ಸಗರ ನಾಗಠಾಣ ಹಿರೇಮಠದಲ್ಲಿ ಬಿತ್ತಿಪತ್ರ ಬಿಡುಗಡೆ.
ಸಗರ ನಾಗಠಾಣ ಹಿರೇಮಠದಲ್ಲಿ ಬಿತ್ತಿಪತ್ರ ಬಿಡುಗಡೆ.
ಶಹಪುರ : ತಾಲೂಕಿನ ಸಗರ ಗ್ರಾಮದ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಮಹಾಸಂಸ್ಥಾನ ಶಾಖಾ ಮಠ ನಾಗಠಾಣ ಹಿರೇಮಠದಲ್ಲಿ ಶ್ರೀ ಗುರು ಉದಯ ಮಹಾಂತೇಶ್ವರ ಜಾತ್ರಾ ಮಹೋತ್ಸವ ಮತ್ತು ಸೋಮೇಶ್ವರ ಶಿವಾಚಾರ್ಯ ಗುರು ಪಟ್ಟಾಧಿಕಾರ ದ್ವಾದಶ ವರ್ಧಂತಿ ಮಹೋತ್ಸವ,ಹಾಗೂ ನೂತನ ಕಟ್ಟಡ ಉದ್ಘಾಟನೆ ಜೊತೆಗೆ ಪುರಾಣ ಪ್ರವಚನ ಕಾರ್ಯಕ್ರಮಗಳ ಬಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ ವೀರಶೈವ ಲಿಂಗಾಯತ ಧರ್ಮ ಪ್ರಚಾರ ಹಾಗೂ ಸಗರನಾಡಿನ ಸೌಹಾರ್ದ ಸಾಂಸ್ಕೃತಿಕ ಬಿಂಬಿಸುವುದರ ಜೊತೆಗೆ,ಈ ನಾಡಿನ ಆಧ್ಯಾತ್ಮಿಕ ಹಿರಿಯ ಶರಣರ ಸ್ಮರಣೆ ಕಾರ್ಯಕ್ರಮ ಇದಾಗಿದ್ದು,ಈ ಸಂಭ್ರಮದ ಯಶಸ್ವಿಗೆ ಗ್ರಾಮದ ಸರ್ವ ಸದ್ಭಕ್ತ ಮಂಡಳಿ ಕೈಜೋಡಿಸಬೇಕೆಂದು ಕೇಳಿಕೊಂಡರು.
ನವೆಂಬರ್ 2, ರಿಂದ 20 ರವರೆಗೆ ಪ್ರತಿನಿತ್ಯ ಸಾಯಂಕಾಲ 7:00ಗೆ ಮಹಾ ದಾಸೋಹಿ ಕಲಬುರಗಿಯ ಶ್ರೀ ಶರಣಬಸವೇಶ್ವರರ ಮಹಾಪುರಾಣ ಪ್ರವಚನದ ಜೊತೆಗೆ ಶ್ರೀಮಠದ ಧಾರ್ಮಿಕ ವಿಶೇಷ ಕಾರ್ಯಕ್ರಮಗಳು ಜರುಗಲಿವೆ, ನವಂಬರ್ 17 ರಂದು ಅಯ್ಯಾಚಾರ ಹಾಗೂ ಶಿವದಿಕ್ಷೆ,18 ರಂದು ಉಡಿ ತುಂಬುವ ಹಾಗೂ ಶ್ರೀಗಳಿಗೆ ತುಲಾಭಾರ,ಸಂಜೆ 4 ಗಂಟೆಗೆ ಶ್ರೀ ರಂಭಾಪುರಿ ವೀರ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರುಗಳು ಪ್ರಸನ್ನ ರೇಣುಕಾ ಡಾ: ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಮಹೋತ್ಸವ ಜರಗುವುದು,20 ರಂದು ಬೆಳಗ್ಗೆ 8 ಗಂಟೆಗೆ ಗುರು ಪಟ್ಟಾಧಿಕಾರ ದ್ವಾದಶ ಮಹೋತ್ಸವ ಮಂಗಲ ಸ್ನಾನ ಹಾಗೂ ಸಾಮೂಹಿಕ ವಿವಾಹಗಳ ಜೊತೆಗೆ ಧರ್ಮಸಭೆ ಸಮಾರಂಭ ನಡೆಯುವುದು,ರಾತ್ರಿ 8 ಗಂಟೆಗೆ ಪುರಾಣ ಮಹಾಮಂಗಲ, ಸಮಾರೋಪ ಸಮಾರಂಭ ಜರುಗುವುದು,ಈ ಒಂದು ಅಭೂತಪೂರ್ವ ಕಾರ್ಯಕ್ರಮದಲ್ಲಿ ಸರ್ವಭಕ್ತರು ಪಾಲ್ಗೊಂಡು ತನು ಮನ ಧನದಿಂದ ಸೇವೆ ಸಲ್ಲಿಸಿ ದರ್ಶನ ಪಡೆದು ಪುನೀತರಾಗಬೇಕೆಂದು ಮಠದ ಶ್ರೀಗಳು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸನಗೌಡ ಮಾಲಿ ಪಾಟೀಲ್,ನಾಗನಗೌಡ ಸುಬೇದಾರ
ಸಿದ್ದನಗೌಡ,ಸುಬೇದಾರ,ಮಹಾಂತಗೌಡ ಸುಬೇದಾರ,ರಾಜಶೇಖರ ದೇಸಾಯಿ,ಅಮೀನರಡ್ಡಿ ಮಲ್ಲೇದ,ಪ್ರಕಾಶ್ ಪಡಶೆಟ್ಟಿ,
ಬಸವರಾಜ ಬಾಳಿ,ಶೇಖರಪ್ಪ,
ಅರಕೇರಿ,ಆನಂದ ಹುಡೇದ್, ಶೇಖರಪ್ಪ ಗುಳಗಿ,ಶಿವಲಿಂಗಯ್ಯ ಸತ್ಯಂಪೇಟೆ,ಶಾಂತಯ್ಯ ಸತ್ಯಂಪೇಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
