ಪುಸ್ತಕ ಓದುವುದರಿಂದ ಮಾನಸಿಕ ನೆಮ್ಮದಿ :ಅಕ್ಕೋಣೆ

ಪುಸ್ತಕ ಓದುವುದರಿಂದ ಮಾನಸಿಕ ನೆಮ್ಮದಿ :ಅಕ್ಕೋಣೆ
ಪುಸ್ತಕ ಓದುವುದರಿಂದ ಮಾನಸಿಕ ನೆಮ್ಮದಿ :ಅಕ್ಕೋಣೆ

ಪುಸ್ತಕ ಓದುವುದರಿಂದ ಮಾನಸಿಕ ನೆಮ್ಮದಿ :ಅಕ್ಕೋಣೆ

ಕಲಬುರಗಿ :ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಮತ್ತು ಶಾಂತಿ ಪಡೆದುಕೊಳ್ಳಲು ಸಾಧ್ಯ ಎಂದು ಕನ್ನಡ ನಾಡು ಲೇಖಕರ ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಅಭಿಪ್ರಾಯ ಪಟ್ಟರು.

ನಗರದ ಕಮಲ ನಗರದಲ್ಲಿರುವ ಡಾ. ಶರಣಬಸಪ್ಪ ವಡ್ಡನಕೇರಿ ಅವರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಧಿಕಾರದ ಮನೆಗೊಂದು ಗ್ರಂಥಾಲಯ ಉದ್ಫಾಟಿಸಿ ಮಾತನಾಡಿ ''ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸದಿಂದ ಓದುಗನ ಆರೋಗ್ಯದೊಂದಿಗೆ ಸಮಾಜ ಸುಧಾರಣೆಗೆ ಸಹಾಯಕವಾಗುತ್ತದೆ. ಒಬ್ಬ ವ್ಯಕ್ತಿಯನ್ನು ಉತ್ತಮ ಮನುಷ್ಯನನ್ನಾಗಿಸುವ ಶಕ್ತಿ ಸಾಮರ್ಥ್ಯ ಪುಸ್ತಕಕ್ಕಿದೆ. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳ ಹಾವಳಿಯಿಂದ ಜನಸಾಮಾನ್ಯರು ಓದುವ ಹವ್ಯಾಸದಿಂದ ದುಾರ ಸರಿಯುತ್ತಿದ್ದಾರೆ. ಈ ನೆಲೆಯಲ್ಲಿ ಪುಸ್ತಕವನ್ನು ಕೊಂಡುಕೊಳ್ಳುವ ಮತ್ತು ಓದುವ ಹವ್ಯಾಸವನ್ನು ಬೆಳಸಿಕೊಳ್ಳಲು ಪುಸ್ತಕ ಪ್ರಧಿಕಾರ ಇಂತಹ ಉತ್ತಮ ಯೋಜನೆ ಹಾಕಿದ್ದು ಸಂತಸ ವಿಷಯ ಎಂದರು. 

ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಶಿವಶರಣಪ್ಪ ಬಿರಾದಾರ ಮಾತನಾಡಿ, ''ಮನುಷ್ಯನ ಬೌದ್ಧಿಕ ಬೆಳವಣಿಗೆ ಹಾಗೂ ಸಮಾಜದ ಸ್ವಾಸ್ಧ್ಯಕ್ಕೆ ಪುಸ್ತಕಗಳ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಇಂದಿನ ನಾಗರಿಕ ಸಮಾಜ ಈ ಹಂತದವರೆಗೆ ಬರಲು ಪುಸ್ತಕಗಳು ಪರಿಣಾಮಕಾರಿಯಾಗಿ ಪ್ರಭಾವ ಬೀರಿದೆ. ಪುಸ್ತಕಗಳು ನಮ್ಮ ನಿರಂತರ ಗೆಳೆಯನಾಗಬೇಕು. ನಮ್ಮ ಬೌದ್ಧಿಕ , ಮಾನಸಿಕ ಬೆಳವಣಿಗೆಗೆ ಪುಸ್ತಕಗಳು ಸಹಕರಿಸುತ್ತವೆ. ನಾವು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದೆಂತಲ್ಲಾ ನಮ್ಮ ಅಜ್ಞಾನದ ಆಳ, ಹರಿವು ಗೊತ್ತಾಗುತ್ತಾದೆ'' ಎಂದು ತಿಳಿಸಿದರು.

ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ. ಎಚ್.ನಿರಗುಡಿ ಮಾತನಾಡಿ, ''ಪುಸ್ತಕಗಳ ಮೂಲಕ ಮನುಕುಲದ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ವರ್ಷದಿಂದ ಪುಸ್ತಕ ಪ್ರಧಿಕಾರ ನಡೆಸುತ್ತಿರುವ ಮನೆಗೊಂದು ಗ್ರಂಥಾಲಯ ತುಂಬಾ ಯಶಸ್ಸು ಕಂಡಿದ್ದು ಶರಣಬಸಪ್ಪ ವಡ್ಡನಕೇರಿ ಅವರು ತುಂಬಾ ಅಚ್ಚುಕಟ್ಟಾಗಿ ಗ್ರಂಥಾಲಯ ರೂಪಿಸಿದ್ದು ಅವರಿಗೆ ಪುಸ್ತಕ ಪ್ರಧಿಕಾರದಿಂದ ಅಭಿನಂದನಾ ಪತ್ರ ನೀಡಿ ಅಭಿನoದಿಸುತಿದ್ದದ್ದು ಹರ್ಷದಾಯಕ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿದ್ದಲಿಂಗ ಬಿ. ಕೊನೇಕ ಮಾತನಾಡಿ ಮನೆಯಲ್ಲಿ ಪುಸ್ತಕಗಳನ್ನು ಹೊಂದಿರುವುದು ಮಕ್ಕಳಿಗೆ ಹಲವಾರು ರೀತಿಯಲ್ಲಿ ಸಕಾರಾತ್ಮಕ ಪ್ರಯೋಜನವನ್ನು ನೀಡುತ್ತದೆ ಎಂದು ಸಾಬೀತಾಗಿದೆ. ಎರಡು ದಶಕಗಳ ಕಾಲ ನಡೆದ ಅಧ್ಯಯನವು, ಮನೆಯಲ್ಲಿ ಗ್ರಂಥಾಲಯವಿದ್ದರೆ ಮಾತ್ರ ಮಕ್ಕಳ ಶೈಕ್ಷಣಿಕ ಯಶಸ್ಸು, ಶಬ್ದಕೋಶ ಅಭಿವೃದ್ಧಿ, ಓದಿನ ಕಡೆ ಗಮನ ಮತ್ತು ಉದ್ಯೋಗ ಸಾಧನೆ ಹೆಚ್ಚಾಗುತ್ತದೆ ಅಲ್ಲದೆ 

ಮಕ್ಕಳು ಮತ್ತು ಯುವಕರು ಪುಸ್ತಕಗಳಿಗೆ ಒಡ್ಡಿಕೊಳ್ಳುವುದು ದೀರ್ಘಕಾಲೀನ ಅರಿವಿನ ಸಾಮರ್ಥ್ಯಗಳನ್ನು ಬೆಳೆಸುವ ಸಾಮಾಜಿಕ ಅಭ್ಯಾಸಗಳ ಅವಿಭಾಜ್ಯ ಅಂಗವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಾಗೃತಿ ಸಮಿತಿಯ ಸದಸ್ಯರಾದ ರೇವಣಸಿದ್ದಪ್ಪ ದುಕಾನ, ಶೋಭಾದೇವಿ ಚೆಕ್ಕಿ,ಡಾ. ನಾಗಪ್ಪ ಗೋಗಿ ಡಾ.ಪರ್ವೀನ ಸುಲ್ತಾನ, ಕಾಶೀನಾಥ ಪಾಟೀಲ, ಶಿವಾನಂದ ಕಶೆಟ್ಟಿ, ವಿಶ್ವನಾಥ ಬಕರೆ,ಶಿವರಾಜ ಕಾಳಗಿ, ಮಲ್ಲಮ್ಮ ಕಾಳಗಿ, ವಿಶ್ವನಾಥ ಹರಕಂಚಿ, ಕಾಶಿಬಾಯಿ ಹರಕಂಚಿ,ಅಂಬಾರಾವ ವಡ್ಡ ನಕೇರಿ, ಲಕ್ಷ್ಮಿ ಪ್ರತಾಪಅಂಬಾಡೆ, ಶ್ವೇತಾ ವಡ್ಡನಕೇರಿ ಇದ್ದರು.ಶಿಕ್ಷಕ ಅಂಬಾರಾಯ ಮಡ್ದೆ ನಿರೂಪಿಸಿದರು ಡಾ. ನಾಗಪ್ಪ ಗೋಗಿ ವಂದಿಸಿದರು.