ಸಿದ್ಧಾರೂಢ ಬಡಾವಣೆ ಪಂಚಾಯತ್ ವ್ಯಾಪ್ತಿಗೆ ಸೇರ್ಪಡೆ ಕನ್ನಡ ಭೂಮಿ ಹೋರಾಟಕ್ಕೆ ಜಯ
ಸಿದ್ಧಾರೂಢ ಬಡಾವಣೆ ಪಂಚಾಯತ್ ವ್ಯಾಪ್ತಿಗೆ ಸೇರ್ಪಡೆ ಕನ್ನಡ ಭೂಮಿ ಹೋರಾಟಕ್ಕೆ ಜಯ
ಕಲಬುರಗಿ: ಕಲಬುರಗಿ ತಾಲೂಕಿನ ಕಪನೂರ ಗ್ರಾಮದ ಸರ್ವೇ ವ್ಯಾಪ್ತಿಯಲ್ಲಿರುವ ಸಿದ್ಧಾರೂಢ ಕಾಲೋನಿಯನ್ನು ತಾಜಸುಲ್ತಾನಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದು ಕನ್ನಡ ಭೂಮಿ ಜಾಗೃತಿ ಸಮಿತಿ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ವಕ್ತಾರ ಆನಂದ ತೆಗನೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಾಲ್ಕು ದಶಕಗಳಿಂದ ಇಲ್ಲಿನ ಜನರು ಅನೇಕ ಬಾರಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.ಕನ್ನಡ ಭೂಮಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳು ಮಹಾನಗರ ಪಾಲಿಕೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಾಗೂ ಪ್ರತಿಭಟನೆ ನಡೆಸಲಾಯಿತು.
ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಸಿದ್ಧಾರೂಢ ಕಾಲೋನಿ ತಾಜಸುಲ್ತಾನಪೂರ ಪಂಚಾಯತಿಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.ಇದರ ಜೊತೆಗೆ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಲಾಗಿದೆ ಎಂದು ತಿಳಿಸಿದ ಅವರು ಕನ್ನಡ ಭೂಮಿ ಜಾಗೃತಿ ಸಮಿತಿಯ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಹಾಗೂ ನಾಲ್ಕು ದಶಕಗಳಿಂದ ಕನಸು ನನಸಾಗಿದೆ ಎಂದು ಅವರು ತಿಳಿಸಿದ್ದಾರೆ.