ಬೆಂಗಳೂರಿನಲ್ಲಿ ಅಕ್ಟೋಬರ 4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತ ಸೇವೆಗಳನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಹೋರಾಟ

ಬೆಂಗಳೂರಿನಲ್ಲಿ ಅಕ್ಟೋಬರ 4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತ ಸೇವೆಗಳನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಹೋರಾಟ

ಬೆಂಗಳೂರಿನಲ್ಲಿ ಅಕ್ಟೋಬರ 4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತ ಸೇವೆಗಳನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಹೋರಾಟ

 ರಾಜ್ಯದ ಎಲ್ಲ ಪಿಡಿಓ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಮುಂಬರುವ 4 ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಕ.ರಾ.ಪಿ.ಡಿ.ಓ.ಕ್ಷೇ. ಸಂಘದ ಅಧ್ಯಕ್ಷರಾದ ದತ್ತಾತ್ರಿ ಪೂಜಾರಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಆಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಕುಡಿಯುವ ನೀರು ಬೀದಿ ವಿದ್ಯುತ್ ದೀಪ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಾಗುತ್ತಿದೆ ಈ ಮಾಹಿತಿಯನ್ನು ತಾ.ಪಂ. ಮಾನ್ಯ ಸಹಾಯಕ ನಿರ್ದೇಶಕರಾದ ಹಣಮಂತ ರಾಯ ಕೌಟಗೆ ಅವರ ಗಮನಕ್ಕೆ ತರುತ್ತಾ ಮುಂದಿನ ಕ್ರಮಕ್ಕಾಗಿ ಸಲ್ಲಿಸುತ್ತಿದ್ದೆವೆ ಎಂದರು.

ರಾಜ್ಯದ ಶೇ. 68 ರಿಂದ 70 ಜನರಿಗೆ ಗ್ರಾಪಂನಿಂದ ಶೇ. 70ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ, ಕಾರ್ಯದರ್ಶಿಗಳು, ಎಸ್ ಡಿಎ, ಲೆಕ್ಕ ಸಹಾಯಕರು, ಎಲ್ಲ ಸಿಬ್ಬಂದಿವರ್ಗ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಸಾಕಷ್ಟು ಸಾರಿ ಮನವಿ ಪತ್ರ ಸಲ್ಲಿಸಿದ್ದರೂ ಸಹ ಸ್ಪಂದಿಸಿಲ್ಲ. ಹೀಗಾಗಿ ಅ.4 ರಿಂದ ರಾಜ್ಯಾದ್ಯಂತ ಗ್ರಾಪಂ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟವಾವಧಿ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಮಲ್ಲೇಶ ಮಾರುತಿ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ತಂಬಾಕೆ, ಗೌರವಾನ್ವಿತ ಸದಸ್ಯರಾದ ರಾಮದಾಸ ಬೆಲೂರೆ, ಗಣಪತಿ, ಗ್ರಾಪಂ ಸದಸ್ಯರಾದ ಅನೀಲಕುಮಾರ ಬಿರಾದಾರ, ಎಫ್ ಡಿಎ ವಿದ್ಯಾಸಾಗರ, ಎಸ್ ಡಿಎ ಗಣೇಶ, ಡಿಇಓ ಅಂಕುಶ, ವಿಠಲ ಸೇರಿದಂತೆ ಇತರರು ಇದ್ದರು.