ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಿರಲಿ: ಶಾಸಕ ಪ್ರಭು ಚವ್ಹಾಣ

ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಿರಲಿ: ಶಾಸಕ ಪ್ರಭು ಚವ್ಹಾಣ

ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಿರಲಿ: ಶಾಸಕ ಪ್ರಭು ಚವ್ಹಾಣ

ಸಂವಿಧಾನಾತ್ಮಕವಾಗಿ ನಮಗೆ ಸಿಕ್ಕಿರುವ ಮತದಾನದ ಹಕ್ಕಿನ ರಕ್ಷಣೆಗೆ ಪ್ರತಿಯೊಬ್ಬ ಅರ್ಹ ಮತದಾರರೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ಮನವಿ ಮಾಡಿದರು.

ಜುಲೈ 28ರಂದು ಕಮಲನಗರ ತಾಲ್ಲೂಕಿನ ತೋರ್ಣಾ ವಾಡಿ, ತೋರ್ಣಾ, ಹೊಳಸಮುದ್ರ, ಸಾವಳಿ, ಬಸನಾಳ, ಕೋರಿಯಾಳ, ಮುಧೋಳ(ಕೆ), ತಪಸ್ಯಾಳ, ಚಾಂದೋರಿ, ಹಾಲಳ್ಳಿ, ಬಳತ(ಬಿ), ಬಳತ(ಕೆ), ಠಾಣಾ ಕುಶನೂರ, ನಿಡೋದಾ, ಬೇಡಕುಂದಾ, ಲಕ್ಷ್ಮೀನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಎಸ್‌ಐಆರ್ ಕುರಿತು ಜನಜಾಗೃತಿ ಮೂಡಿಸಿದರು.

ಇದೇ ವೇಳೆ ಶಾಸಕರು ಮತದಾರರೊಂದಿಗೆ ಸಂವಾದ ನಡೆಸಿ, ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಿರುವ ಬಗ್ಗೆ ತಿಳಿದುಕೊಂಡರು. ಕೆಲವರು ಇನ್ನು ಸಲ್ಲಿಸದಿರುವುದು ಗೊತ್ತಾದಾಗ ಏಕೆ ವಿಳಂಬ ಮಾಡುತ್ತಿದ್ದೀರೆಂದು ಬೇಸರ ವ್ಯಕ್ತಪಡಿಸಿದರು.

ಚುನಾವಣಾ ಆಯೋಗವು ಮತದಾರರ ಪಟ್ಟಿಯ ಶುದ್ದೀಕರಣಕ್ಕೆ ಮುಂದಾಗಿದೆ. ನಕಲಿ ಅಥವಾ ಅನರ್ಹ ಮತದಾರರನ್ನು ತೆಗೆದು ಅರ್ಹ ಮತದಾರರನ್ನು ಉಳಿಸಿ ಚುನಾವಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವಾಗಿಸುವ ಸದುದ್ದೇಶ ಹೊಂದಲಾಗಿದೆ‌. ನಿರ್ಲಕ್ಷ್ಯ ವಹಿಸಿದರೆ ಅರ್ಹ ಮತದಾರರು ಪಟ್ಟಿಯಿಂದ ವಂಚಿತರಾಗಬಹುದು. ಹಾಗಾಗಿ ಎಸ್ಐಆರ್ ಪ್ರಕ್ರಿಯೆಯನ್ನು ಯಾರೊಬ್ಬರೂ ನಿರ್ಲಕ್ಷ್ಯ ವಹಿಸಬಾರದು ಎಂದು ಹೇಳಿದರು. 

ಈಗಾಗಲೇ ಎಲ್ಲ ಅರ್ಹರ ಮನೆಗಳಿಗೆ ಎನ್ಯುಮರೇಷನ್ ಫಾರ್ಮ್‌ಗಳನ್ನು ತಲುಪಿಸಲಾಗಿದೆ. ಇವುಗಳನ್ನು ಸರಿಯಾಗಿ ಭರ್ತಿ ಮಾಡಿ ನಿಗದಿತ ಅವಧಿಯೊಳಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬೇಕು. ಏನಾದರೂ ಗೊಂದಲಗಳಿದ್ದರೆ ಬಿಎಲ್ಓ ಅಥವಾ ಪಕ್ಷದ ಕಾರ್ಯಕರ್ತರ ಸಹಾಯ ಪಡೆಯವಹುದೆಂದು ತಿಳಿಸಿದರು.

ಮುಖಂಡರಾದ ಸುರೇಶ ಭೋಸ್ಲೆ, ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ, ಖಂಡೋಬಾ ಕಂಗಟೆ, ಮಲ್ಲಪ್ಪ ದಾನಾ, ಪ್ರವೀಣ ಕಾರಬಾರಿ, ಉದಯ ಸೋಲಾಪೂರೆ, ಇನಿಲ್ ಹೊಳಸಮುದ್ರೆ, ಬಾಬುರಾವ ವಾಗ್ಮಾರೆ, ಶಿವಕುಮಾರ ಸಜ್ಜನಶೆಟ್ಟಿ, ಪ್ರಭುರಾವ ಜೀರ್ಗೆ, ಲಕ್ಣ್ಮಣ ಗಾದಗೆ, ಮಾಣಿಕರಾವ ರಂಡೆ, ಧನರಾಜ ಬಾವಗೆ, ಶಿವಾನಂದ ಸಾವಳೆ‌ ಸೇರಿದಂತೆ ಇತರರು ಉಪಸ್ಥಿತರಿದ್ದರು.