ಕಮಲನಗರ | ಕರ್ನಾಟಕ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಪೂರ್ವಭಾವಿ ಸಭೆ
ಕಮಲನಗರ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಪೂರ್ವಭಾವಿ ಸಭೆ
2024ನೇ ಸಾಲಿನ ನವೆಂಬರ 1ರ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ತಹಶೀಲ್ದ ಕಚೇರಿಯಲ್ಲಿ ಪೂರ್ವ ಸಿದ್ಧತಾ ಸಭೆ ಜರುಗಿತ್ತು.
ತಹಸ್ಹೀಲ್ದಾರ್ ಅಮಿತ ಕುಮಾರ್ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಪೂರ್ವ ಸಿದ್ಧತಾ ಸಭೆ ನಡೆಯಿತು.
ಸಭೆಯಲ್ಲಿ ರಾಜ್ಯೋತ್ಸವ ಆಚರಣೆ ಕುರಿತು ಮಾತನಾಡಿದರು.
ಕುಡಿಯುವ ನೀರು ಮಕ್ಕಳಿಗೆ ಉಪಹಾರ ಮತ್ತು ವೇದಿಕೆಯಲ್ಲಿ ಗಣ್ಯರ ವ್ಯವಸ್ಥೆ ಮಾಡಬೇಕು. ಇದಲ್ಲದೆ ಪಟ್ಟಣದ ವಿವಿಧ ವೃತ್ತಗಳಲ್ಲಿ ಸ್ವಚ್ಛತೆ ಕೈಗೊಂಡು ದೀಪಾಲಂಕಾರ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಪಂ ಸಹಾಯಕ ನಿರ್ದೇಶಕ ಹಣಮಂತರಾವ ಕೌಟಗೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಸಜ್ಜನ್ ಶೆಟ್ಟಿ ಕಸಾಪ ತಾಲೂಕಾಧ್ಯಕ್ಷ ಪ್ರಶಾಂತ ಮಠಪತಿ ತಾಲೂಕು ಆರೋಗ್ಯಾಧಿಕಾರಿ,ಡಾ.ಗಯತ್ರಿ ವಿಜಯಕುಮಾರ್ ವಲಯ ಅರಣ್ಯ ಅಧಿಕಾರಿ ಪ್ರಕಾಶ್ ಬಿ ವಯೋ ನಿವೃತ್ತ ಪ್ರಾಂಶುಪಾಲ ಶಿವಣಕರ ಪಿಎಸ್ಐ ಚಂದ್ರಶೇಖರ್ ನಿರ್ಣೆ,ಸಿಪಿಐ ಅಮರೆಪ್ಪ, ಪಿಡಿಓ ರಾಜಕುಮಾರ ತಂಬಾಕೆ, ಶಿವಕುಮಾರ್ ಬಿಡವೆ, ಪಶುವೈದ್ಯ ಡಾ. ಸುರೇಶ ದಿನಕರ್, ಎ ಎಚ್ ಒ ರೇಣುಕಾ,ದೀಲಿಪ ಮುದಾಳೆ,ಜೆಇ ಸೋಮನಾಥ ನಿಲಂಗೆ, ರಮೇಶ್ ಕರವೇ ಅಧ್ಯಕ್ಷ ಸುಭಾಷ್ ಗಾಯಕವಾಡ, ಧನರಾಜ್ ಭವರಾ, ಸಿಡಿಪಿಒ ಎಮಲಪ್ಪ ಡಿಕೆ ಹಾಗೂ ಇನ್ನಿತರರಿದ್ದರು.