29 ರಂದು ಸಗರ ಒಕ್ಕಲಿಗರ ಹಿರೇಮಠದಲ್ಲಿ ಗುರುಪೂರ್ಣಿಮೆ
29 ರಂದು ಸಗರ ಒಕ್ಕಲಿಗರ ಹಿರೇಮಠದಲ್ಲಿ ಗುರುಪೂರ್ಣಿಮೆ.
ಶಹಪುರ : ಶ್ರೀಮದ್ ಉಜ್ಜಯಿನಿ ಶಾಖಾ ಮಠವಾದ ಸಗರನಾಡಿನ ಸುಕ್ಷೇತ್ರ ಒಕ್ಕಲಿಗರ ಹಿರೇಮಠದ ಪರಮಪೂಜ್ಯರಾದ ಮರುಳ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಇದೇ ಜುಲೈ 29 ರಂದು ಸಾಯಂಕಾಲ 6:00ಗೆ ಗುರುಪೂರ್ಣಿಮೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕರಿಬಸವೇಶ್ವರ ಯುವಕ ಮಂಡಳಿ ಪ್ರಕಟಣೆಗೆ ತಿಳಿಸಿದೆ.
ಗುರುಪೂರ್ಣಿಮೆಯ ಅಂಗವಾಗಿ ಗುರು ವಂದನಾ ಹಾಗೂ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ಮಠದ ಭಕ್ತಾದಿಗಳು ಹಾಗೂ ಸಗರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ತಿಳಿಸಲಾಗಿದೆ.
ಇದೇ ಸಂದರ್ಭದಲ್ಲಿ ಎಸ್.ಎಸ್. ಎಲ್.ಸಿ.ಹಾಗೂ ಪಿಯುಸಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು,ಜೊತೆಗೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸರಕಾರಿ ನೌಕರರಿಗೂ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
