29ನೆ ಆಲ್ ಇಂಡಿಯಾ ಶಿಟೊರಿಯೊ ಕರಾಟೆ ಕ್ರೀಡಾಕೂಟದಲ್ಲಿ ಜೇವರ್ಗಿ ತಾಲೂಕ ವಿದ್ಯಾರ್ಥಿಗಳುಮೇಲುಗೈ

29ನೆ ಆಲ್ ಇಂಡಿಯಾ ಶಿಟೊರಿಯೊ ಕರಾಟೆ ಕ್ರೀಡಾಕೂಟದಲ್ಲಿ  ಜೇವರ್ಗಿ ತಾಲೂಕ ವಿದ್ಯಾರ್ಥಿಗಳುಮೇಲುಗೈ

29ನೆ ಆಲ್ ಇಂಡಿಯಾ ಶಿಟೊರಿಯೊ ಕರಾಟೆ ಕ್ರೀಡಾಕೂಟದಲ್ಲಿ ಜೇವರ್ಗಿ ತಾಲೂಕ ವಿದ್ಯಾರ್ಥಿಗಳುಮೇಲುಗೈ

 ಜೇವರ್ಗಿ : ಮೈಸೂರು ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕರಾಟೆ ಕೋಚ್ ರಾಹುಲ್ ಬಿ ಪಂಚಬಾಯ ನೇತೃತ್ವದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಮೋಘವಾದ ಸಾಧನೆ ಮಾಡಿದ್ದಾರೆ ಎಂದು ಜೇವರ್ಗಿ ತಾಲೂಕ ಜೇನ್ನ ಶಿಟೊರಿಯೊ ಕರಾಟೆ ಅಸೋಸಿಯೇಷನ್ ತಾಲೂಕ ಉಪಾಧ್ಯಕ್ಷರಾದ ಅಮರನಾಥ ಮಧುರಕರ ಹೇಳಿದರು.

  ಜೇವರ್ಗಿ ತಾಲೂಕಿನಿಂದ ಆದರ್ಶ ತಂದೆ ವೈದ್ಯನಾಥ ಎರಡು ಚಿನ್ನದ ಪದಕ ಹಾಗೂ ಆದಿನಾಥ್ ತಂದೆ ರಾಮನಾಥ ಭಂಡಾರಿ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ . ದೀಪಾ /ಆಗತ್ರಾ ರಾವ. ಕಂಚಿನ ಪದಕ, ದೀಪಾ /ತಂದೆ ಆಗತ್ರಾರಾವ್. ಕಂಚಿನ ಪದಕ , ಪ್ರವೀಣ್ ತಂದೆ ಚೌಡಯ್ಯ ರಾಮ್ 1 ಬೆಳ್ಳಿಯ ಪದಕ ಒಂದು ಕಂಚಿನ ಪದಕ ಪಡೆದಿದ್ದಾರೆ. ಒಟ್ಟು ಆರು ಪದಕಗಳು ಜೇವರ್ಗಿ ತಾಲೂಕಿನ ಪಾಲಾಗಿವೆ ಎಂದು ಜೇನ್ನ ಶೀಟೊರಿಯೊ ಕರಾಟೆ ಸಂಸ್ಥೆಯ ತಾಲೂಕ ಉಪಾಧ್ಯಕ್ಷರಾದ ಅಮರನಾಥ ಮಧುರಕರ ತಿಳಿಸಿದ್ದಾರೆ.

 ಮುಂದೆ ಬರುವಂತಹ ದಿನಗಳಲ್ಲಿ ಜೇವರ್ಗಿ ತಾಲೂಕಿನ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಪು ಮೂಡಿಸಲಿ ಎಂದು ಆಲ್ ಇಂಡಿಯಾ ಶಿಟೊರಿಯೊ ಕರಾಟೆ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಸಚಿವ ಸಂಪುಟ ದರ್ಜೆಯ ಕ್ರೀಡಾ ಇಲಾಖೆಯ ರಾಜ್ಯ ಉಪಾಧ್ಯಕ್ಷರಾದ ಸಿಎಸ್ ಅರುಣ್ ಮಾಚಯ್ಯ ಹಾಗೂ ಕಲ್ಯಾಣ ಕರ್ನಾಟಕದ ಜೇನ್ನ್ ಶೀಟೊರಿಯೊ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಸಿಹಾನ್ ದಶರಥ ದುಮ್ಮನ್ಸೂರ ಗೂರುಜಿ ಅವರು ಮತ್ತು ಜೇವರ್ಗಿ ತಾಲೂಕ ಅಧ್ಯಕ್ಷರಾದ ಜೇಟ್ಟೇಪ್ಪ ಎಸ್ ಪೂಜಾರಿ ಅವರು ಪದಕದಲ್ಲಿ ವಿಜೇತರದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

 ವಿದ್ಯಾರ್ಥಿಗಳ ಪ್ರೇರಣೆ ಹಾಗೂ ರಾಹುಲ್ ಪಂಚಬಾಯ್ ಅವರ ಸತತ ಪರಿಶ್ರಮವೇ ವಿದ್ಯಾರ್ಥಿಗಳ ಜಯಬೇರಿಗೆ ಕಾರಣವಾಗಿದೆ ಎಂದು ಮಧುರಕರವರು ತಿಳಿಸಿದ್ದಾರೆ