ಕಾರ್ಗಿಲ್ ವಿಜಯೋತ್ಸವ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಜಾಗೃತಿ ಜಾಥಾ, ಮಾಜಿ ಸೈನಿಕರಿಗೆ ಸನ್ಮಾನ

ಕಾರ್ಗಿಲ್ ವಿಜಯೋತ್ಸವ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಜಾಗೃತಿ ಜಾಥಾ, ಮಾಜಿ ಸೈನಿಕರಿಗೆ ಸನ್ಮಾನ

ಕಾರ್ಗಿಲ್ ವಿಜಯೋತ್ಸವ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಜಾಗೃತಿ ಜಾಥಾ, ಮಾಜಿ ಸೈನಿಕರಿಗೆ ಸನ್ಮಾನ

ಕಲಬುರಗಿ, ಜು.26: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಕಲಬುರಗಿ ವತಿಯಿಂದ ಭಾನುವಾರ ಕಾರ್ಗಿಲ್ ವಿಜಯೋತ್ಸವವನ್ನು ದೇಶಭಕ್ತಿ ಮತ್ತು ಗೌರವದ ಭಾವನೆಯೊಂದಿಗೆ ಆಚರಿಸಲಾಯಿತು. ಈ ಅಂಗವಾಗಿ ಜಾಗೃತಿ ಜಾಥಾ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಸಂಸ್ಥೆಯ ಕೇಂದ್ರ ಕಚೇರಿಯಿಂದ ಜಾಥಾಕ್ಕೆ ಚಾಲನೆ ನೀಡಲಾಯಿತು. ಕಬ್–ಬುಲ್‌ಬುಲ್, ಸ್ಕೌಟ್ಸ್–ಗೈಡ್ಸ್, ರೂವರ್–ರೇಂಜರ್ಸ್ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದರು. ಸರ್ಕಾರಿ ಎಂ.ಪಿ.ಎಚ್.ಎಸ್. ಶಾಲೆ, ಸೂಪರ್ ಮಾರ್ಕೆಟ್‌ನಿಂದ ಆರಂಭವಾದ ಜಾಥಾವು ತಹಸೀಲ್ದಾರ್ ಕಚೇರಿ, ಜಗತ್ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಚೌಕ್ ಪೊಲೀಸ್ ಠಾಣೆ ಮಾರ್ಗವಾಗಿ ಜಿಲ್ಲಾ ಸಂಸ್ಥೆಯ ಕೇಂದ್ರ ಕಚೇರಿಗೆ ತಲುಪಿತು.

ಬಳಿಕ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಪೀರಪ್ಪ ಹೂಗೂಂಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ತೋರಿದ ಶೌರ್ಯ, ತ್ಯಾಗ ಮತ್ತು ದೇಶಪ್ರೇಮವನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ದೇಶಸೇವೆ ಸಲ್ಲಿಸಿದ ಮಾಜಿ ಸೈನಿಕರನ್ನು ಜಿಲ್ಲಾ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಸೈನಿಕರು ಕಾರ್ಗಿಲ್ ಯುದ್ಧದ ಅನುಭವಗಳು, ದೇಶಕ್ಕಾಗಿ ಮಾಡಿದ ತ್ಯಾಗ ಹಾಗೂ ಯುವಜನರಲ್ಲಿ ದೇಶಭಕ್ತಿಯ ಮನೋಭಾವ ಬೆಳೆಸುವ ಅಗತ್ಯತೆಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಕಬ್–ಬುಲ್‌ಬುಲ್, ಸ್ಕೌಟ್ಸ್–ಗೈಡ್ಸ್, ರೂವರ್–ರೇಂಜರ್ಸ್ ವಿಭಾಗಗಳ 260ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಸೈಯದ್ ಮೊಹಮ್ಮದ್, ಜಿಲ್ಲಾ ಜಂಟಿ ಕಾರ್ಯದರ್ಶಿ ರಾಜಕುಮಾರ್ ಮರಾಠೆ, ಜಿಲ್ಲಾ ಸಹ ಕಾರ್ಯದರ್ಶಿ ಸಿದ್ದರಾಮ ರಾಜಮಾನೆ, ಜಿಲ್ಲಾ ಖಜಾಂಚಿ ಪ್ರಮೀಳಾ ಪಾಟೀಲ್,ಅಮರೇಶ ಕೂರಿ (DTC-S),ಸುಮಂಗಲಾ ಕೂರಿ (DTC-G),ಶರೀಫ್ ಹತ್ತಿಮತ್ತೂರ್ (ASOC), ಚಿಂಚೂಳಿ ತಾಲೂಕು ಕಾರ್ಯದರ್ಶಿ ಶಿಲಿಸಿದ್ದ ಹೂಗಾರ, ಹಿರಿಯ ಶಿಕ್ಷಕ ರಾಜೇಂದ್ರ ಸರ್ ಸೇರಿದಂತೆ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಲಬುರಗಿ ದಕ್ಷಿಣ ತಾಲೂಕು ಕಾರ್ಯದರ್ಶಿ ಗುರುಲಿಂಗಯ್ಯ ಅವರು ನಿರೂಪಿಸಿದರು. ಕಲಬುರಗಿ ಉತ್ತರ ತಾಲೂಕು ಕಾರ್ಯದರ್ಶಿ ಜಯಪ್ರಕಾಶ್ ಸರ್ ಅವರು ಸ್ವಾಗತಿಸಿದರು. ಜಿಲ್ಲಾ ಖಜಾಂಚಿ ಪ್ರಮೀಳಾ ಪಾಟೀಲ್ ಅವರು ವಂದನಾರ್ಪಣೆ ಸಲ್ಲಿಸಿದರು.