ಸಂಗೀತ ಸಾಮ್ರಾಜ್ಞೆ ಎಸ್ ಜಾನಕಿಯವರ ನೆನಪೇ ಆರಾಧನೆ - ಪ್ರೊ. ಶೋಭಾ ಚೆಕ್ಕಿ

ಸಂಗೀತ ಸಾಮ್ರಾಜ್ಞೆ  ಎಸ್ ಜಾನಕಿಯವರ  ನೆನಪೇ ಆರಾಧನೆ - ಪ್ರೊ. ಶೋಭಾ ಚೆಕ್ಕಿ

ಸಂಗೀತ ಸಾಮ್ರಾಜ್ಞೆ ಎಸ್ ಜಾನಕಿಯವರ ನೆನಪೇ ಆರಾಧನೆ - ಪ್ರೊ. ಶೋಭಾ ಚೆಕ್ಕಿ

ಖ್ಯಾತ ಗಾಯಕರಾದ ಎಸ್ ಜಾನಕಿ ಅಮ್ಮನವರ ನೆನಪಿಗಾಗಿ ಶ್ರೀ ಸರಸ್ವತಿ ಸಂಗೀತ ಸಂಸ್ಥೆ ಉಡಗಿ ರೋಡ್ ಸೇಡಂ ನಲ್ಲಿರುವ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಶ್ರೀ ರವಿ ಸಾಹು ನೀಲಹಳ್ಳಿ ಮುಖ್ಯಸ್ಥರು ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಶಾಲೆ ಸೇಡಂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಅಡಗಿರುತ್ತದೆ. ಸೇಡಂನ ಸರಸ್ವತಿ ಸಂಗೀತ ಸಂಸ್ಥೆಯ ಮಕ್ಕಳು ಸಂಗೀತ ಕಲಿಯಲು ಅವಕಾಶ ನೀಡುತ್ತಿದೆ ಅವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿ, ನಾಡು ಗುರುತಿಸುವಂತವರಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಆರತಿ ಕಡಗಂಚಿ ಉಪ ಪ್ರಾಚಾರ್ಯರು ಶ್ರೀಮತಿ ನರ್ಮದಾ ದೇವಿ ಗಿಲ್ಡಾ ಮಹಿಳಾ ಪದವಿ ಮಹಾವಿದ್ಯಾಲಯ ಸೇಡಂ ಅವರು ಗಾನ ಕೋಗಿಲೆ ಎಸ್ ಜಾನಕಿ ಅವರು ಸಂಗೀತ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ಪ್ರಸ್ತುತ ಪಡಿಸಿದರು 

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆ ಭಾರತಿ ಹೊಲಿಗೆ ಕೇಂದ್ರದ ಪ್ರಾಚಾರ್ಯರಾದ ಲಕ್ಷ್ಮೀ ಸಿಂಪಿ ಅಥಿತಿಗಳಾಗಿ ಪಾಲ್ಗೊಂಡಿದ್ದರು.

ಸಂಗೀತ ಸಂಸ್ಥೆಯ ವಿದ್ಯಾರ್ಥಿಗಳಾದ ಪಾವನಿ . ಪರಿಣಿತ. ಸಿಂಧು. ಪ್ರೇಮ. ಪ್ರೇಕ್ಷಾ. ಗಾರ್ಗಿ. ಅದಿತಿ. ಸ್ವರೂಪ. ವೇದಾ. ಅನ್ವಿತ. ಅಭಿಸಾರಿಕಾ. ಸಾಯಿಪ್ರಿಯ. ರೀತಿಕಾ. ಶ್ರೀನಿಧಿ. ಅನ್ವೀರ. ಎಸ್ ಜಾನಕಿಯವರು ಹಾಡಿದ ಹಾಡುಗಳನ್ನು ಹಾಡಿ ಸಂಗೀತಾಸಕ್ತರ ಗಮನ ಸೆಳೆದರು. 

ದಯಾನಂದ ಜೀವರ್ಗಿ ಹಾರ್ಮೋನಿಯಂ ವಾದಕರು ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ರಮೇಶ್ ವಿಶ್ವಕರ್ಮ ತಬಲಾ ವಾದಕರು ಸಾಥ್ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಹಿತಿ ಪ್ರೊ. ಶೋಭಾದೇವಿ ಚೆಕ್ಕಿ ಮಾತನಾಡುತ್ತಾ ಸಂಗೀತ ಸಾಮ್ರಾಜ್ಞೆ ಎಸ್ ಜಾನಕಿಯವರ ನೆನಪೆ ಆರಾಧನೆ. ಅವರು 60 ವರ್ಷಗಳ ಕಾಲ ನಿರಂತರವಾಗಿ ಸಂಗೀತ ಲೋಕಕ್ಕೆ ಕೊಡುಗೆಯನ್ನು ನೀಡಿದ್ದಾರೆ.ಅವರ ಜನ್ಮ ಭೂಮಿ ಆಂಧ್ರ ಪ್ರದೇಶವಾಗಿದ್ದರೂ ಕನ್ನಡ ನಾಡನ್ನು ಕರ್ಮಭೂಮಿಯನ್ನಾಗಿಸಿದ್ದರು.ಅವರ ಕನ್ನಡ ಪ್ರೀತಿ ಅನುಪಮವಾಗಿತ್ತು. 10,000 ಕನ್ನಡ ಭಾಷೆಯಲ್ಲಿ ಹಾಡುಗಳನ್ನು ಹಾಡಿದ್ದಾರೆ. ನಾಡಿನ 20 ಭಾಷೆಗಳಲ್ಲಿ 48000 ಹಾಡುಗಳನ್ನು ಹಾಡುತ್ತಾ 88 ವರ್ಷಗಳ ಸಾರ್ಥಕ ಬಾಳನ್ನು ನಡೆಸಿದ್ದಾರೆ. ಗೌರವ ಡಾಕ್ಟರೇಟ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಮಟ್ಟದ ಹಿನ್ನೆಲೆ ಗಾಯಕಿ ಪ್ರಶಸ್ತಿ,ಬೇರೆ ಬೇರೆ ರಾಜ್ಯಗಳು ನೀಡಿದ ಅನೇಕ ರಾಜ್ಜಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಿದ್ಯಾರ್ಥಿಗಳು ಎಸ್ ಜಾನಕಿ ಅಮ್ಮನವರಿಂದ ಸ್ಪೂರ್ತಿಯನ್ನು ಪಡೆದು ಸಾಧನೆ ಮಾಡಬೇಕೆಂದು ನುಡಿದರು.

 ಶ್ರೀ ಸರಸ್ವತಿ ಸಂಗೀತ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಲಲಿತಾ ಎಸ್ ಕೋಕಟ್ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ರೇಖಾ ವಂದಿಸಿದರು. ವನಿತಾ ನಿರೂಪಿಸಿದರು. ಮಹಾದೇವಿ ಚಂದನಕೇರಾ. ಉಮಾ ಊಡುಗಿ ,ಮಂಗಳಾ ನಾಸಿ. ಶಿವಲೀಲಾ ಹಲಕರ್ಟಿ, ಪ್ರೀತಿ ಬಿರಾದರ . ಶಾಂತಕುಮಾರ್ ಕೋಕಟ್. ಉಪಸ್ಥಿತರಿದ್ದರು.