ಅರವಿಂದ ಕಮಲಾಪುರ ಜನ್ಮದಿನ ನಿಮಿತ್ತ ಕಾನು ಆರ್. ಕೋವಿ ನೇತೃತ್ವದಲ್ಲಿ ಅನ್ನ ಸಂತರ್ಪಣೆ
ಅರವಿಂದ ಕಮಲಾಪುರ ಜನ್ಮದಿನ ನಿಮಿತ್ತ ಕಾನು ಆರ್. ಕೋವಿ ನೇತೃತ್ವದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ
ಕಲಬುರಗಿ: ದಲಿತ ಸೇನೆ ನಗರಾಧ್ಯಕ್ಷರಾದ ಅರವಿಂದ ಕಮಲಾಪುರ ಅವರ ೪೧ನೇ ಜನ್ಮದಿನದ ಪ್ರಯುಕ್ತ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆ ಎದುರುಗಡೆ ದಲಿತ ಸೇನೆ ನಗರ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ವಾರ್ಡ ನಂ.೩೯.ರ ಅಧ್ಯಕ್ಷ ಕಾನು ಆರ್. ಕೋವಿ ಅವರ ನೇತೃತ್ವದಲ್ಲಿ ನೀರಿನ ಬಾಟಲ್ ವ್ಯವಸ್ಥೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷರಾದ ಹಣಮಂತ ಜಿ. ಯಳಸಂಗಿ, ಜಿಲ್ಲಾಧ್ಯಕ್ಷ ಮಂಜುನಾಥ ಬಂಡಾರಿ, ಹಣಮಂತ ಇಟ್ಟಗಿ, ಸುಜಾತಾ ಅರವಿಂದ ಕಮಲಾಪೂರ, ಕಪೀಲ ವಾಲಿ, ಶಿವಕುಮಾರ ಗೋಲಾ, ಗುರು ಮಾಳಗಿ, ಶರಣಬಸವ ಎಸ್. ದೋಡಮನಿ, ಪಂಶೀಲ ಚಾಂಬಾಳ, ಸುನಿಲ್ ಆರ್. ಕೋವಿ, ಸಿದು ಬೇಲಸೂರ, ಹಣಮಂತ ಕಣಜಿಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
