ಮಹಾರಾಷ್ಟ್ರ ರಾಜ್ಯಪಾಲರ ದ್ವಂದ್ವ ನೀತಿ; ಹಿರಿಯ ಪತ್ರಕರ್ತ ಅಜೀಜುಲ್ಲಾ ಸರಮಸ್ತ್
ಮಹಾರಾಷ್ಟ್ರ ರಾಜ್ಯಪಾಲರ ದ್ವಂದ್ವ ನೀತಿ; ಹಿರಿಯ ಪತ್ರಕರ್ತ ಅಜೀಜುಲ್ಲಾ ಸರಮಸ್ತ್
ಕಲಬುರಗಿ: ಮುಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನ ಮಾಡಿರುವ ರಾಮಗಿರಿ ಮಹಾರಾಜ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೆ ಮಹಾರಾಷ್ಟ್ರ ಸರ್ಕಾರವು ತನ್ನ ಸಂವಿಧಾನಿಕ ಜವಾಬ್ದಾರಿಯಿಂದ ಪಲಾಯನ ಮಾಡಿದೆ ಎಂದು ಮಹಮದಿ ಸೀರತ್ ಸಮಿತಿ ಕಲಬುರಗಿ ದಕ್ಷಿಣ ಅಧ್ಯಕ್ಷ ಹಿರಿಯ ಪತ್ರಕರ್ತ ಅಜೀಜುಲ್ಲಾ ಸರಮಸ್ತ್ ಅಭಿಪ್ರಾಯಪಟ್ಟರು.
ಮುಹಮ್ಮದ್ ಪೈಗಂಬರ್ ಅವರ ವಿರುದ್ದ ಅವಹೇಳನ ಮಾಡಿದ್ದ ರಾಮಗಿರಿ ಮಹಾರಾಜ್ ವಿರುದ್ಧ ಗುಲ್ಬರ್ಗಾ ದಕ್ಷಿಣದ ಮಹಮದಿ ಸೀರತ್ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಗರದ ಅಂಜುಮನ್ ತರಖ್ಖಿ.ಎ.ಉರ್ದು ಸಭಾಂಗಣದಲ್ಲಿ ಅಂತರ್-ರಾಜ್ಯ ನಾತಿಯಾ, ಮುಶೈರಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ವಿವಿಧೆಡೆಗಳಲ್ಲಿ 67 ಎಫ್‌ಐಆರ್‌ಗಳನ್ನು ರಾಮಗಿರಿ ಮಹಾರಾಜ್ ವಿರುದ್ಧ ದಾಖಲಿಸಲಾಗಿದೆ ಎಂದು ಸರ್ಕಾರವೇ ಹೇಳಿದೆ. ಈ ಪ್ರಕರಣಗಳಾದರೂ ಕೂಡ, ರಾಮಗಿರಿ ಮಹಾರಾಜ್ ಅವರನ್ನು ಬಂಧಿಸಿಲ್ಲವೆಂದು ಅವರು ಹೇಳಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅವರು ಸಂವಿಧಾನಕ್ಕೆ ಪ್ರಮಾಣವಚನ ಸ್ವೀಕರಿಸಿ, ಮುಸ್ಲಿಂ ಸಮುದಾಯದ ಭಾವನೆಗಳನ್ನು ಧಕ್ಕೆ ತಂದಿರುವ ರಾಮಗಿರಿ ಮಹಾರಾಜ್ ರನ್ನು ರಕ್ಷಿಸುತ್ತಿದ್ದಾರೆ ಎಂದು ದುರಿದರು.
ಕರ್ನಾಟಕ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಡ ತರುತ್ತಿದ್ದಾರೆ. ಆದರೆ ಮಹಾರಾಷ್ಟ್ರದ ರಾಜ್ಯಪಾಲರು ರಾಮಗಿರಿ ಮಹಾರಾಜ್ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ, ರಾಮಗಿರಿ ಮಹಾರಾಜ್ ಅವರನ್ನು ತಕ್ಷಣ ಬಂಧಿಸಬೇಕೆಕದು ಒತ್ತಾಯಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡುತ್ತಾ ಪ್ರವಾದಿ ಮಹಮ್ಮದ್ ರವರಿಗೆ ಮಹಾನ್ ಮಾನವತವಾದಿ ಪ್ರವಾದಿ ಮೊಹಮ್ಮದ್ ಅವರ ಆದರ್ಶಗಳು ಎಲ್ಲಾ ಮಾನವ ಕುಲಕ್ಕಾಗಿ ಪ್ರೇರಣೆ ಅವರು ಹೇಳಿಕೊಟ್ಟ ಹಾದಿ ಮೇಲೆ ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು.
ಈ ನಾತಿಯಾ ಮುಶೈರಾ ಕಾರ್ಯಕ್ರಮದ ಅಧ್ಯಕ್ಷತೆ ಪ್ರೊಫೆಸರ್ ಸೈಯದ್ ಶಾ ಮುಹಮ್ಮದ್ ಯೂಸುಫ್ ಹುಸೈನಿ ಅವರು ವಹಿಸಿದ್ದರು.
ಕಲ್ಬುರ್ಗಿ ದಕ್ಷಿಣ ಮತಕ್ಷೇತ್ರದ ಮೊಹಮ್ಮದಿ ಸಿರತ್ ಕಮಟಿ, ಪ್ರಧಾನ ಕಾರ್ಯದರ್ಶಿ ಮೋದಿನ್ ಪಟೇಲ್ ಅಣಬಿ ಸ್ವಾಗತಿಸಿದರು. ಮಹಮ್ಮದ್ ಕಾಜಾ ಗೇಸುರಾಜ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.