ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಾಪೂರದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಾಪೂರದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಾಪೂರದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಜಾಗತಿಕ ತಾಪಮಾನ ತಡೆಯಲು ಪರಿಸರ ಸಂರಕ್ಷಿಸಿ ಬೆಳೆಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ : ಮುಖ್ಯಗುರು ಗೋಪಾಲ ಯಂಪಳ್ಳಿ

ಚಿಂಚೋಳಿ : ಇಲ್ಲಿನ ಚಂದಾಪೂರ ಸರಕಾರಿ ಹಿರಿಯ ಪ್ರಾಥಮಿಕ (ಕೆಪಿಎಸ್) ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಶಾಲೆಯ ಮುಖ್ಯಗುರು ಗೋಪಾಲ ಯಂಪಳ್ಳಿ ಅವರು ಗಿಡದ ಸಸಿಗಳು ನೆಟ್ಟಿ, ನೀರು ಉಣಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಜರುಗಿಸಿ ವಿಶ್ವ ಪರಿಸರ ಸಂರಕ್ಷಣೆಯ ಬಗ್ಗೆ ಸಂದೇಶ ಸಾರಿದರು.

ಭೂಮಿ ಮೇಲೆ ಜನ್ಮಿಸಿದ ಪ್ರತಿಯೊಂದು ಜೀವ ರಾಶಿಗಳಿಗೆ ಬದುಕಲು ಉಸಿರಾಡಲು ಗಾಳಿ ,ನೀರು ಮತ್ತು ಆಹಾರ ಕಡ್ಡಾಯವಾಗಿಬೇಕು. ಇವುಗಳಿಲ್ಲದೆ ಮನುಷ್ಯನಾಗಲಿ, ಇತರೆ ಪ್ರಾಣಿಗಳು ಬದುಕಿ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಗಿಡಗಳು ನೆಟ್ಟಿ ಪರಿಸರ ಬೆಳಿಸಿದರೆ ಮಾತ್ರ ಗಾಳಿ, ನೀರು, ಆಹಾರ ಪಡೆಯಲು ಸಾಧ್ಯ. ಈ ಹಿನ್ನಲೆಯಲ್ಲಿ ಗಿಡ ಮರಗಳನ್ನು ಬೆಳೆಸುವುದರಿಂದ ಆಗುತ್ತಿರುವ ಜಾಗತಿಕ ತಾಪಮಾನ ಹೆಚ್ಚಳ ತಡೆಯಲು ಸಾಧ್ಯವಿದೆ. ಹೀಗಾಗಿ ಪರಿಸರ ಸಂರಕ್ಷಿಸಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಸಕಲ ಜೀವಸಂಕುಲಗಳು ಉಳಿಯಲು ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡಲು ಪಣತೊಡಬೇಕು ಎಂದರು.  

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕ ಯಶವಂತ ಪೂಜಾರಿ, ಶಿಕ್ಷಕಿ ಉಮಾ, ಸಂಗನಬಸಮ್ಮ, ಸುನಿತಾ, ಸೋಮಶೇಖರ, ಮಾಣಕ್, ಸಾಬು ಕಾಂಬಳೆ ಅವರು ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು, ಬಿಸಿ ಊಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.