ಕುಸನೂರನಲ್ಲಿ ಪ್ರತಿಯೊಬ್ಬ ವಿದ್ಯುತ ಬಳಕೆದಾರನಿಗೆ 30 ರಿಂದ 40 ಸಾವಿರವರೆಗೂ ಬಿಲ್ಲ್

ಕುಸನೂರನಲ್ಲಿ ಪ್ರತಿಯೊಬ್ಬ ವಿದ್ಯುತ ಬಳಕೆದಾರನಿಗೆ 30 ರಿಂದ 40 ಸಾವಿರವರೆಗೂ ಬಿಲ್ಲ್ 

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಬ್ರಷ್ಟ ಕಾಂಗ್ರೆಸ್ ಸರ್ಕಾರ ಜನರ ಜೋಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಮಂಜು ಮಠ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜನರಿಗೆ ಗೃಹ ಜ್ಯೋತಿ ಯೋಜನೆಯ ಮೂಲಕ ಪ್ರತಿ ತಿಂಗಳು 200 ಯುನಿಟ್‌ಗಳವರೆಗೂ ಉಚಿತವಾಗಿ ವಿದ್ಯುತ ನೀಡುತ್ತೇವೆ ಎಂದು ಹೇಳಿರುತ್ತಾರೆ. 

ಆದರೆ ಕಲಬುರಗಿ ಜಿಲ್ಲೆಯ ಕುಸನೂರ ಗ್ರಾಮದ ಜನರಿಗೆ ವಿದ್ಯುತ ಬಿಲ್‌ಗಳನ್ನು ನೋಡಿ ಕರೆಂಟ ಶಾಕ್‌ ಹೊಡೆದಂತಾಗಿದೆ. ಪ್ರತಿಯೊಬ್ಬ ವಿದ್ಯುತ ಬಳಕೆದಾರನಿಗೆ 30 ಸಾವಿರದಿಂದ 40 ಸಾವಿರವರೆಗೂ ವಿದ್ಯುತ ಬಿಲ್‌ಗಳನ್ನು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳು ನೀಡಿರುತ್ತಾರೆ.

ಕಡುಬಡವರು ಹಾಗೂ ದಿನಗೂಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ರೀತಿ ಬಿಲ್‌ಗಳನ್ನು ನೀಡಿದ್ದರೆ, ಜನರು ಯಾರ ಮೊರೆ ಹೋಗಬೇಕೆಂದು ಈ ದಿನ ಗ್ರಾಮದ ಜನರು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.

 ಕುಸನೂರು ಗ್ರಾಮಕ್ಕೆ ಜೆಸ್ಕಾಂ ವಿಭಾಗದ ಅಧಿಕಾರಗಳು ಬಂದು ಜನರಿಗೆ ಭೇಟಿಮಾಡಿ ಎರಡು ದಿನಗಳವರೆಗೆ ಕಾಲವಕಾಶ ನೀಡಬೇಕೆಂದು ಕೇಳಿಕೊಂಡು ಹೋಗಿರುತ್ತಾರೆ.

ಆದಷ್ಟೂ ಬೇಗ ಜನರ ಸಮಸ್ಯೆಗೆ ಪರಿಹರಿಸಬೇಕು, ಸಹಕರಿಸದೆ ಹೋದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಕಲಬುರಗಿ ನಗರದ ಕ.ರ.ವೇ ಜಿಲ್ಲಾ ಗೌರವಾಧ್ಯಕ್ಷರಾದ ಮಂಜು ಮಠ ಕುಸನೂರ ಅವರು ತಿಳಿಸಿರುತ್ತಾರೆ.