ಗರ್ಭಿಣಿ ತಾಯಿ ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಮಗು ತಾಯಿ ಇಬ್ಬರಿಗೂ ಒಳ್ಳೆಯದು.
ಗರ್ಭಿಣಿ ತಾಯಿ ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಮಗು ತಾಯಿ ಇಬ್ಬರಿಗೂ ಒಳ್ಳೆಯದು.
ಕಮಲನಗರ :ಸೆ.25 ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬೀದರ್ ತಾಲೂಕು ಪಂಚಾಯತ ಔರಾದ(ಬಾ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ್ ಸಂಯುಕ್ತಾಶ್ರಯದಲ್ಲಿ ಶಿಶು ಅಭಿವೃದ್ಧಿ ಯೋಜನೆ ಸಂತಪೂರ ಪೋಷಣಾ ಅಭಿಯಾನ ಯೋಜನೆ ಘೋಷ ವಾಕ್ಯ" ಸುಪೊಷಿತ ಕಿಶೋರಿ ಸಶಕ್ತನಾರಿ " 2024-25ನೇ ಸಾಲಿನ ತಾಲೂಕು ಮಟ್ಟದ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಕಾರ್ಯಕ್ರಮ ಉದ್ಘಾಟನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಪಲಾನುಭವಿಗಳು ಆರೋಗ್ಯ, ಶಿಕ್ಷಣ, ಪೋಷನ್,ಮಾಹಿತಿ ಪಡೆದುಕೊಳ್ಳಬೇಕು. ಹಾಗೂ ಇಲಾಖೆಯಿಂದ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಅಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರಿಗೆ ಅದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿ, ಏನೇ ಸಮಸ್ಯೆಗಳಿದ್ರು ಅದನ್ನು ಅಂಗನವಾಡಿ ಮೇಲ್ವಿಚಾರಕರು ಮತ್ತು ಸಿಡಿಪಿಓ ಅವರ ಗಮನಕ್ಕೆ ತನ್ನಿ ಅದನ್ನು ನಾವು ಪರಿಹರಿಸುತ್ತೇವೆ ಎಂದರು.
ಅಂಗನವಾಡಿ ಮೇಲ್ವಿಚಾರಕರಾದ ಶೋಭಾವತಿ ಮಾತನಾಡಿ ಗರ್ಭಿಣಿ ಮಹಿಳೆಯರು ನಿಯಮಿತವಾಗಿ ಆಹಾರ ಸೇವನೆ ಮಾಡಬೇಕು. ಆದಷ್ಟು ಪೌಷ್ಟಿಕಾಹಾರ ಸೇವನೆ ಮಾಡುವುದು ತಾಯಿ ಮತ್ತು ಮಗುವಿಗೆ ಇಬ್ಬರಿಗೂ ಒಳ್ಳೆಯದು ಎಂದರು.
ತಾ.ಪಂ. ಸಹಾಯಕ ನಿರ್ದೇಶಕರಾದ ಹಣಮಂತರಾಯ ಕೌಟಗೆ ಮಾತನಾಡಿ ರೋಗ ಬಂದ ಮೇಲೆ ಚಿಕಿತ್ಸೆ ತೆಗೆದುಕೊಳ್ಳುವದಕ್ಕಿಂತ ಮುಂಚೆ ರೋಗ ಬರದೇ ಇರೋ ಥರ ನೋಡಿಕೊಳ್ಳುವುದು ಬಹುಮುಖ್ಯ. ಆರೋಗ್ಯದ ದೃಷ್ಟಿಯ ಜೊತೆಗೆ ಪ್ರತಿಯೊಂದರಲ್ಲೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರೆ ಪಾತ್ರ ಮಹತ್ವವಾಗಿದೆ. ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಹೋದರೆ ತಾಯಿ ಮಗುವಿನ ಆರೋಗ್ಯದ ಜೊತೆಗೆ ಮರಣದ ಪ್ರಮಾಣ ಕೂಡ ಕಡಿಮೆ ಮಾಡಿಕೊಳ್ಳಬಹುದು ಎಂದರು.
ಗ್ರಾಮ ಪಂ. ಪಿಡಿಓ ರಾಜಕುಮಾರ ತಂಬಾಕೆ ಮಾತನಾಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಕಾರ್ಯಕ್ರಮಗಳನ್ನು ಎಲ್ಲರು ಒಟ್ಟಾಗಿ ಮಾಡಬೇಕು. ಬಾಲ್ಯವಿವಾಹದಂತಿರುವ ಅಪರಾಧವನ್ನು ತಡೆಗಟ್ಟಲು ನೀವು ಕೈ ಜೋಡಿಸಿ ಎಂದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಕ್ಕಳಿಗೆ ಅನ್ನಪ್ರಶನ ಹಾಗೂ ಅಕ್ಷರಭ್ಯಾಸ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾರು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಕವಿತಾ ಬಿರಾದಾರ,ಐಇಸಿ ಸಂಯೋಜಕರಾದ ಸವಿತಾ ನಾಗೇಶ ಸುವರ್ಣಾ, ಶ್ರೀದೇವಿ, ಸ್ವಪ್ನಾ, ಅಂಗನವಾಡಿ ಕಾರ್ಯಕರ್ತರಾದ ಸವಿತಾ, ಸಂಗೀತಾ ಸಹಾಯಕರಾದ ಸುವರ್ಣಾ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಗರ್ಭಿಣಿ ಮಹಿಳೆಯರು ಉಪಸ್ಥಿತರಿದ್ದರು.