ವಿದ್ಯಾರ್ಥಿಗಳ ಹೆಸರಿನಲ್ಲಿ ಬರುವ ಅನುದಾನ ದುರುಪಯೋಗ ಎಬಿವಿಪಿ ಖಂಡನೆ
ವಿದ್ಯಾರ್ಥಿಗಳ ಹೆಸರಿನಲ್ಲಿ ಬರುವ ಅನುದಾನ ದುರುಪಯೋಗ ಎಬಿವಿಪಿ ಖಂಡನೆ
ಕಲಬುರಗಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸರ್ಕಾರ ನೀಡುವ ರೇಷನ್ (ಅಕ್ಕಿ ,ಬೇಳೆ, ಬಾಳೆ ಹಣ್ಣು) ವನ್ನು ಅಕ್ರಮವಾಗಿ ಸಾಗಿಸಿ ವಿದ್ಯಾರ್ಥಿಗಳ ಹೊಟ್ಟೆಗೆ ಹೊಡೆಯುವ ಕೆಲಸ ನಡೆಯುತ್ತಿದೆ ಎಂಬುವುದು ಅತ್ಯಂತ ಖಂಡನೀಯವಾಗಿದೆ.ಈ ಅಕ್ರಮದಲ್ಲಿ ಭಾಗಿಯಾಗಿದವರನ್ನು ಅಮಾನತ್ತುಗೊಳಿಸಬೇಕು ಮತ್ತು ಅವರಿಗೆ ಉಗ್ರವಾದ ಶಿಕ್ಷೆ ನೀಡಬೇಕು ಎಂದು ಎಬಿವಿಪಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಊಟ ಇಲ್ಲ,ಹಾಸ್ಟೆಲ್ಗಳಲ್ಲಿ ಸ್ವಚ್ಛತೆ ಇಲ್ಲ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ವಿದ್ಯಾರ್ಥಿನಿಯರಿಗೆ ವಯಕ್ತಿಕ ಸಮಸ್ಯೆಗಳಿಗೆ ಶುಚಿ ಕೊಡುತ್ತಿಲ್ಲ ಅದನ್ನು ಮೇಲ್ವಿಚಾರಕ ವಿದ್ಯಾರ್ಥಿನಿಯರ ಕೇಳಿದ್ದರೆ ನೀವೂ ಹಣ ಕೊಟ್ಟು ಖರೀದಿಸಿ ಮಾಡಿ ಹೇಳುತ್ತಾರೆ.ಮೂಲಭೂತ ಸೌಲಭ್ಯಗಳ ಕೊರತೆ ತೀವ್ರವಾಗಿದೆ.ವಿದ್ಯಾರ್ಥಿಗಳ ಹೆಸರಿನಲ್ಲಿ ಬರುವ ಅನುದಾನ ಮತ್ತು ರೇಷನ್ ಅನ್ನು ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ನಡೆಸುವವರ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು.ಬಡ ಹಾಗೂ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ರಕ್ಷಿಸಬಾರದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆಗಳನ್ನು ಪರಿಹರಿಸಿ, ರೇಷನ್ ಅಕ್ರಮದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರನ್ನು ಅಮಾನತು ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆ ವತಿಯಿಂದ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಶರಣು ಪೂಜಾರಿ, ಜಿಲ್ಲಾ ಸಂಚಾಲಕ ಮಂಜುನಾಥ ಕೊನ್ನೂರ,ಹೇಮಂತ ವಿಭಾಗ ಸಂಘಟನ ಕಾರ್ಯದರ್ಶಿ, ಶ್ರವಣ, ಸಂದೇಶ, ಮನೋಜ ಪಾಟೀಲ,ಜಗಳಪ್ಪ ಹಾಗೂ ವಸತಿ ನಿಲಯದ ವಿದ್ಯಾರ್ಥಿನಿಯರ ಇದ್ದರು.
ಪ್ರಮುಖ ಬೇಡಿಕೆಗಳು:
1. ವಿದ್ಯಾರ್ಥಿನಿಯರಿಗಾಗಿ ಮೀಸಲಾದ ರೇಷನ್ ದುರ್ಬಳಕೆ ಕುರಿತು ಕ್ರಿಮಿನಲ್ ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆ ಮಾನ್ಯ ಆಯುಕ್ತರು ನಡೆಸಬೇಕು. 2.ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು.3.ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರವನ್ನು ಪ್ರತಿದಿನ ಓದಗಿಸಬೇಕು ಹಾಗೂ ಪ್ರತಿ ತಿಂಗಳಿಗೆ ಶುಚಿ ಕಿಟ್ ಒದಗಿಸಬೇಕು.4. ವಸತಿ ನಿಲಯದ ಸ್ವಚ್ಛತೆ ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು.5. ಶುದ್ಧ ಕುಡಿಯುವ ನೀರು, ಶೌಚಾಲಯ, ಸ್ನಾನಗೃಹ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು.
6. ವಿದ್ಯಾರ್ಥಿನಿಯರ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯವಾದ ಗ್ರಂಥಾಲಯಕ್ಕೆ ಮ್ಯಾಜಿನ್,ಪ್ರತಿದಿನ ವಾರ್ತಾಪತ್ರಿಕೆ ನೀಡಬೇಕು ಓದುವ ಕೊಠಡಿ ಒದಗಿಸಬೇಕು.7. ಕಲ್ಬುರ್ಗಿ ಜಿಲ್ಲೆಯ ಎಲ್ಲಾ ವಸತಿ ನಿಲಯಗಳಿಗೆ ತಕ್ಷಣ ಪರಿಶೀಲನಾ ತಂಡ ನೇಮಿಸಬೇಕು.
