ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಕನಕದಾಸರು - ಪ್ರಭಾಕರ ಜೋಶಿ.
ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಕನಕದಾಸರು - ಪ್ರಭಾಕರ ಜೋಶಿ.
ಸೇಡಂ : ಕನಕದಾಸರ ಕೀರ್ತನೆಗಳಲ್ಲಿ ಜಾತಿ ತಾರತಮ್ಯವನ್ನು ವಿರೋಧಿಸುವುದರ ಜೊತೆಗೆ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದು ಕಲ್ಬುರ್ಗಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಪ್ರಭಾಕರ್ ಜೋಶಿ ಹೇಳಿದರು.
ನಗರದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ನರ್ಮದಾದೇವಿ ಗಿಲಡಾ ಮಹಿಳಾ ಮಹಾವಿದ್ಯಾಲಯದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕನಕ ದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಮಾತನಾಡಿದ ಅವರು ಮೂಢನಂಬಿಕೆ ಮತ್ತು ಡಾಂಭಿಕತೆಯನ್ನು ಕಟುವಾಗಿ ಟಿಕಿಸಿದ್ದಾರೆ ಎಂದು ನುಡಿದರು.
ಮುಖ್ಯ ಅತಿಥಿಗಳು ಹಾಗೂ ಹಿರಿಯ ಸಾಹಿತಿಗಳಾದ ಮುಡುಬಿ ಗುಂಡೇರಾವ್ ಮಾತನಾಡಿ ಸಾಮಾಜಿಕ ಸಮಾನತೆ ಮತ್ತು ಜಾತಿ ನಿರ್ಮೂಲನೆಗಾಗಿ ಇಡೀ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಈ ನಾಡಿನ ಒಳಿತಿಗಾಗಿ ಶ್ರಮಿಸಿದ ಶ್ರೇಷ್ಠ ಕನಕದಾಸರ ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದು ನುಡಿದರು.
ಶ್ರೀಮತಿ ನರ್ಮದಾದೇವಿ ಗಿಲಡಾ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಆರೋಗ್ಯಪ್ಪ ಮುಕ್ತೇದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು, ಕಾರ್ಯಕ್ರಮದ ವೇದಿಕೆಯ ಮೇಲೆ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸದಸ್ಯರಾದ ಅನಿಲಕುಮಾರ ಮಾಲಪಾಣಿ,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶರಣು ಮಹಾಗಾಂವ್, ಹಿರಿಯರಾದ ಸಿದ್ದಪ್ಪ ತಳ್ಳಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳಾಡಿದರು, ಕಾರ್ಯಕ್ರಮದ ಪ್ರಾರಂಭದಲ್ಲಿ ರಿಷಿಕಾ ಪ್ರಾರ್ಥಿಸಿದರು,ಉಪ ಪ್ರಾಂಶುಪಾಲರಾದ ಆರತಿ ಕಡಗಂಚಿ ಸರ್ವರನ್ನು ಸ್ವಾಗತಿಸಿದರು,ಕನ್ನಡ ಉಪನ್ಯಾಸಕಿ ರಾಜೇಶ್ವರಿ ನಿರೂಪಿಸಿದರು,ಅರ್ಥಶಾಸ್ತ್ರದ ಉಪನ್ಯಾಸಕಿ ಲಕ್ಷ್ಮಿ ಹೆಬ್ಬಾಳ ವಂದಿಸಿದರು.
