ಜನಪದ ಕತೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಜೀವನಾಡಿ - ಸವಿತಾ ಕೆ.

ಜನಪದ ಕತೆಗಳು ನಮ್ಮ ಸಾಂಸ್ಕೃತಿಕ  ಪರಂಪರೆಯ ಜೀವನಾಡಿ - ಸವಿತಾ ಕೆ.

ಜನಪದ ಕತೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಜೀವನಾಡಿ - ಸವಿತಾ ಕೆ.

ಶಹಪುರ : ಮೌಕಿಕವಾಗಿ ತಲಮಾರಿನಿಂದ ತಲೆಮಾರಿಗೆ ಹರಿದು ಬಂದಿರುವ ಈ ಕನ್ನಡ ಜನಪದ ಕಥೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಜೀವನಾಡಿಯಾಗಿದೆ ಎಂದು ಜಾನಪದ ಕಲಾವಿದೆ ಸವಿತಾ ಕೆ. ಹೇಳಿದರು.

ನಗರದ ಬಸವೇಶ್ವರ ಕಾಲೋನಿಯಲ್ಲಿರುವ ಲಿಟಲ್ ವಿಂಗ್ಸ್ ಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿರುವ ಕನ್ನಡ ಜನಪದ ಕಥೆಗಳ ಕುರಿತು ಉಪನ್ಯಾಸ ನೀಡುತ್ತ ಮಾತನಾಡಿದರು.

ಇಂತಹ ಜನಪದ ಕಥೆಗಳು ಮಕ್ಕಳಿಗೆ ಹೇಳುವುದರಿಂದ ಮಕ್ಕಳಲ್ಲಿ ಉತ್ತಮ ಶಿಕ್ಷಣ ಜೊತೆಗೆ ಒಳ್ಳೆಯ ಸಂಸ್ಕಾರವು ಬೆಳೆಯುವುದಕ್ಕೆ ಪೂರಕವಾಗುತ್ತವೆ ಎಂದು ಹೇಳಿದರು.

ಜನಪದ ಕಥೆಗಳಲ್ಲಿ ನೀತಿ ಪಾಠ ಹಾಸ್ಯ ವಿನೋದ ವಿಡಂಬನೆಗಳ ಜೊತೆಗೆ ಮತ್ತು ಜೀವನ ಮೌಲ್ಯಗಳು ಎತೇಚ್ಛವಾಗಿ ಸಾರುತ್ತವೆ ಎಂದು ಸಂಸ್ಥೆಯ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್ ಹೆಗ್ಗನದೊಡ್ಡಿ ನುಡಿದರು.

ಈ ಶಾಲೆಯ ಮುಖ್ಯ ಗುರುಗಳಾದ ವಿಜಯಲಕ್ಷ್ಮಿ ಪುರಾಣಿಕ ಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಜನಪದ ಕಥೆಗಳೆಂದರೆ ಅಜ್ಜಿ ಹೇಳಿದ ಕಥೆಗಳೆಂದು ಕರೆಯಲಾಗುತ್ತಿದೆ ಇಂತಹ ಕಥೆಗಳು ಕೇವಲ ಮನೋರಂಜನೆ ನೀಡದೆ, ಪ್ರತಿಯೊಬ್ಬರ ಬದುಕಿಗೆ ನೀತಿ ಪಾಠಗಳಾಗಿವೆ ಎಂದು ಬಣ್ಣಿಸಿದರು.

ಈ ಸಮಾರಂಭದ ವೇದಿಕೆ ಮೇಲೆ ಪಲ್ಲವಿ ಜಿ.ನಾಜಮೀನ್,ಅನಿತಾ, ಮಹಾದೇವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.