ಡಿ. ಕೆ ಶಿವಕುಮಾರ ನೂತನ ಸರಕಾರದಲ್ಲಿ ಖರ್ಗೆ, ಖಂಡ್ರೆ, ಡಾ.ಪಾಟೀಲ್ ಪುನಹಃ ಸಂಪುಟಕ್ಕೆ ಸೇರ್ಪಡೆ
ಡಿ. ಕೆ ಶಿವಕುಮಾರ ನೂತನ ಸರಕಾರದಲ್ಲಿ ಖರ್ಗೆ, ಖಂಡ್ರೆ, ಡಾ.ಪಾಟೀಲ್ ಪುನಹಃ ಸಂಪುಟಕ್ಕೆ ಸೇರ್ಪಡೆ ಹಿನ್ನೆಲೆ
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು
ಚಿಂಚೋಳಿ :ಡಿ. ಕೆ. ಶಿವಕುಮಾರ ಅವರು ರಾಜ್ಯದ 25 ನೇ ನೂತನ ಮುಖ್ಯಮಂತ್ರಿಯಾಗಿ ಹಾಗೂ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಮತ್ತು ಡಾ. ಶರಣಪ್ರಕಾಶ ಪಾಟೀಲ್ ಅವರು ಮರಳಿ ಸಚಿವ ಸಂಪುಟಕ್ಕೆ ಆಯ್ಕೆಗೊಂಡು ಪ್ರಮಾಣ ಸ್ವೀಕರಿಸಿದರ ಹಿನ್ನಲೆ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಿ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪಾಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ನಾಗೇಶ ಗುಣಾಜಿ, ಶಿವರಾಜ ಪಾಟೀಲ್ ಐನಾಪೂರ್, ಶುಭಾಷಚಂದ್ರ ಪಾಟೀಲ್ ಯಂಪಳ್ಳಿ, ಸೈಯದ್ ಶಬೀರ್, ಆರ್. ಗಣಪತರಾವ್, ಅನಿಲ ಕಟ್ಟಿ, ಬಸವರಾಜ ಕಡಬೂರ್,ರಾಜು ನವಲೆ,ಶಂಕರ ಕುಸಾಳೆ, ಸುರೇಶ ದೇಶಪಾಂಡೆ,ಅಯೂಬ್ ಖಾನ್ ಸಾಬ್, ಮಸೂದ್ ಸೌದಗಾರ ಅವರು ಉಪಸ್ಥಿತರಿದ್ದರು.
