ಶಿಕ್ಷಕ,ಸಾಹಿತಿ, ರಾಜೇಂದ್ರ ಝಳಕಿ
ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಸಾಹಿತಿ, ರಾಜೇಂದ್ರ ಝಳಕಿ
ರಾಜೇಂದ್ರ ಝಳಕಿ ಅವರು ಮೂಲತಃ ಆಳಂದ ತಾಲುಕಿನ ಹಿರೇ ಝಳಕಿ ಗ್ರಾಮದವರು. ಕೊರಬಾ ಮನೆತನದ ತಾಯಿ ,ಚಂದ್ರಭಾಗ ತಂದೆ ಬಸವಣ್ಣಪ್ಪ ಅವರ ಎರಡನೆಯ ಸುಪುತ್ರನಾಗಿ ೧/೫/೧೯೬೭ ರಲ್ಲಿ ಜನಿಸಿದರು. ಎರಡೇ ವರ್ಷದ ಮಗುವಿದ್ದಾಗ
ತಂದೆಯನ್ನು ಕಳೆದುಕೊಂಡರು. ತಾಯಿ ಬಳೆ ವ್ಯಾಪಾರದ, ಕೂಲಿ ಕೆಲಸ ಮಾಡಿ ಸಂಸಾರದ ಭಾರ ಹೊತ್ತಿಕೊಂಡು ಮಗನನ್ನು ಓದಿ ಸಿದ್ದಾರೆ.
ರಾಜೇಂದ್ರರು ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿ , ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಮದಗುಣಕಿಯಲ್ಲಿ , ಹೈಸ್ಕೂಲ ಶಿಕ್ಷಣವನ್ನು ಮಾದನ ಹಿಪ್ಪರಗಾದಲ್ಲಿ ಪೂರ್ಣಗೊಳಿಸಿದರು.
ರಾಜೇಂದ್ರ ಅವರು ಹತ್ತನೇ ತರಗತಿ ಪಾಸಾದ ನಂತರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ . ಬಡತನದಿಂದಾಗಿ ಎರಡು ವರ್ಷ ಶಿಕ್ಷಣ ಮೊಟಕುಗೊಳಿಸಿ. ಸೋದರ ಮಾವನ ಮಾರ್ಗದರ್ಶನದಂತೆ ಇಂಡಿ ತಾಲೂಕಿನ ಹಲಸಂಗಿಯಲ್ಲಿ ಪಿ ಯು ಸಿ . ಪ್ರವೇಶ ಪಡೆದು,ಹಾಸ್ಟೆಲ್ ಸೇರಿಕೊಂಡುರು.ಹಲಸಂಗಿಯ ಗ್ರಾಮದ ಪೂಜಾರಿ ಅವರ ಸಹಾಯ ಸಹಕಾರದಿಂದ ಪಿ.ಯು.ಸಿ. ಪೂರ್ಣಗೊಳಿಸಿದರು .
ಧಾರವಾಡದ ಕೆ ಸಿ ಡಿ ಕಾಲೇಜಿನಲ್ಲಿ ಬಿ ಎ ಪ್ರವೇಶ ಪಡೆದು ಓದು ನಿಲ್ಲಿಸಿ.ಮರಳಿ ಕಲಬುರಗಿ ಮಿಲಿಂದ್ ಕಾಲೇಜಿನಲ್ಲಿ ಆರು ತಿಂಗಳು ಇಂಟರ್ನಶಿಪ್ ಮಾಡಿ ನಂತರ ಎನ್ ವಿ ಕಾಲೇಜಿನಲ್ಲಿ ಮೂರು ವರ್ಷ ಬಿ. ಎ . ಪದವಿ , ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ಎಂ ಎ ಪದವಿ ಪಡೆದರು, ೧೯೯೭ ರಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡರು.
ಜಿಡಗಾ ಗ್ರಾಮದಲ್ಲಿ ೧೫ ವರ್ಷ ಶಿಕ್ಷಕರಾಗಿ, ಕ್ಲಸ್ಟರ್ ಸಿ. ಆರ್. ಪಿ ಯಾಗಿ, ೨೦೧೧ ರಲ್ಲಿ ಪ್ರೌಢ ಶಾಲೆಗೆ ಬಡ್ತಿ ಹೊಂದಿ ಪ್ರಸ್ತುತ ಕಲಬುರಗಿ ತಾಲೂಕಿನ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಸೇವೆ
೨೦೦೦ ರಲ್ಲಿ ಇವರ "ಕಲ್ಲರಳಿನ ಕರುಳು" ಕವನ ಸಂಕಲನ ."ಚಿಗುರು ಚೇತನ","ಬೆಳಸುಗಳು" ಕವನ ಸಂಕಲನಗಳು ,"ತಾತಾ ಚಿಕ್ಕ ನಾಟಕ ಕೃತಿ" "ನೀಲಕಂಠ "ಅಭಿನಂದನ ಗ್ರಂಥ
ಬೆಳಗಾವಿಯ ಅಥಣಿ ಮಠದ ವತಿಯಿಂದ ನಡೆದ ರಾಜ್ಯ ಮಟ್ಟದ ವಚನ ಸಾಹಿತ್ಯ ಓಂಕಾರ , ಕನಕಪುರದ ಸಾಹಿತ್ಯ ಸಮ್ಮೇಳನ, ಬೀದರಿನ ವಚನಾಂಜದಲ್ಲಿ ಗೌರವಿಸಿದ್ದಾರೆ..
"ಚಂದ್ರರಾಜ" ಎನ್ನುವ ವಚನಾಂಕಿತದ ಮೂಲಕ ಮುನ್ನೂರಕ್ಕೂ ಹೆಚ್ಚು ಆದುನಿಕ ವಚನಗಳು ರಚಿಸಿದ್ದಾರೆ.
ದೂರದರ್ಶನ, ರೇಡಿಯೋ, ಅನೇಕ ಪತ್ರಿಕೆಗಳಲ್ಲಿಯೂ ಇವರ ಕವನ,ಚಿಂತನ, ಲೇಖನ ಪ್ರಕಟವಾಗಿವೆ.
ಸನ್ಮಾನ ಮತ್ತು ಪ್ರಶಸ್ತಿಗಳು
ಬಿಜಾಪುರದ ಆಯೇರಿ ಸಂಸ್ಥಾನದವರು ಬಸವ ಸಮಿತಿ ಉತ್ಸವದ ಸವಿ ನೆನಪಿಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ "ರಾಷ್ಟ್ರೀಯ ಬಸವರತ್ನ" ಪ್ರಶಸ್ತಿ ನೀಡಿ ಗೌರವಿಸಿದೆ.
ಸೇಡಂ ತಾಲ್ಲೂಕಿನ ಮೇದಕ್ ಗ್ರಾಮದ ಚೆನ್ನಕೇಶವ ಉತ್ಸ್ವದಲ್ಲಿ "ಸಾಧಕ ಶಿಕ್ಷಕ"
ಮೈಸೂರಿನಲ್ಲಿ ನಡೆದ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ "ಗುರು ಶ್ರೇಷ್ಠ" ಪ್ರಶಸ್ತಿ
ಕಲಬುರ್ಗಿಯ ಯುವ ಶಕ್ತಿ ಸಮಿತಿವತಿಯಿಂದ ೬೮ ನೇಯ "ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ"
ಕನ್ನಡ ಸಾಹಿತ್ಯ ಸಂಘ ಕಲಬುರ್ಗಿಯವರ ಸೆಪ್ಟೆಂಬರ್ ೫ ರಂದು "ಉತ್ತಮ ಶಿಕ್ಷಕ ಪ್ರಶಸ್ತಿ"
ಯಾದಗಿರಿಯ ಉರ್ದು ಅಕ್ಯಾಡೆಮಿ ಮತ್ತು ಕಲಬುರ್ಗಿಯ ರೋಟ್ರಿ ಕ್ಲಬ್ ವತಿಯಿಂದ "ಬೆಸ್ಟ್ ಟೀಚರ್ ಅವಾರ್ಡ್"
ಕಲಬುರ್ಗಿಯ ಉತ್ತರ ವಲಯದಿಂದ ನಡೆದ ಉರ್ದು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ "ಉತ್ತಮ ಶಿಕ್ಷಕ ಪ್ರಶಸ್ತಿ" ಗಮಕ ಕಲಾ ವಾಚನ ಪ್ರಮಾಣ ಪತ್ರ
ಮೈಸೂರಿನಲ್ಲಿ ನಡೆದ ಚುಟುಕು ಗೋಷ್ಠಿಯಲ್ಲಿ ಚುಟುಕು ಪ್ರಶಸ್ತಿ ಪ್ರಮಾಣ ಪತ್ರ
ಆಳಂದ ತಾಲೂಕಿನ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ, ಜಿಡಗಾ ವಲಯದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ , ಮಾದನ ಹಿಪ್ಪರಗಾ ವಲಯದ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿ,ಕಲಬುರ್ಗಿಯ ದಕ್ಷಿಣ ಮತಕ್ಷೇತ್ರದ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ,ಶಿಕ್ಷಕರ ಪ್ರತಿಭಾ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷರಾಗಿ. ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.
- ಶರಣಗೌಡ ಪಾಟೀಲ ಪಾಳಾ