ಯುವಕರಲ್ಲಿ ಕ್ರಿಯಾಶೀಲತೆ ಬೆಳೆಯಲಿ-ಪ್ರೋ. ಹನುಮಂತಪ್ಪ
ಯುವಕರಲ್ಲಿ ಕ್ರಿಯಾಶೀಲತೆ ಬೆಳೆಯಲಿ-ಪ್ರೋ. ಹನುಮಂತಪ್ಪ
ಆಳಂದ:ಪ್ರಸ್ತುತ ಯುವಕರು ಚಿತ್ರಕಲೆ, ಕತೆ, ಕವನ, ಸಂಗೀತ ಹಾಗೂ ಕ್ರೀಡ ಮತ್ತಿತರ ಸೃಜನಶೀಲ ಆಸಕ್ತಿಗಳತ್ತ ಒಲುವು ಬೆಳಸಿಕೊಂಡರ ಮಾತ್ರ ಅವರಲ್ಲಿ ಕ್ರಿಯಾಶೀಲತೆ ಬೆಳೆಯಲು ಸಾಧ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ.ತಾರಿಹಳ್ಳಿ ಹನುಮಂತಪ್ಪ ತಿಳಿಸಿದರು.
ಪಟ್ಟಣದ ಎ.ವಿ.ಪಾಟೀಲ ಪದವಿ ಕಾಲೇಜಿನಲ್ಲಿ ಶುಕ್ರವಾರ ಪುಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಎನ್ ಎಸ್ ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಮಯಾಣ, ಮಹಾಭಾರತ ಕಾವ್ಯಗಳ ಕಾಲದಲ್ಲಿಯೇ ಪುಷ್ಪ ಕವಿಮಾನ, ಅಂತರ್ಜಲ ಶೋಧ, ಶಬ್ದವೇಧಿ ಬಾಣ ಮತ್ತಿತರ ಕಲ್ಪನೆಗಳು ಮೂಡಿದವು, ಇಂತಹ ಪ್ರಾಚೀನ ಸಾಹಿತ್ಯದ ಓದು ಸಹ ನಮ್ಮಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವದು ಎಂದರು.
ಸಂಬುದ್ಧ ಕಾಲೇಜು ಪ್ರಾಂಶುಪಾಲ ಸಂಜಯ ಪಾಟೀಲ ಮಾತನಾಡಿ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳು ಸಾಧನೆಗೈಯಲು ಸಾಧ್ಯವಿದೆ, ವಿದ್ಯಾರ್ಥಿಗಳು ಮೊಬೈಲ್ ದಾಸರಾಗದ ಪುಸ್ತಕ ಪ್ರೇಮಿಗಳಾಗಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಎಸ್.ಎಚ್.ಹೊಸಮನಿ ಅಧ್ಯಕ್ಷತೆವಹಿಸಿದರು.
ವಿದ್ಯಾರ್ಥಿಗಳಾದ ಸೀಮಾಬಾನು ಹಬಳಿ, ಯಾಸೀನ್, ಮಾಲಾಶ್ರೀ ತಡಕಲ ಅನಿಸಿಕೆ ಹಂಚಿಕೊಂಡರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಟೆಕ್ಕಪ್ಪ, ಪ್ರಾಧ್ಯಾಪಕರಾದ ರಾಜಶೇಖರ ಬಾಬನೂರು, ರಮೇಶ ಮಸರಬೋ, ಸಿದ್ಧರಾಮ ವಿಜಯಪುರ, ಕಮಲಾಬಾಯಿ ಪಾಟೀಲ, ಅರುಣಾಬಾಯಿ ಚಿಲ್ಲಾಳ, ಬಸವರಾಜ ಶೃಂಗೇರಿ, ಬಿ.ಜಿ.ಬನಸೋಡೆ, ಮಲ್ಲಿಕಾರ್ಜುನ ಜುಬ್ರೆ ಚಂದ್ರಕಲಾ ಪಾಟೀಲ, ಮಮತಾ ಡಿ. ಶ್ರೇಯಾಂಕಾ ಕುಂಬಾರ, ಸತೀಶ ಪಾಟೀಲ, ದಿನೇಶ ಪಾಟೀಲ,ಸಂಗೀತಾ ಅಷ್ಟಗಿ, ಸುನೀಲ ಹತ್ತಿ, ಅಂಬರೀಷ್ ಕುಂಬಾರ ಉಪಸ್ಥಿತರಿದ್ದರು. ಬಬ್ರುವಾಹನ ಎ. ನಿರೂಪಿಸಿದರೆ, ಸಂಗಮೇಶ ಸ್ವಾಮಿ ಸ್ವಾಗತಿಸಿದರು. ಜಯಪ್ರಕಾಶ ಬಾವಿಮನಿ ವಂದಿಸಿದರು. ಅತಿಹಚ್ಚು, ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.