ಕರ್ನಾಟಕ ದಲಿತ ಸಂಘರ್ಷ ಸಮಿತಿಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಕಲಬುರಗಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ದಲಿತ ಸಂಘರ್ಷ ಸಮಿತಿಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಕಲಬುರಗಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕಲಬುರಗಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಕಲಬುರಗಿ ಜಿಲ್ಲಾ ಶಾಖೆಯ ಸಭೆಯು ಇತ್ತೀಚೆಗೆ ನಗರದ ಐವನ್-ಇ-ಶಾಹಿ ನೂತನ ಅತಿಥಿ ಗೃಹದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕರಾದ ಭೀಮಶಾ ಖನ್ನಾ ವಹಿಸಿ ಮಾತನಾಡಿ, ದಲಿತ ಸಂಘರ್ಷ ಸಮಿತಿಯು ಕಳೆದ ಐದು ದಶಕಗಳಿಂದ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯ ಆಧಾರದ ಮೇಲೆ ಶೋಷಿತರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತ ಬಂದಿದೆ ಎಂದು ತಿಳಿಸಿದರು. ಇಂದಿನ ಯುವಕರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣವೇ ಸಮಾಜದ ಅಭಿವೃದ್ಧಿ ಹಾಗೂ ಸ್ವಾಭಿಮಾನಿ ಬದುಕಿನ ಮೂಲಾಧಾರವಾಗಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂ. ಸಂಚಾಲಕರಾಗಿ ಶ್ಯಾಮರಾವ ಶಿಂಧೆ ಹಾಗೂ ರಾಣು ಮುದ್ದನಕರ್ ಮತ್ತು ಕಲಬುರಗಿ ಉಪ ವಿಭಾಗದ ಸಂಚಾಲಕರಾಗಿ ವಿಜಯಕುಮಾರ ಶಿಂಧೆ ಆಯ್ಕೆಯಾದರು.
ಕಲಬುರಗಿ ತಾಲೂಕು ಸಂಚಾಲಕರಾಗಿ ವಿಠಲ ತೆಗನೂರ ಹಾಗೂ ತಾಲೂಕು ಸಹ ಸಂಚಾಲಕರಾಗಿ ರಾಣಪ್ಪ ಮಾಡಬೂಳ ಅವರನ್ನು ಆಯ್ಕೆ ಮಾಡಲಾಯಿತು.
ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೈಭೀಮ ಬಿಲಗುಂದಿ, ಗುರು ಬೆಳಕೋಟೆ ಹಾಗೂ ರಾಜೇಂದ್ರ ದೊಡ್ಡಮನಿ ಅವರನ್ನು ನೇಮಕ ಮಾಡಲಾಯಿತು.
ಅವರಾದ (ಬಿ) ಹೋಬಳಿ ಶಾಖೆ ಸಂಚಾಲಕರಾಗಿ ಶಿವಶರಣಪ್ಪ ಕಾಂತಾ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಸಹ ಸಂಚಾಲಕರಾದ ಶಿವಕುಮಾರ ಆಜಾದಪೂರ, ವಿಜಯಕುಮಾರ ಟೈಗರ್, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಮಡಿವಾಳಪ್ಪ ಕಟ್ಟಿಮನಿ, ದಲಿತ ಮಹಿಳಾ ಘಟಕದ ಸಂಚಾಲಕರಾದ ಸವಿತಾ ಆರ್., ಜ್ಯೋತಿ ಕಾಂಬಳೆ, ಮಾಯಾದೇವಿ ಬಂಡಾರಿ, ಸರುಬಾಯಿ ಯಳಸಂಗಿ, ನಗರ ಸಂಚಾಲಕರಾದ ಅಭಿಷೇಕ್ ಉಪಾಧ್ಯಾಯ, ಗೌತಮ ಉಪಾಧ್ಯಾಯ, ಸಹದೇವ ನಂದೂರ್ ಹಾಗೂ ಅರುಣಕುಮಾರ ಇನಾಮದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಕುರಿತು ಜಿಲ್ಲಾ ಸಂಚಾಲಕರಾದ ಭೀಮಶಾ ಖನ್ನಾ, ಜಿಲ್ಲಾ ಸಹ ಸಂಚಾಲಕರಾದ ರಾಣು ಮುದ್ದನಕರ್ ಹಾಗೂ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಮಡಿವಾಳಪ್ಪ ಕಟ್ಟಿಮನಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
