ಹತ್ತು ವರ್ಷದಿಂದ ನೆನೆಗುದಿಗೆ ಬಿದ್ದ ಜೆವರ್ಗಿ ತಾಲೂಕ ಫುಡ್ ಪಾರ್ಕ್. ನವಂಬರ್ 1 ರಿಂದ ಫುಡ್ ಪಾರ್ಕ್ ಎದುರುಗಡೆ ಹೋರಾಟಗಾರ ಶಿವಲಿಂಗ ಹಳ್ಳಿ ಅವರಿಂದ ಉಪವಾಸ ಸತ್ಯಾಗ್ರಹ

ಜೇವರ್ಗಿ ಸುದ್ದಿ

ಜೆವರ್ಗಿ ತಾಲೂಕಿನಲ್ಲಿ ಶಾಸಕರ ಹಾಗೂ ಮುಖ್ಯಮಂತ್ರಿಗಳ ನಿರ್ಲಕ್ಷದಿಂದ ಹತ್ತು ವರ್ಷಗಳಿಂದ ನೆನಗೂದಿಗೆ ಬಿದ್ದ ಫುಡ್ ಪಾರ್ಕ್ ನಿರ್ಮಾಣ ಮಾಡಬೇಕೆಂದು ಅಗ್ರಹಿಸಿ ಜೇವರ್ಗಿ ತಾಲೂಕಿನ ನಮ್ಮ ಕರ್ನಾಟಕ ಸೇನಾ ಸಂಘಟನೆಯ ತಾಲೂಕ ಅಧ್ಯಕ್ಷರಾದ ಶಿವಲಿಂಗ ಹಳ್ಳಿಯವರು ವಿಭಿನ್ನ ರೀತಿಯ ಹೋರಾಟಗಳನ್ನು ಹತ್ತು ವರ್ಷಗಳಿಂದ ಶಾಸಕರ ವಿರುದ್ಧ ಹಾಗೂ ಸರಕಾರದ ವಿರುದ್ಧ ಮಾಡುತ್ತಲೆ ಬಂದಿದ್ದಾರೆ ಅದೇ ರೀತಿಯಾಗಿ ಮುಖ್ಯಮಂತ್ರಿ ಅವರಿಗೆ ಧಿಕ್ಕಾರ ಕೂಗುವುದು ಹಾಗೂ ಅಧಿಕಾರಿಗಳಿಗೆ ಸಚಿವರಿಗೆ ಶಾಸಕರಿಗೆ ಮನವಿ ಪತ್ರ ಕೊಡುವುದು ಹಾಗೂ ಉರುಳು ಸೇವೆ ಮಾಡುವುದು ಅದೇ ರೀತಿಯಾಗಿ ತಲೆ ಬೋಳಿಸಿಕೊಂಡು ವಿಭಿನ್ನ ರೀತಿಯ ಹೋರಾಟ ಮಾಡುತ್ತಲೆ ಬಂದಿದ್ದೇವೆ ಎಂದು ನಮ್ಮ ಕರ್ನಾಟಕ ಸೇನಾ ತಾಲೂಕ ಅಧ್ಯಕ್ಷರಾದ ಶಿವಲಿಂಗ ಹಳ್ಳಿಯವರು ಹೇಳಿದರು ಅದೇ ರೀತಿಯಾಗಿ ಜೇವರ್ಗಿ ತಾಲೂಕಿನಲ್ಲಿ ಫುಡ್ ಪಾರ್ಕ್ ನಿರ್ಮಾಣವಾದರೆ ಬೆಂಗಳೂರು ಮುಂಬೈನಂತಹ ಮಹಾನಗರಗಳಿಗೆ ದುಡಿಯಲು ಹೋಗುವ 2000 ಯುವಕರಿಗೆ ಉದ್ಯೋಗ ಸಿಗುತ್ತದೆ ಇದರಿಂದ ಸ್ಥಳೀಯರಿಗೆ ತುಂಬಾ ಅನುಕೂಲವಾಗುತ್ತದೆ ಆದ್ದರಿಂದ ಸಾವಿರಾರು ಕುಟುಂಬಗಳಿಗೆ ಅನುಕೂಲಕರವಾಗಲಿ ಎನ್ನುವ ಉದ್ದೇಶದಿಂದ ಮುಂದಿನ ತಿಂಗಳು ನವಂಬರ್ 1 ರಂದು ಜೇವರ್ಗಿ ತಾಲೂಕಿನ ಫುಡ್ ಪಾರ್ಕ್ ಎದುರುಗಡೆ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ಪ್ರತಿಯೊಬ್ಬ ಗ್ರಾಮೀಣ ಭಾಗದ ಯುವಕರು ಸ್ಥಳೀಯ ನಿರುದ್ಯೋಗಿ ಯುವಕರು ಹಾಗೂ ವಿವಿಧ ಸಂಘಟನೆಯ ಹೋರಾಟಗಾರರು ಹಾಗೂ ಸ್ಥಳೀಯ ಮುಖಂಡರು ರೈತರು ರೈತಪರ ಹೋರಾಟಗಾರರು ಈ ಹೋರಾಟಕ್ಕೆ ಕೈಜೋಡಿಸಬೇಕೆಂದು ನಮ್ಮ ಕರ್ನಾಟಕ ಸೇನಾ ತಾಲೂಕ ಅಧ್ಯಕ್ಷರಾದ ಶಿವಲಿಂಗ ಹಳ್ಳಿಯವರು ತಿಳಿಸಿದರು

ವರದಿ ಜೆಟ್ಟಪ್ಪ ಎಸ್ ಪೂಜಾರಿ