ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ - ಡಾ.ಚಂದ್ರಶೇಖರ ಸುಬೇದಾರ

ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ - ಡಾ.ಚಂದ್ರಶೇಖರ ಸುಬೇದಾರ

ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ - ಡಾ.ಚಂದ್ರಶೇಖರ ಸುಬೇದಾರ

ಶಹಾಪುರ : ಸೋಲು ಗೆಲುವು ಜೀವನದ ಎರಡು ಮುಖಗಳಿದ್ದಂತೆ,ಸೋತಾಗ ನಿರಾಶ ಗೊಳ್ಳದೆ,ಗೆದ್ದಾಗ ಅಹಂನಿಂದ ಹಿಗ್ಗದೆ,ಸೋಲು ಗೆಲುವು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳ ಬೇಕೆಂದು ಸುಬೇದಾರ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಚಂದ್ರಶೇಖರ ಸುಬೇದಾರ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೋತಿಯನ್ನು ನೀಡಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನ ಸಗರ ಗ್ರಾಮದ ಸುಬೇದಾರ ವಿದ್ಯಾಲಯದಲ್ಲಿ ಜರುಗಿದ ಸಿಬಿಎಸ್‌ಸಿ ಕ್ಲಸ್ಟರ್ ರಾಜ್ಯಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೀವನದಲ್ಲಿ ಕ್ರೀಡೆಯು ಪ್ರಮುಖ ಮೌಲ್ಯವಾಗಿದ್ದು, ಪ್ರಾಚೀನ ಕಾಲದಿಂದಲೂ ಮಹತ್ವವಾದ ಸ್ಥಾನ ಪಡೆದುಕೊಂಡಿದೆ,ವ್ಯಕ್ತಿಯಲ್ಲಿ ತಾಳ್ಮೆ ಸಮಾಧಾನ ಮತ್ತು ಮುನ್ನಡೆಯುವ ಸ್ಫೂರ್ತಿಯನ್ನು ಬೆಳೆಸುತ್ತದೆ ಎಂದು ನುಡಿದರು.

ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ ಜೊತೆಗೆ ಭಾವನಾತ್ಮಕ ಮತ್ತು ಅರಿವಿನ ಬೆಳವಣಿಗೆಗೆ ಕ್ರೀಡೆಗಳು ಪೂರಕವಾಗಿದೆ ಅಲ್ಲದೆ ಕ್ರೀಡೆಗಳಲ್ಲಿ ಜಯಗಳಿಸಬೇಕಾದರೆ ಉತ್ತಮ ಪೌಷ್ಟಿಕ ಆಹಾರ ಸೇವನೆಯ ಜೊತೆಗೆ ಸಾಕಷ್ಟು ನೀರು ಕುಡಿಯಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಅಂತರರಾಷ್ಟ್ರೀಯ ಖೋ, ಖೋ ಕ್ರೀಡಾಪಟು ಚೈತ್ರ ಮಾತನಾಡಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಗ್ರಾಮೀಣ ಮಟ್ಟದಲ್ಲಿ ಆಯೋಜಿಸಿರುವುದು ನನಗೆ ವೈಯಕ್ತಿಕವಾಗಿ ಖುಷಿ ತಂದುಕೊಟ್ಟಿದೆ,ಗ್ರಾಮೀಣ ಭಾಗದ ಪ್ರತಿಭೆಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಒಲಂಪಿಕ್ಸ್ ನಂತಹ ಬಹುದೊಡ್ಡ ಕ್ರೀಡಾ ಸ್ಪರ್ಧೆಗಳಲ್ಲಿ ಅವಕಾಶ ಸಿಗುವುದಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದರು.

ಗುಂಬಳಾಪುರ ಮಠದ ಪರಮಪೂಜ್ಯರಾದ ಯೋಗಿರತ್ನ ಗುರುಸಿದ್ದೇಶ್ವರ ಶಿವಾಚಾರ್ಯರು ಹಾಗೂ ಕುಂಬಾರಗೇರಿ ಹಿರೇಮಠದ ಪರಮಪೂಜ್ಯರಾದ ಸೂಗುರೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ದತ್ತರಾಜ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ನಾಗನಗೌಡ ಸುಬೇದಾರ,ಶಿಕ್ಷಣ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದ ಕರಣ ಸುಬೇದಾರ,ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ರಾಜಶೇಖರ ನಗನೂರ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಡಿವಪ್ಪ ಸಾಹು ಜಾಕಾ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸುಬೇದಾರ ವಿದ್ಯಾಲಯದ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು,

 ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಾದ ಬೆಂಗಳೂರು ಮೈಸೂರು ಮಂಡ್ಯ ಗದಗ ಹುಬ್ಬಳ್ಳಿ ಧಾರವಾಡ ಬಾಗಲಕೋಟೆ,ಬೀದರ್ ಗುಲ್ಬರ್ಗ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು ಈ ಕಾರ್ಯಕ್ರಮವನ್ನು ವೇದಾ ಮತ್ತು ಅನುಶ್ರೀ ನಿರೂಪಿಸಿದರು, ಶಿವಕುಮಾರ್ ಅಕ್ಕಿ ಸ್ವಾಗತಿಸಿದರು,ಜೋಶಿ ಜೋಸೆಫ್ ವಂದಸಿದರು.

ರಾಜ್ಯಮಟ್ಟದ ಕ್ರೀಡಾಕೂಟವು ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಸಗರ ಗ್ರಾಮದ ಸುಬೇದಾರ ವಿದ್ಯಾಲಯದಲ್ಲಿ ಅದು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿರುವುದು ತುಂಬಾ ಖುಷಿ ತರುವಂತ ವಿಷಯ. ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳು ಆಯೋಜಿಸುವುದರಿಂದ ರಾಜ್ಯಮಟ್ಟದ ಕ್ರೀಡಾಕೂಟವು ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಸಗರ ಗ್ರಾಮದ ಸುಬೇದಾರ ವಿದ್ಯಾಲಯದಲ್ಲಿ ಅದು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿರುವುದು ತುಂಬಾ ಖುಷಿ ತರುವಂತ ವಿಷಯ. ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳು ಆಯೋಜಿಸುವುದರಿಂದ ಗ್ರಾಮೀಣ ಪ್ರತಿಭೆಗಳು ಒಲಂಪಿಕ್ಸ್ ನಲ್ಲಿ ಭಾಗವಹಿಸಲು ತುಂಬಾ ಅನುಕೂಲವಾಗುತ್ತದೆ.

ಗ್ರಾಮೀಣ ಭಾಗದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಹಮ್ಮಿಕೊಂಡಿರುವುದು ನನಗೆ ವೈಯಕ್ತಿಕ ಖುಷಿ ತಂದು ಕೊಟ್ಟಿದೆ,ಇಂತಹ ಕ್ರೀಡಾಕೂಟಗಳಲ್ಲಿ ಗ್ರಾಮೀಣ ಪ್ರತಿಭೆಗಳು ಭಾಗವಹಿಸುವುದರಿಂದ ಒಲಂಪಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ತುಂಬಾ ಅನುಕೂಲವಾಗುತ್ತದೆ.