ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥಯಾತ್ರೆ ಶಹಾಬಾದ್ಭ,ವ್ಯ ಸ್ವಾಗತ

ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥಯಾತ್ರೆ ಶಹಾಬಾದ್ಭ,ವ್ಯ ಸ್ವಾಗತ

ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥಯಾತ್ರೆ : ಉತ್ಸವ 

|ತಾಲೂಕು ಆಡಳಿತದ ವತಿಯಿಂದ ಭವ್ಯ ಸ್ವಾಗತ|

ಶಹಾಬಾದ : - ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಉತ್ಸವದ ರಥಯಾತ್ರೆ ಯನ್ನು ನಗರದ ವಾಡಿ-ಚಿತ್ತಾಪುರ ಕ್ರಾಸ್ ನಲ್ಲಿ ಶಹಾಬಾದ ತಾಲೂಕ ಆಡಳಿತ ವತಿಯಿಂದ ಗ್ರೇಡ್ 2 ತಹಸೀಲ್ದಾ‌ರ ಗುರುರಾಜ ಸಂಗಾವಿ ಅವರು ಕಲಬುರಗಿ ಜಿಲ್ಲೆಯ ಶಹಾಬಾದ ತಾಲ್ಲೂಕಿಗೆ ಸ್ವಾಗತಿಸಿ, ರಥದಲ್ಲಿದ್ದ ರಾಣಿ ಚನ್ನಮ್ಮ ಪುತ್ಥಳಿಗೆ ಹಾರ ಅರ್ಪಿಸಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. 

ತಹಸೀಲ್ದಾ‌ರ್ ಅವರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ವಿಜಯಗಳಿಸಿ 200 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ರಥಯಾತ್ರೆ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿ, ಸರ್ಕಾರವು ಉತ್ಸವಕ್ಕೆ ಅದ್ಧೂರಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ, ರಾಣಿ ಚನ್ನಮ್ಮನ ಸೈನ್ಯವು ಕಿತ್ತೂರು ಕೋಟೆಯ ಹೊರಗೆ ಈಸ್ಟ್ ಇಂಡಿಯಾ ಕಂಪನಿಯ ಸೈನಿಕರನ್ನು ಸೋಲಿಸಿದ ವಿಶೇಷ ಸಂದರ್ಭವಾಗಿದೆ, ಕಿತ್ತೂರು 200 ನೇ ವರ್ಷದ ವಿಜಯೋತ್ಸವ ರಾಷ್ಟ್ರಮಟ್ಟದ ಉತ್ಸವ ವಾಗಬೇಕು ಎಂದರು. 

ಪೌರಾಯುಕ್ತ ಕೆ. ಗುರುಲಿಂಗಪ್ಪ ಮಾತನಾಡಿ, ಬ್ರಿಟಿಷರ ವಿರುದ್ಧ ರಾಣಿ ಚನ್ನಮ್ಮನ ವಿಜಯದ 200ನೇ ವರ್ಷದ ಸ್ಮರಣಾರ್ಥ ಐತಿಹಾಸಿಕ ಕಿತ್ತೂರು ಉತ್ಸವವನ್ನು ಅಕ್ಟೋಬರ್ 22 ರಿಂದ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿದೆ, ಈ ಉತ್ಸವದಲ್ಲಿ ರಾಜ್ಯದ ಲಕ್ಷಾಂತರ ಜನ ಕನ್ನಡಿಗರು ಭಾಗವಹಿಸಲಿದ್ದಾರೆ ಎಂದರು. 

ನಂತರ ಹೆದ್ದಾರಿಯ ಮೂಲಕ ಯಾತ್ರೆಯು ಭಂಕೂರ, ಮರತೂರ, ಧರ್ಮಾಪೂರದ ವರೆಗೆ ಸಂಚರಿಸಿ ಕಲಬುರಗಿ ತಹಶೀಲ್ದಾರ್ ಕೆ. ಆನಂದ ಶೀಲ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಸ್ವಾಮಿ ಹಿರೇಮಠ, ಸಿಡಿಪಿಒ ಡಾ. ವಿಜಯಲಕ್ಷ್ಮಿ ಹೇರೂರ, ಪಿಎಸ್ಐ ಚಂದ್ರಕಾಂತ ಮಕಾಲೆ, ಶಕುಂತಲಾ ಸಾಕರೆ, ಮೀನಾಕ್ಷಿ ಗುಂಡಗುರ್ತಿ, ಸೇರಿದಂತೆ ಕಂದಾಯ ಇಲಾಖೆಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ