ಸಗರ ಮೂಲಭೂತ ಸೌಲಭ್ಯ ಹೋರಾಟದ ಪೂರ್ವಭಾವಿ ಸಭೆ.
ಸಗರ ಮೂಲಭೂತ ಸೌಲಭ್ಯ ಹೋರಾಟದ ಪೂರ್ವಭಾವಿ ಸಭೆ.
ಶಹಪುರ : ತಾಲೂಕಿನ ಬಹುದೊಡ್ಡ ಗ್ರಾಮವಾದ ಸಗರ ಗ್ರಾಮವು ಸುತ್ತಲು ಹತ್ತಾರು ಹಳ್ಳಿಗಳು ಬರುವುದರಿಂದ ಈ ಗ್ರಾಮವು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದೆ ಎಂದು ಯುವ ಮುಖಂಡ ಶ್ರೀಕಾಂತಗೌಡ ಸುಬೇದಾರ ಹೇಳಿದರು.
ಸಗರ ಗ್ರಾಮದ ಹೊರವಲಯದಲ್ಲಿರುವ ಸುಬೇದಾರ ಗೆಸ್ಟ್ ಹೌಸ್ ನಲ್ಲಿ ಗ್ರಾಮದ ಮುಖಂಡರೊಂದಿಗೆ ಚರ್ಚೆ ನಡೆಸಿ,ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಹೋರಾಟದ ರೂಪುರೇಷೆಗಳ ಕುರಿತು ಪೂರ್ವಭಾವಿ ಸಭೆಯಲ್ಲಿ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಮಾತನಾಡಿದರು.
ಸಗರ ಗ್ರಾಮದಲ್ಲಿರುವ ಕೆಇಬಿ 110 ಕೆವ್ ಮೇಲ್ದರ್ಜೆಗೇರಿಸಬೇಕು, ಹೋಬಳಿಯನ್ನಾಗಿ ಘೋಷಿಸಬೇಕು,ಬಾಲಕಿಯರ ಕನ್ಯಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮೇಲ್ದರ್ಜೆಗೇರಿಸಬೇಕು, ಪದವಿ ಕಾಲೇಜು ಸ್ಥಾಪನೆಯಾಗಬೇಕು, ಜೊತೆಗೆ ಸರಕಾರಿ ಆಸ್ಪತ್ರೆಗೆ ಕಾಯಂ ವೈದ್ಯರ ನೇಮಕ ಮಾಡಬೇಕು ಎಂಬುದರ ಜೊತೆಗೆ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಪ್ಪ ಕೂಡ್ಲೂರು,ಶಿವರೆಡ್ಡಿ ಮಲ್ಲೇದ,ಶಂಕರ ಪಡಶೆಟ್ಟಿ, ಭೀಮರಾಯ ಉಮ್ಮರದೊಡ್ಡಿ, ಬಾಗಪ್ಪ ಮಸ್ತಾನಿ,ಈರಪ್ಪ ಮೋರೆ,ಮಲ್ಲುಭಾವಿಕಟ್ಟಿ, ವಾಸಿಮ್ ಮೇತ್ರಿ,ಪರಶುರಾಮ ಪೂಜಾರಿ ಸೇರಿದಂತೆ ಇನ್ನಿತರ ರೂಪಸಿತರಿದ್ದರು.
