ಮಿರಾಜಪಾಶಾ ಅವರ ಅಜ್ಮಿರಗೆ ಆತ್ಮಯಾನ
ಮಿರಾಜಪಾಶಾ ಅವರ ಅಜ್ಮಿರಗೆ ಆತ್ಮಯಾನ
ಮಲೆನಾಡಿನ ಪರಿಸರದಂತಿರುವ ಚಿಂಚೋಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಮಿರಾಜಪಾಶಾ ಹಸನಲ್ಲಿ ಅವರು ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಪಂಜಾ ಸವಾರಿ ಎನ್ನುವ ಕೃತಿಯನ್ನು ನೀಡುವುದರ ಜೊತೆಗೆ ಚಿಂಚೋಳಿ ಪರಿಸರದಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡ ಲೇಖಕ.
ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಕಥನ ಪ್ರಕಾರಕ್ಕೆ ವಿಶಿಷ್ಟ ಸ್ಥಾನವಿದೆ. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರು 1890ರಲ್ಲಿ 'ದಕ್ಷಿಣ ಭಾರತ ಯಾತ್ರೆ' ಎಂಬ ಪ್ರವಾಸ ಗ್ರಂಥವನ್ನು ಪ್ರಕಟಿಸಿದರು. ಇದು ಕನ್ನಡದ ಮೊದಲ ಪ್ರವಾಸ ಕಥನವಾಗಿದೆ. ಕುವೆಂಪು ಅವರ 'ಸಾಗರಯಾನ', ಶಿವರಾಮ ಕಾರಂತರ 'ಅಪೂರ್ವ ಪಶ್ಚಿಮ', ದಿನಕರ ದೇಸಾಯಿಯವರ 'ನಾ ಕಂಡ ಪಡುವಣ', ಬಿ.ಜಿ.ಎಲ್. ಸ್ವಾಮಿಯವರ 'ಅಮೆರಿಕದಲ್ಲಿ ನಾನು', ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 'ಅಲೆಮಾರಿ ಅಂಡಮಾನ್ ಹಾಗೂ ಮಹಾನದಿ ನೈಲ್', ಜಿ.ಎಸ್.ಶಿವರುದ್ರಪ್ಪನವರ 'ಮಾಸ್ಕೋದಲ್ಲಿ 22 ದಿನ' ಸಿದ್ದರಾಮ ಹೊನ್ಕಲ್ ಅವರ ಪಂಚ ನದಿಗಳ ನಾಡಿನಲ್ಲಿ ಹೀಗೆ ಅನೇಕ ಖ್ಯಾತನಾಮರ ಪ್ರವಾಸಕಥನಗಳು ಇಂದಿನ ಯುವ ಪೀಳಿಗೆಯ ಲೇಖಕರು ಇಷ್ಟ ಪಡುವಂತೆ ರೋಚಕತೆಯನ್ನು ಕಾಯ್ದುಕೊಂಡಿವೆ. ಈ ಪ್ರವಾಸ ಕಥನಗಳು ಓದುಗರಿಗೆ ವರ್ಣರಂಜಿತವಾಗಿ ಆಯಾ ಸ್ಥಳಗಳಿಗೆ ಕರೆದೊಯ್ಯುತ್ತವೆ.
ಡಾ.ಮಿರಾಜಪಾಶಾ ಹಸನಲ್ಲಿ ಅವರ 'ಅಜ್ಜಿರಗೆ ಆತ್ಮಯಾನ' ಎಂಬ ಜಿಯಾರತ್ ಯಾತ್ರೆಯ ಕೃತಿ ಕನ್ನಡದ ಪ್ರವಾಸ ಕಥನಗಳಲ್ಲಿ ಸೇರಿಕೊಂಡಿದ್ದು ಸಂತಸ ನೀಡಿದೆ.
ರೋಚಕತೆ ಮತ್ತು ಕುತೂಹಲದಿಂದ ನಿರಂತರ ಓಘದಲ್ಲಿ ಓದಿಸಿಕೊಂಡು ಹೋಗುವ 'ಅಜ್ಜಿರಗೆ ಆತ್ಮಯಾನ' ಕಥನದಲ್ಲಿ ಪ್ರವಾಸದ ಹಾದಿಯಲ್ಲಿ ಒಬ್ಬ ಮಹಾನ್ ಸೂಫಿ ಸಂತನ ಕಥೆ, ಅಜ್ಜಿರಗೆ ಆತ್ಮಯಾನಕ್ಕೆ ಮೊದಲು, ಅಜೀರ ಷರೀಫ್ ದರ್ಗಾ-ಒಂದು ಆಧ್ಯಾತ್ಮಿಕ ಸ್ವರ್ಗ, ರಾಜಸ್ಥಾನ ಭಾಷಾ ಪರಂಪರೆ, ಗುಡ್ಡಗಳ ಮಡಿಲಲ್ಲಿನ ತಾಜಲಾಪೂರ-ನನ್ನೊಳಗೆ ಬೆಳೆದ ಊರು, ಪ್ರಯಾಣದ ಆರಂಭ; 2018ರ ನೆನಪುಗಳು ಹಿನ್ನೆಲೆಯಲ್ಲಿ, ಹೈದರಾಬಾದ್ ದಿಂದ ಅಜೀರವರೆಗೆ -ಎರಡು ರಾತ್ರಿಗಳು, ಅಜ್ಜರದ ಮುಂಜಾನೆ-ಒಂದು ಯಾತ್ರೆಯ ನಿಶ್ಯಬ್ದ ಕ್ಷಣ, ದರ್ಗಾದ ಶಾಂತಿ ಮತ್ತು ಲಾಡ್ಜ್ ನ ದಿನಾರಂಭ, ಮನಸ್ಸಿನೊಳಗಿನ ಆಕಾಂಕ್ಷೆ, ಮನ್ನತ್ ನಿಂದ ಮನ್ನಣೆವರೆಗೂ...ಹೀಗೆ ಮುಂದುವರೆದು ಪ್ರವಾಸದ ಕೊನೆಯ ಹೆಜ್ಜೆ; ಚಿಂಚೋಳ್ಳಿಯಿಂದ ತಾಜಲಾಪೂರದವರೆಗೆ ಎಂಬಲ್ಲಿ ಒಟ್ಟು 30 ಅಧ್ಯಾಯಗಳಿವೆ.
ಈ 'ಅಜ್ಜಿರಗೆ ಆತ್ಮಯಾನ' ದಲ್ಲಿ ಅಜ್ಜರ ನಗರದ ಮತ್ತು ಸುತ್ತಮುತ್ತಲಿನ ಅನೇಕ ಪ್ರವಾಸಿ ಸ್ಥಳಗಳ ಕುರಿತು ವಿಸ್ತ್ರತ ಮಾಹಿತಿಯನ್ನು ಒದಗಿಸಿದ್ದು, ಇದು ಅಶ್ಮೀರ ಪ್ರವಾಸ ಕೈಗೊಳ್ಳುವವರಿಗೆ ಮಾಹಿತಿಪೂರ್ಣ ಪ್ರವಾಸಿ ಕೈಪಿಡಿಯಾಗಿದೆ. ಅಧ್ಯ ದಿನ್ ಕಾ ಜೋಪ್ರಾ, ಮೇಯೊ ಕಾಲೇಜ, ಅನಸಾಗರ್ ಸರೋವರ, ಸೋನಿಜಿ ಕಿ ನಾಸಿಯಾನ್, ಫಾಯ್ ಸಾಗರ್ ಸರೋವರ, ನರೇಲಿ ಜೈನ ದೇವಾಲಯ, ಸಾಯಿಬಾಬಾ ದೇವಾಲಯ, ಅಜೀರ ಸರ್ಕಾರಿ ವಸ್ತು ಸಂಗ್ರಹಾಲಯ, ತಾರಾಗಢ, ಕೋಟೆ, ಕಿಶನ್ ಗಡ್ ಕೋಟೆ, ಪ್ರಜ್ಞಾಶಿಖರ್ ತೋಡ್ ಗಡ್, ವಿಕ್ಟೋರಿಯಾ ಗಡಿಯಾರ ಗೋಪುರ, ಪ್ರಥ್ವಿರಾಜ್ ಸ್ಮಾರಕ, ಅನಸಾಗರ್ ಬರದಾರಿ, ಶಹಿದ್ ಸ್ಮಾರಕ ಹೀಗೆ ಅನೇಕ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಇಲ್ಲಿದೆ. ರಾಜಸ್ಥಾನದ ಇತಿಹಾಸ, ಭಾಷಾ ಪರಂಪರೆ, ಖಾಧ್ಯಗಳ ಪರಿಚಯ, ನೃತ್ಯ-ಗಾಯನ-ಸಂಗೀತ ಕಲೆಗಳ, ಹಬ್ಬಹರಿದಿನಗಳ ಪರಿಚಯವನ್ನೂ ಇವರು ಮಾಡಿದ್ದಾರೆ.
ಈ ಕೃತಿಯು ಅಲಮೇಲನ ಬೆರಗು ಪ್ರಕಾಶನದಿಂದ 2026 ರಲ್ಲಿ ಪ್ರಕಟಗೊಂಡಿದ್ದು ಈ ಕೃತಿಯಲ್ಲಿ 144 ಪುಟಗಳಿದ್ದು 175 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ
