ಹೋರಾಟದಿಂದ ಸಾಧನೆ: ಗೌರವ ಡಾಕ್ಟರೇಟ್ ಅನ್ನು ಹೋರಾಟಗಾರರಿಗೆ ಅರ್ಪಿಸಿದ ಶಿಕ್ಷಕಿ ಕಟ್ಟಿ

ಹೋರಾಟದಿಂದ ಸಾಧನೆ: ಗೌರವ ಡಾಕ್ಟರೇಟ್ ಅನ್ನು ಹೋರಾಟಗಾರರಿಗೆ ಅರ್ಪಿಸಿದ ಶಿಕ್ಷಕಿ ಕಟ್ಟಿ

ಕಲಬುರಗಿ: ಒಳ್ಳೆಯ ಮನಸ್ಸಿನಿಂದ ಮಾಡಿದ ಸೇವೆ ಎಂದಿಗೂ ವ್ಯರ್ಥವಾಗುವುದಿಲ್ಲ; ದೇವರು ಪ್ರತಿಯೊಂದು ಸತ್ಪ್ರವೃತ್ತಿಯನ್ನೂ ನೆನಪಿನಲ್ಲಿ ಇಟ್ಟು ಸೂಕ್ತ ಸಮಯದಲ್ಲಿ ಫಲ ನೀಡುತ್ತಾನೆ.ಎಂದು ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು .

ನಗರದ ಶರಣಬಸವೇಶ್ವರ ಸಂಸ್ಥಾನದ ಮಹಾ ಮನೆಯಲ್ಲಿ ನಡೆದ ಗೌರವ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  ಹಲವು ಸವಾಲುಗಳನ್ನು ಎದುರಿಸಿ ತಮ್ಮ ಸಾಧನೆಯ ಮೂಲಕ ಮಾದರಿಯಾಗಿರುವ ವಿದ್ಯಾವಂತೆಯೊಬ್ಬರು ನಾಲ್ಕು ಬಾರಿ ಪಿಎಚ್‌ಡಿ ಪ್ರಬಂಧ ಬರೆಯುತ್ತಿದ್ದರೂ ಸಂಪೂರ್ಣತೆ ಸಾಧಿಸಲಾಗದ ಹಿನ್ನೆಲೆಯಲ್ಲಿ ಬೇಸರಪಡದೇ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಬಳಿಕ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧಿಕಾರಿಯಾಗಿದ್ದ ಶಾಲಿನಿ ರಜನೀಶ್ ಅವರ ಗಮನಕ್ಕೆ ಬಂದು ಸಮಿತಿಯಲ್ಲಿ ಬರವಣಿಗೆ ಕಾರ್ಯದಲ್ಲಿ ತೊಡಗಿಸಿಕೊಂಡರು.

ಮುಂದೆ 371ಜೆ ತಿದ್ದುಪಡಿ ಜಾರಿಗೆ ಬಂದ ಸಂದರ್ಭದಲ್ಲಿ ಅವರು ರಚಿಸಿದ ವಿಷಯವನ್ನು ಪುಸ್ತಕದಲ್ಲಿ ಅಳವಡಿಸಲಾಗಿದ್ದು, ಈ ಸಾಧನೆಗೆ ಸಂತೋಷ ವ್ಯಕ್ತಪಡಿಸಿದರು. ತಮ್ಮ ಈ ಮಟ್ಟದ ಬೆಳವಣಿಗೆಗೆ ಕಲ್ಯಾಣ ಕರ್ನಾಟಕ ಭಾಗದ ಸಂಘ-ಸಂಸ್ಥೆಗಳ ಹೋರಾಟವೇ ಕಾರಣವೆಂದು ಅವರು ತಿಳಿಸಿದರು. ಅಲ್ಲದೆ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದಿಂದ ದೊರೆತ ಗೌರವ ಡಾಕ್ಟರೇಟ್ ಪದವಿಯನ್ನು ಈ ಭಾಗದ ಹೋರಾಟಗಾರರಿಗೆ ಡಾ ಸಂಗೀತ ಕಟ್ಟಿ ಅವರು ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಆರ್.ಕೆ. ಹುಡುಗಿ ಅಭಿನಂದನೆ ವ್ಯಕ್ತಪಡಿಸಿದರೆ, ಹೋರಾಟಗಾರ ಲಕ್ಷ್ಮಣ ದಸ್ತಿ ಅವರು ನಿರೂಪಣೆ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ ಪಾಳಾ, ಮುತ್ತಣ್ಣ  ನಾಡಗೇರಿ, ಎಮ್ ಬಿ.ನಿಂಗಪ್ಪ , ಅಬ್ದುಲ್ ರಹೀಂ, ಎಮ್ ಎಮ್ ಜಾಗಿರದಾರ, ಖಾದ್ರಿ ರೌಫ್ಸೇರಿದಂತೆ , ಡಾ ಗುಳಶೆಟ್ಟಿ, ಅಸಲಮ್ ಚೌಂಗೆ , ಸನಾವುಲ್ಲಾ, ಸೇರಿದಂತೆ ಉಪಸ್ಥಿತರಿದ್ದರು.