ ಅತಿಥಿಗಳಾದ ಶ್ರೀ ಶಿವಕುಮಾರ್ ಹಿರೇಮಠ ಉಪಸ್ಥಿತಿಯಲ್ಲಿದ್ದು ಕರ್ನಾಟಕ ರಾಜ್ಯೋತ್ಸವದ ಬಗ್ಗೆ ಕುರಿತು ಹಿರೇಮಠ ಸರ್ ಮಾತನಾಡಿದರು. ಶಾಲೆಯ ಮಕ್ಕಳು ಕರ್ನಾಟಕ ರಾಜ್ಯೋತ್ಸವದ ಬಗ್ಗೆ ನೃತ್ಯ ಮಾಡಿದರು. 

 ಈ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಸಿಬ್ಬಂದಿ ವರ್ಗದವರು ಶಾಲಾ ಶಿಕ್ಷಕರು ಇದ್ದರು.

ಈ ಕಾರ್ಯಕ್ರಮವು ಶ್ರೀಮತಿ ರೇಷ್ಮಾ ಹೊಳೆಸಮುದ್ರೆ ಅವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.