RCB ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ: ಹಳ್ಳಿಸಲಗರ ಗ್ರಾಮದಲ್ಲಿ ವಿಶಿಷ್ಟ ಪಂದ್ಯ ವೀಕ್ಷಣೆ

RCB ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ: ಹಳ್ಳಿಸಲಗರ ಗ್ರಾಮದಲ್ಲಿ ವಿಶಿಷ್ಟ ಪಂದ್ಯ ವೀಕ್ಷಣೆ

RCB ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ: ಹಳ್ಳಿಸಲಗರ ಗ್ರಾಮದಲ್ಲಿ ವಿಶಿಷ್ಟ ಪಂದ್ಯ ವೀಕ್ಷಣೆ

ಆಳಂದ : ತಾಲೂಕಿನ ಹಳ್ಳಿಸಲಗರ ಗ್ರಾಮದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳು ತಮ್ಮ ಅಪಾರ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಿದ್ದಾರೆ.

RCB ಪಂದ್ಯವನ್ನು ವೀಕ್ಷಿಸಲು ಗ್ರಾಮಸ್ಥರು ಕಂಕರದ ರಾಶಿಯ ಮೇಲೆಯೇ ಲ್ಯಾಪ್‌ಟಾಪ್ ಇಟ್ಟು ಪಂದ್ಯ ಪ್ರದರ್ಶಿಸಿ, ಅದರ ಸುತ್ತಲೂ ಚಾಪೆ ಹಾಸಿ ಮಕ್ಕಳು, ಯುವಕರು ಹಾಗೂ ವೃದ್ಧರು ಒಟ್ಟಾಗಿ ಕುಳಿತು ಪಂದ್ಯ ವೀಕ್ಷಿಸಿದರು. ಗ್ರಾಮೀಣ ವಾತಾವರಣದಲ್ಲಿ ಎಲ್ಲರೂ ಒಂದೇ ಸ್ಥಳದಲ್ಲಿ ಸೇರಿ ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ಸೂಚಿಸಿದ ದೃಶ್ಯ ಗಮನ ಸೆಳೆಯಿತು.

ಪಂದ್ಯದ ವೇಳೆ ಎದುರಾಳಿ ತಂಡದ ಆಟಗಾರರು ಔಟಾದಾಗ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. RCB ತಂಡದ ಪ್ರತಿಯೊಂದು ಉತ್ತಮ ಪ್ರದರ್ಶನಕ್ಕೂ ಹರ್ಷೋದ್ಗಾರಗಳು ಮೊಳಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕ್ರಿಕೆಟ್ ಮೇಲಿನ ಆಸಕ್ತಿ ಮತ್ತು RCB ತಂಡದ ಮೇಲಿನ ಅಭಿಮಾನಕ್ಕೆ ಹಳ್ಳಿಸಲಗರ ಗ್ರಾಮದ ಈ ದೃಶ್ಯ ಸಾಕ್ಷಿಯಾಗಿದ್ದು, ಅಭಿಮಾನಿಗಳು ಯಾವುದೇ ಸೌಲಭ್ಯಗಳ ಕೊರತೆಯನ್ನು ಲೆಕ್ಕಿಸದೆ ತಮ್ಮ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ವಿಶೇಷವಾಗಿದೆ. ಗ್ರಾಮಸ್ಥರ ಈ ಅಪರೂಪದ ಅಭಿಮಾನವನ್ನು ಕಂಡವರು “ಇವರ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.