ಶ್ರಮದಿಂದ ಕಾಣದವರ ಹೊಟ್ಟೆ ತುಂಬಿಸುವ ದೇವನೆ ರೈತ -ಸುಭಾಷ ಪೂಜಾರಿ

ಶ್ರಮದಿಂದ ಕಾಣದವರ ಹೊಟ್ಟೆ ತುಂಬಿಸುವ ದೇವನೆ ರೈತ -ಸುಭಾಷ ಪೂಜಾರಿ

ಶ್ರಮದಿಂದ ಕಾಣದವರ ಹೊಟ್ಟೆ ತುಂಬಿಸುವ ದೇವನೆ ರೈತ -ಸುಭಾಷ ಪೂಜಾರಿ

ಶ್ರಮ ಬಿತ್ತಿ, ಬೆವರು ಕಟ್ಟಿ ಕಾಣದವರ ಹೊಟ್ಟೆ ತುಂಬಿಸುವ ದೇವನೆ ರೈತ ಎಂದು ಹುಮನಾಬಾದ ನಗರದ ಶಕುಂತಲಾ ಪಾಟೀಲ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಯಾದ ಸುಭಾಷ ಎಚ್ ಪೂಜಾರಿ ಹೇಳಿದರು. ಕಲಬುರಗಿ ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 242ನೇ ಸೋಮವಾರದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ  

"ರೈತ ದೇಶದ ಬೆನ್ನೆಲುಬು" ವಿಷಯದ ಕುರಿತು ಮಾತನಾಡುತ್ತಾ ಅನ್ನ ಕೊಡುವ ರೈತ, ಗಡಿ ಕಾಯುವ ಸೈನಿಕರ ಶ್ರಮದ ಫಲದಿಂದಲೇ ನಾವೆಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುತಿದ್ದೇವೆ. ಅವರ ತ್ಯಾಗ ಬಲಿದಾನದಿಂದಲೇ ಬಲಿಷ್ಠ ರಾಷ್ಟ್ರವಾಗಿದೆ. ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯ ಗುರುಪಾದಲಿಂಗ ಶಿವಯೋಗಿಗಳು ಕೃಷಿ ವಿಜ್ಞಾನಿಗಳಾಗಿ ನಿರಂತರವಾಗಿ ಸಂಸ್ಕಾರದ ಬೀಜ ಬಿತ್ತುತ್ತಿರುವ ಪೂಜ್ಯರು ಸರ್ವರಿಗೂ ಮಾದರಿಯಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾದ ಹಿರಿಯ ನ್ಯಾಯವಾದಿ ಶಿವಕುಮಾರ ಪಸಾರ ಮಾತನಾಡುತ್ತಾ ಕೆಲವೊಮ್ಮೆ ನಾವು ಮಾಡುವ ಅತಿ ಚಿಕ್ಕ ಸಹಾಯವು ಇನ್ನೊಬ್ಬರಲ್ಲಿ ಅತಿ ದೊಡ್ಡ ಸ್ಥಾನ ಪಡೆಯಬಹುದು. ಅವರ ಬದುಕಿಗೆ ವರದಾನವಾಗಬಹುದು ಹೀಗಾಗಿ ಸಹಾಯ ಮಾಡಲು ಯಾವತ್ತೂ ಹಿಂದೇಟು ಹಾಕಬಾರದು. ಶ್ರೀಮಠದಲ್ಲಿ ನಡೆಯುತ್ತಿರುವಪ್ರತಿವಾರ ಶಿವಾನುಭವಗೋಷ್ಠಿ 

ಕಾರ್ಯಕ್ರಮ ಚಿಕ್ಕದೇನಿಸಿದರು ಹಲವಾರು ಜನರಿಗೆ ಜ್ಞಾನ ಬಿತ್ತುವ ಕಾರ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರೈತ ದಿನಾಚರಣೆಯ ನಿಮಿತ್ಯ ಕೃಷಿ ಪಂಡಿತರಾದ ಪೂಜ್ಯ ಶ್ರೀ ಗುರುಪಾದಲಿಂಗ ಶಿವಯೋಗಿಗಳಿಗೆ ವಿಶೇಷವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಅಂಬಾರಾಯ ಕೋಣೆ, ರೇವಣಸಿದ್ದಯ್ಯ ಶಾಸ್ತ್ರಿ, ಶರಣು ವರನಾಳ, ಶಾಂತು ಕಲಬುರಗಿ, ಆನಂದ ಪಾಟೀಲ, ಕವಿತಾ ದೇಗಾಂವ, ನ್ಯಾಯವಾದಿಗಳಾದ ಚಿದಾನಂದ ಪಾಟೀಲ,ಮಂಜು ಪಾಟೀಲ, ಸಂಗೀತ ಕಲಾವಿದರಾದ ಮಲಕಾರಿ ಪೂಜಾರಿ, ಕುಮಾರಿ ಈಶ್ವರಿ, ಬಲವಂತರಾಯ ಕಣ್ಣೂರ, ಮಲ್ಲಯ್ಯ ಗುತ್ತೇದಾರ, ಶಿವಕುಮಾರ ಸಾವಳಗಿ,ಗುರುರಾಜ ಹಸರಗುಂಡಗಿ, ಸಿದ್ದಣ್ಣ ವಾಡಿ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.