ಹೆಗ್ಗಡೆಯವರ ತ್ರಿವಿಧ ದಾಸೋಹ ಶ್ರೇಷ್ಠ ವಾದುದು: ಡಾ. ಸದಾನಂದ ಪೆರ್ಲ

ಹೆಗ್ಗಡೆಯವರ ತ್ರಿವಿಧ ದಾಸೋಹ ಶ್ರೇಷ್ಠ ವಾದುದು: ಡಾ. ಸದಾನಂದ ಪೆರ್ಲ

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಜನ್ಮ ದಿನ - ರಕ್ತದಾನಶಿಬಿರ ಉದ್ಘಾಟನೆ

ಹೆಗ್ಗಡೆಯವರ ತ್ರಿವಿಧ ದಾಸೋಹ ಶ್ರೇಷ್ಠ ವಾದುದು: ಡಾ. ಸದಾನಂದ ಪೆರ್ಲ

ಕಲಬುರಗಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಶರಣ ಪರಂಪರೆಯ ಮಾದರಿಯ ತ್ರಿವಿಧ ದಾಸೋಹವನ್ನು ಅನುಷ್ಠಾನಗೊಳಿಸಿ ಆದರ್ಶ ಪ್ರಾಯರಾಗಿದ್ದಾರೆ ಎಂದು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು. 

   ಕಲಬುರಗಿಯಲ್ಲಿ ನ.25 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ಕಮಲಾಪುರ ಮತ್ತು ಕಲಬುರಗಿ ವತಿಯಿಂದ ಧರ್ಮ ಅಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ 76ನೇ ಜನ್ಮದಿನ ಪ್ರಯುಕ್ತ ಕಮಲಾಪುರ ಯೋಜನಾ ಕಚೇರಿಯಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡುತ್ತ ಆರೋಗ್ಯ, ಶಿಕ್ಷಣ ಮತ್ತು ಧಾರ್ಮಿಕ ಈ ತ್ರಿವಿಧ ದಾಸೋಹಗಳನ್ನು ಕೈಗೊಂಡು ಸಮಾಜದಲ್ಲಿ ಕ್ರಾಂತಿಕಾರಿ ಪರಿವರ್ತನೆಗೆ ಕಾರಣರಾದ ಹೆಗಡೆಯವರ ಸಮಾಜಮುಖಿ ಬದುಕು ಅತ್ಯಂತ ಶ್ರೇಷ್ಠವಾದದ್ದು. ನಾಡಿನ ಉದ್ದಗಲಕ್ಕೂ ಗ್ರಾಮಾಭಿವೃದ್ಧಿ ಯೋಜನೆಯು ವಿವಿಧ ಸಮಾಜ ಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಸರಕಾರಕ್ಕೆ ಸಮಾನಾಂತರವಾಗಿ ಪ್ರಗತಿಗೆ ಕೈ ಜೋಡಿಸಿರುವುದು ಪ್ರಶಂಸನಾ ವಿಚಾರ ವಾಗಿದೆ. ಮಾನವ ಕಲ್ಯಾಣದ ಏಳ್ಗೆಯೆ ಮುಖ್ಯ ಧ್ಯೇಯವಾಗಿ ಇರಿಸಿಕೊಂಡು ಹೆಗ್ಗಡೆಯವರು ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳನ್ನು ಉತ್ತರ ಕರ್ನಾಟಕದಲ್ಲಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾರಿ ಮಾಡುವುದರ ಮೂಲಕ ಡಾ. ಡಿ ವೀರೇಂದ್ರ ಹೆಗಡೆಯವರು ಈ ಭಾಗದ ಅಭ್ಯುದಯಕ್ಕೆ ಕೂಡಾ ದೊಡ್ಡ ಕೊಡುಗೆ ನೀಡಿದ್ದಾರೆ. ಜನ್ಮದಿನವನ್ನು ಹೆಗ್ಗಡೆಯವರ ಅಭಿಮಾನಿಗಳು ಮತ್ತು ಯೋಜನೆಯ ಕಾರ್ಯಕರ್ತರು ರಕ್ತದಾನ ಮಾಡುವ ವಿಧಾಯಕ ಕಾರ್ಯಕ್ರಮದ ಮೂಲಕ ಹೆಗ್ಗಡೆಯವರ 76 ನೇ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಕ್ಕೆ ಎಲ್ಲರಿಗೂ ಅಭಿನಂದನೆ ಎಂದು ಡಾ. ಪೆರ್ಲ ಹೇಳಿದರು.

    ಗ್ರಾಮಾಅಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರರಾದ ಗಣಪತಿ ಮಾಳಂಜಿ ಮಾತನಾಡಿ ಹೆಗ್ಗಡೆಯವರ ಸಮಾಜಮುಖಿ ಕಾರ್ಯಗಳಿಂದ ನಾಡಿನಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಆರ್ಥಿಕ ಸಾಮಾಜಿಕ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಡಲು ಶ್ರೀ ಕ್ಷೇತ್ರದ ಕಾರ್ಯಕ್ರಮಗಳು ಸಮಾಜಕ್ಕೆ ಪೂರಕವಾಗಿದೆ ಮತ್ತು ಅದರಿಂದ ಪ್ರಗತಿಯನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಅನಿಲ್‌ ಕುಮಾರ ಡಾಂಗೆ, ರವಿ ಕುಮಾರ ನೀಲೂರ ಜಿಲ್ಲಾ ಜನಜಾಗೃತಿ ಸದಸ್ಯರು ಜಿಮ್ಸ್‌ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಕೌನ್ಸಿಲರ್‌ ಮಲ್ಲಿಕಾರ್ಜುನ, ಶಬ್ಬಿರ್‌ ಕಮಲಾಪುರ, ತಾಲೂಕು ಯೋಜನಾಧಿಕಾರಿಗಳಾದ ಕಲ್ಲನಗೌಡ ಎಸ್‌, ರಿಯಾಜ್ ಅತ್ತಾರ್ , ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. 

    ರಕ್ತದಾನ ಶಿಬಿರದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಸೂರ್ಯಕಾಂತ ಜಮಾದಾರ್ ಅವರಾದ (ಬಿ) ಯವರು ಮೊದಲಿಗೆ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಲಾಯಿತು. 

30 ಯುನಿಟ್ ರಕ್ತ ಸಂಗ್ರಹ

ಹಿಂಸೆ ಆಸ್ಪತ್ರೆಯ ರತ್ನದಿ ಕೇಂದ್ರಕ್ಕೆ ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕರ್ತರು 30 ಯೂನಿಟ್ ರಕ್ತದಾನ ಮಾಡಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಜನುಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.