ಶಹಾಬಾದನಲ್ಲಿ ಗೋ ಶಾಲೆ ಪ್ರಾರಂಭ

ಶಹಾಬಾದನಲ್ಲಿ ಗೋ ಶಾಲೆ ಪ್ರಾರಂಭ

ಶಹಾಬಾದನಲ್ಲಿ ಗೋ ಶಾಲೆ ಪ್ರಾರಂಭ

ಶಹಾಬಾದ: ನಗರದ ಹಳೆ ಶಹಾಬಾದ ಅಯೋಧ್ಯ ನಗರದಲ್ಲಿ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ನೂತನವಾಗಿ ಗೋ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ. ಪೂಜ್ಯ ಶಂಕ್ರಯ್ಯ ಸ್ವಾಮಿ ಅವರ ಬಹುದಿನಗಳ ಆಸೆಯಂತೆ, ಗೋವುಗಳ ಸಂತತಿ ಉಳಿಸಲು, ಗೋವುಗಳ ಮಹತ್ವ ಜನರಿಗೆ ತಿಳಿಸಲು, ಗೋವುಗಳನ್ನು ಕಸಾಯಿ ಖಾನೆಯಿಂದ ಉಳಿಸಲು ಗೋ ಶಾಲೆ ಪ್ರಾರಂಭಿಸಿದ್ದು, ಸಧ್ಯ ಐದು ಗೋವುಗಳು ಗೋ ಶಾಲೆಯಲ್ಲಿ ಇವೆ. ಅವುಗಳಿಗೆ ಇರಲು ವಿಶೇಷ ಶೇಡ್, ಮೇವಿನ ವ್ಯವಸ್ಥೆಯನ್ನು ಮಠದ ಆವರಣದಲ್ಲಿ ಕಲ್ಪಿಸಲಾಗುತ್ತಿದ್ದು, ಆಸಕ್ತರು ಗೋವುಗಳನ್ನು ದಾನವಾಗಿ ನೀಡಲು, ಗೋಗ್ರಾಸ್ ನೀಡಲು ಮುಂದೆ ಬರುವಿಕೆಗಾಗಿ ಪೂಜ್ಯ ಶಂಕ್ರಯ್ಯ ಸ್ವಾಮಿ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9900405457 ಸಂಪರ್ಕಿಸಲು ಕೋರಲಾಗಿದೆ.

ಶಹಾಬಾದ್ ಸುದ್ದಿ :- ನಾಗರಾಜ್ ದಂಡಾವತಿ