ಗದ್ದೆಯಂತಾದ ಕಡೇಚೂರು ಈದ್ಗಾ ಕಂಪನಿ ರಸ್ತೆ - ವಿಜಯಕುಮಾರ ಕಂಬೋಲ್

ಗದ್ದೆಯಂತಾದ ಕಡೇಚೂರು ಈದ್ಗಾ  ಕಂಪನಿ ರಸ್ತೆ - ವಿಜಯಕುಮಾರ ಕಂಬೋಲ್

ಯಾದಗಿರ ಜಿಲ್ಲಾ ವರದಿಗಾರರು : ಶರಣಪ್ಪ ಸಾವೂರ್

ಗದ್ದೆಯಂತಾದ ಕಡೇಚೂರು ಈದ್ಗಾ ಕಂಪನಿ ರಸ್ತೆ - ವಿಜಯಕುಮಾರ ಕಂಬೋಲ್

ಯಾದಗಿರ/ಕಡೇಚೂರು :ಯಾದಗಿರ ಜಿಲ್ಲೆಯ ಯಾದಗಿರ ತಾಲ್ಲೂಕಿನ ಸೈದಾಪೂರ ಹೋಬಳಿಯ ಕಡೇಚೂರ ಗ್ರಾಮದಿಂದ ಕಂಪನಿಳಿಗೆ ಹೋಗುವ ಈದ್ಗಾ ರಸ್ತೆಯೂ ತಗ್ಗು ಗಡ್ಡೆಗಳಿಂದ ಕೂಡಿದ್ದು, ಅಪಘಾತಗಳಾಗುವ ಸಂಭವವಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಸರಾಗಿ ತಿರುಗಾಡದಂತಾಗಿದೆ. ವಾಹನಗಳ ಓಡಾಟಕ್ಕೆ ಹಾಗೂ ಜನರು ತಮ್ಮ ದಿನನಿತ್ಯದ ಹೊಲ ಗದ್ದೆಗಳ ಕೆಲಸಗಳನ್ನು ಮಾಡಲು ತಮ್ಮ ಹೊಲಗಳಿಗೆ ನಡೆದುಕೊಂಡು ಹೋಗಬೇಕಾದರೆ ಕೆಸರಿನಲ್ಲಿ ನಡೆದುಕೊಂಡು ಹೋಗುವ ಪರಸ್ಥಿತಿ ಉಂಟಾಗಿದೆ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಿತ್ತ ಗಮನಹರಿಸಿ ಯಾವುದೇ ಅನಾಹುತಗಳು ಆಗದಂತೆ ಮುಂಜಾಗ್ರತೆವಹಿಸಿ ಮರಮ್ ಹಾಕಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮದ ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ ಕಂಬೋಲ್ ಕಡೇಚೂರ ಆಗ್ರಹಿಸಿದ್ದಾರೆ.