ಬಿಜೆಪಿ ಕಛೇರಿಯಲ್ಲಿ ಕಾರ್ಗಿಲ್ ಯೋಧರ ಸ್ಮರಣೆ

ಬಿಜೆಪಿ ಕಛೇರಿಯಲ್ಲಿ ಕಾರ್ಗಿಲ್ ಯೋಧರ ಸ್ಮರಣೆ

ಬಿಜೆಪಿ ಕಛೇರಿಯಲ್ಲಿ ಕಾರ್ಗಿಲ್ ಯೋಧರ ಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮುಖಂಡರು ಹುತಾತ್ಮ ಯೋಧರಿಗೆ ಜಯ ಘೋಷಿಸುವ ಮೂಲಕ ‘ಕಾರ್ಗಿಲ್ ವಿಜಯೋತ್ಸವ’ ಆಚರಿಸಿದರು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಇಪ್ಪತ್ತೇಳು ವರ್ಷಗಳ ಹಿಂದೆ ಭಾರತದ ಗಡಿಪ್ರದೇಶ ಕಾರ್ಗಿಲ್‌ನಲ್ಲಿ ಅಘೋಷಿತ ಯುದ್ಧವನ್ನು ಸಾರುವ ಮೂಲಕ ದೇಶದ 527 ವೀರಯೋಧರನ್ನು ಬಲಿತೆಗೆದುಕೊಂಡ ಪಾಕಿಸ್ತಾನಕ್ಕೆ ನಮ್ಮಸೇನೆ ತಕ್ಕ ಪ್ರತ್ಯುತ್ತರ ನೀಡಿದ ಇತಿಹಾಸದ ಪ್ರಯುಕ್ತ ‘ಕಾರ್ಗಿಲ್ ವಿಜಯೋತ್ಸವ’ ಎಂದರು.

1600 ಅಡಿ ಎತ್ತರದ ಕಾರ್ಗಿಲ್ ಪರ್ವತದಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಬೆಳೆಯುವದಿಲ್ಲ. ಅಂತಹ ಸ್ಥಳದಲ್ಲಿ ತಮ್ಮ ಪ್ರಾಣವನ್ನು ತೆತ್ತು ಜಯ ತಂದು ಕೋಡುವುದು ಭಾರತೀಯ ಸೈನಿಕರ ಬಯಕೆಯಾಗಿತ್ತು. ಭಾರತಾಂಬೆಯ ಋಣ ತೀರಿಸಲು ತಕ್ಕ ಸಂದರ್ಭ ಎಂದು ತೀಳಿದು ಕೆಚ್ಚೆದೆಯಿಂದ ಹೋರಾಡಿದರು. ಪಾಕಿಯ ಅರ್ಧದಷ್ಟು ಸೈನಿಕರು ಇಲ್ಲೆ ಮರಣ ಹೊಂದಿದರು. ಇದನ್ನು ವಶಪಡಿಸಿಕೊಂಡ ನಂತರ ಯುದ್ದದ ಚಿತ್ರಣವೇ ಬದಲಾಯಿತು.

 1999 ಜುಲೈ 26ರಂದು ಭಾರತೀಯ ಸೈನ್ಯ ಅಳಿದುಳಿದ ಪಾಕಿ ಸೈನಿಕರನ್ನು ಹೊಡೆದೋಡಿಸಿತ್ತು. ದಿಗ್ವಿಜಯದ ಸಂಕೇತವಾಗಿ ತ್ರಿವರ್ಣ ಧ್ವಜವನ್ನು ನೆಟ್ಟು ಸಂಭ್ರಮಿಸಿತು.ಇಂತಹ ಒಂದು ದಿಟ್ಟ ಹೋರಾಟದ ಭಾಗವೇ ನಮ್ಮ ಈ ವಿಜಯೋತ್ಸವ ಎಂದು ಹೇಳಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ ವೀರ ಯೋಧರ ಮರಣ, ಕೆಚ್ಚೆದೆಯ ಹೋರಾಟ ಒಂದು ಯಶಸ್ವಿ ಯಶೋಗಾಥೆಯಾಗಿದೆ ಎಂದರು. ವೀರ ಮರಣವನ್ನಪ್ಪಿದ ಯೋಧನಿಗೆ ಕಂಬನಿಯನ್ನೇನೊ ಮಿಡಿದಿದ್ದೇವೆ. ಆದರೆ, ಬಾರದ ಲೋಕಕ್ಕೆ ಹೋಗಿರುವ ಮಗ ಇನ್ನೆಂದೂ ಬರಲಾರ ಎಂದು ಗೊತ್ತಿದ್ದರೂ `ಹೋಗಿ ಬರುತ್ತೇನೆಂದು ಹೇಳಿ ಹೋದ ಮಗ ಇನ್ನೂ ಬಂದಿಲ್ಲ' ಎಂದು ಎಷ್ಟೋ ಅಮ್ಮಂದಿರು ತಮ್ಮ ಕರುಳ ಕುಡಿಗಾಗಿ ಈಗಲೂ ಕಾಯುತ್ತಿದ್ದಾರೆ.

 ನಮ್ಮವರ ರಕ್ತವಿನ್ನು ಹಿಮಾಲಯದ ಹಿಮದಲ್ಲಿ ಹೆಪ್ಪುಗಟ್ಟಿದೆ. ನಮಗಾಗಿ ನೆತ್ತರ ಸುರಿಸಿದವರನ್ನು ಇಂದು ನೆನಪಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.

ಈ ಸಂಧರ್ಭದಲ್ಲಿ ಮುಖಂಡರಾದ ವಿಠಲ ನಾಯಕ,ಶರಣಗೌಡ ಚಾಮನೂರ,ಭೀಮರಾವ ದೊರೆ,ಗಿರಿಮಲ್ಲಪ್ಪ ಕಟ್ಟಿಮನಿ,

ಯಮನಪ್ಪ ನವನಳ್ಳಿ,ಹರಿ ಗಲಾಂಡೆ,ಕಿಶನ ಜಾಧವ,ಅಂಬದಾಸ ಜಾಧವ,ಮಲ್ಲಿಕಾರ್ಜುನ ಸಾತಖೇಡ,

ದತ್ತಾ ಖೈರೆ,ರಾಜು ಪವಾರ,ಕಾಶಿನಾಥ ಶೆಟಗಾರ,ಚಂದ್ರಶೇಖರ ಬೆಣ್ಣೂರ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,ಉಮಾಭಾಯಿ ಗೌಳಿ,ಸುನಿಲ ಹುಗಾರ,ಸುನಿಲ ರಾಠೋಡ ಸೇರಿದಂತೆ ಇತರರು ಇದ್ದರು.