ಏ.2ರಂದು ಶಹಾಬಾದ, ಶ್ರೀ ಶರಣಬಸವೇಶ್ವರರ 48ನೇ ಜಾತ್ರಾ ಮಹೋತ್ಸವ

ಏ.2ರಂದು ಶಹಾಬಾದ, ಶ್ರೀ ಶರಣಬಸವೇಶ್ವರರ 48ನೇ ಜಾತ್ರಾ ಮಹೋತ್ಸವ

ಏ.2ರಂದು ಶಹಾಬಾದ, ಶ್ರೀ ಶರಣಬಸವೇಶ್ವರರ 48ನೇ ಜಾತ್ರಾ ಮಹೋತ್ಸವ

ನಾಗರಾಜ್ ದಂಡಾವತಿ ವರದಿ 

ಶಹಾಬಾದ: ತಾಲ್ಲೂಕಿನ ಸುಪ್ರಸಿದ್ದ ದೇವಸ್ಥಾನವಾದ ಶ್ರೀ ಶರಣಬಸವೇಶ್ವರರ 48ನೇ ಜಾತ್ರೆಯು ಎ.2 ರಂದು ಭವ್ಯವಾದ ರಥೋತ್ಸವ ಸಾಯಂಕಾಲ 6:30 ಕ್ಕೆ ಅದ್ದೂರಿಯಾಗಿ ಜರುಗುವದು ಎಂದು ದೇವಸ್ಥಾನ ಸಮಿತಿ ಯವರು ತಿಳಿಸಿದ್ದಾರೆ.

ಮಾ.29 ರಿಂದ ಎ.01 ರವರೆಗೆ ಪ್ರತಿ ದಿನ ಸಾಯಂಕಾಲ ಅಧ್ಯಾತ್ಮ ಆಶೀರ್ವಚನ ಪರಮ ಪೂಜ್ಯ ಶ್ರೀ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸುರಗೀಶ್ವರ ಸಂಸ್ಥಾನಮಠ, ಕನೂಲ್, ಮಹಾರಾಷ್ಟ್ರ ಇವರಿಂದ ನಡೆಯುವದು.

ಮಾ.29ರಿಂದ ಎ.02ರ ವರೆಗೆ ಪ್ರತಿ ದಿನ ಸಾಯಂಕಾಲ 6 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯುವದು. ಏ.2ರಂದು ಬೆಳಗಿನ ಜಾವ 5-00 ಗಂಟೆಗೆ ಶ್ರೀ ಶರಣಬಸವೇಶ್ವರ ಕೃರ್ತು ಗದ್ದುಗೆಗೆ ಮಹಾ ರುದ್ರಭಿಷೇಕ, 9 ಗಂಟೆಗೆ ಕಳಸ ಗಂಗಸ್ಥಳಕ್ಕೆ, ನಂತರ ಕಳಸಾರೋಹಣ ಮಧ್ಯಾಹ್ನ 3:00 ಗಂಟೆಗೆ ಶ್ರೀ ಬಸವೇಶ್ವರ ದೇವಸ್ಥಾನ (ಅಡವೀರ ತಾತಾ ಗದ್ದುಗೆ) ದಿಂದ ನಂದಿ ಕೋಲುತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಾಗುವದು, ಸಾಯಂಕಾಲ 6:30 ಕ್ಕೆ ಭವ್ಯವಾದ ರಥೋತ್ಸವ ಜರುಗುವದು.

ಏ.3ರಂದು ಮುಂಜಾನೆ 9 ಗಂಟೆಗೆ ಕುಸ್ತಿ ಸ್ಪರ್ಧೆಗಳು, ಸಾಯಂಕಾಲ 4 ಗಂಟೆಗೆ ಬೆಳ್ಳಿ ಖಡಗ ಮಹಾ ಕುಸ್ತಿ ಸ್ಪರ್ಧೆ ನಡೆಯಲಿದೆ ಎಂದು ಶ್ರೀ ಶರಣಬಸವೇಶ್ವರ ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.