ಶಾಲಾ ಕಟ್ಟಡ ದುರಸ್ತಿಗೆ ಅನುದಾನ ನೀಡಿ: ಸಚಿವರಿಗೆ ಹಣಮಂತ ಚವ್ಹಾಣ ಮನವಿ
ಶಾಲಾ ಕಟ್ಟಡ ದುರಸ್ತಿಗೆ ಅನುದಾನ ನೀಡಿ: ಸಚಿವರಿಗೆ ಹಣಮಂತ ಚವ್ಹಾಣ ಮನವಿ
ಯಾದಗಿರ : ಯಾದಗಿರ ತಾಲೂಕಿನ ಸರಕಾರಿ ಕಿ.ಪ್ರಾ. ಶಾಲೆ ಮುಂಡರಗಿ ತಾಂಡಾ (ಅಶೋಕನಗರ) ಶಾಲಾ ಕೊಠಡಿಗಳು ಹಾಗೂ ಶೌಚಾಲಯಗಳ ರಿಪೇರಿ / ದುರಸ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಗ್ರಾಮದ ಮುಖಂಡ ಹಾಗೂ ಎನ್.ಎಸ್.ಯು.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಣಮಂತ ಆರ್. ಚವ್ಹಾಣ ಆಗ್ರಹಿಸಿದರು.
ನಗರಕ್ಕೆ ಆಗಮಿಸಿದ್ದ ಶಾಲಾಶಿಕ್ಷಣ ಹಾಗೂಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿ, ಮುಂಡರಗಿ ತಾಂಡ (ಅಶೋಕನಗರ) ಸರಕಾರಿ ಕಿ.ಪ್ರಾ. ಶಾಲೆ ಶಾಲಾ ಕೊಠಡಿಗಳು ಹಾಗೂ ಶೌಚಾಲಯಗಳ ರಿಪೇರಿ / ದುರಸ್ತಿ ಅವಶ್ಯವಿದ್ದು, ಕೋಣೆಗಳು ಸೋರುತ್ತಿದ್ದು, ಬೇರೆ ಕೋಣೆಯಲ್ಲಿ ಪಾಠ ಮಾಡುತ್ತಿದ್ದು, ಮಕ್ಕಳ ಪಾಠ-ಬೋಧನೆಗೆ ತೊಂದರೆ ಆಗಿದೆ. ಈ ಬಗ್ಗೆ ಮಾನ್ಯ ಶಾಸಕರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಕ್ರಮವಾಗಿರುವುದಿಲ್ಲ.
ಆದ ಕಾರಣ ಶಾಲಾ ಕೊಠಡಿಗಳು ಹಾಗೂ ಶೌಚಾಲಯಗಳ ರಿಪೇರಿ / ದುರಸ್ತಿ ಅವಶ್ಯವಿದ್ದು, ಈ ಕೂಡಲೇ ರೂ. ೪.೯೯ ಲಕ್ಷ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಕೆಕೆಆರ್‌ಡಿಬಿಯಿಂದ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯಕುಮಾರ ಕೌಲಿ ಇದ್ದರು.