ರೋಣದಲ್ಲಿ ಕಾರ್ಯನಿರತ ಪತ್ರಕರ್ತರ ಪದಗ್ರಹಣ ಹಾಗೂ ಐಡಿ ಕಾರ್ಡ್ ವಿತರಣೆ

ರೋಣದಲ್ಲಿ ಕಾರ್ಯನಿರತ ಪತ್ರಕರ್ತರ ಪದಗ್ರಹಣ ಹಾಗೂ ಐಡಿ ಕಾರ್ಡ್ ವಿತರಣೆ

ಶೋಷಿತರ ಪರ ಗಟ್ಟಿಯಾಗಿ ನಿಲ್ಲುವುದೇ ಧ್ವನಿ ಸಂಘಟನೆಯ ಆಶಯ:

 ರೋಣದಲ್ಲಿ ಕಾರ್ಯನಿರತ ಪತ್ರಕರ್ತರ ಪದಗ್ರಹಣ ಹಾಗೂ ಐಡಿ ಕಾರ್ಡ್ ವಿತರಣೆ

ನೂತನ ಗದಗ ಜಿಲ್ಲಾಧ್ಯಕ್ಷರಾಗಿ ಅಂದಪ್ಪ ಆರ್ ಮಾದರ್.ಉಪಾಧ್ಯಕ್ಷರಾಗಿ ಮಂಜುನಾಥ್ ಹೂವಿನಹಾಳ ಆಯ್ಕೆ.

ರೋಣ (ಗದಗ):ಪತ್ರಿಕೋದ್ಯಮ ಎಂಬುದು ಕೇವಲ ವೃತ್ತಿಯಲ್ಲ ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ಪವಿತ್ರವಾದ ಸೇವೆ. ಅನ್ಯಾಯ ಭ್ರಷ್ಟಾಚಾರ ಮತ್ತು ದುಷ್ಟಶಕ್ತಿಗಳ ವಿರುದ್ಧ ನಿರ್ಭಯವಾಗಿ ಧ್ವನಿ ಎತ್ತುವುದೇ ನಿಜವಾದ ಪತ್ರಕರ್ತನ ಶಕ್ತಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹಾಗೂ ವಿಶ್ವ ದರ್ಶನ ದಿನಪತ್ರಿಕೆಯ ಸಂಪಾದಕ ಡಾ. ಎಸ್. ಎಸ್. ಪಾಟೀಲ್ ಹೇಳಿದರು.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನೆರವೇರಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ (ರಿ.) ಯ ಗದಗ ಜಿಲ್ಲಾ ಘಟಕ, ರೋಣ ಹಾಗೂ ಗಜೇಂದ್ರಗಡ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳ ಉದ್ಘಾಟನೆ ಆದೇಶ ಪತ್ರ ಹಾಗೂ ಗುರುತಿನ ಚೀಟಿ (ID Card) ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಡಾ. ಎಸ್. ಎಸ್. ಪಾಟೀಲ್, ಗ್ರಾಮೀಣ ಮತ್ತು ತಾಲೂಕು ಮಟ್ಟದ ಪತ್ರಕರ್ತರು ಅಧಿಕಾರಿಗಳ ಅಥವಾ ರಾಜಕಾರಣಿಗಳ ಒತ್ತಡಕ್ಕೆ ಹೆದರಬೇಕಾದ ಅಗತ್ಯವಿಲ್ಲ. ಸಂಘಟನೆಯು ಪ್ರತಿಯೊಬ್ಬ ನಿಷ್ಠಾವಂತ ಪತ್ರಕರ್ತನ ಬೆನ್ನಲುಬಾಗಿ ನಿಲ್ಲುತ್ತದೆ. ಗದಗ ಜಿಲ್ಲೆಯಲ್ಲಿ ಅನ್ಯಾಯದ ವಿರುದ್ಧ ಸದಾ ಹೋರಾಡುವ ಅಂದಪ್ಪ ರಾಮಪ್ಪ ಮಾದರ್ ಅವರ ನಾಯಕತ್ವದಲ್ಲಿ ಸಂಘಟನೆ ಇನ್ನಷ್ಟು ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸಿದ್ಧ ಗಾಯಕ ಶ್ರೀ ಸಂತೋಷ್ ಪೂಜಾರ್ ಅವರ ಭಕ್ತಿಪೂರ್ವಕ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭ ಸಿಕ್ಕಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್. ವಿ. ಸಂಕನಗೌಡ್ರ, ಪತ್ರಕರ್ತರ ಕ್ಷೇಮ, ಒಗ್ಗಟ್ಟು ಹಾಗೂ ಸಮಾಜದ ಧ್ವನಿಯಾಗಿ ಕೆಲಸ ಮಾಡುವುದೇ ನಮ್ಮ ಸಂಘಟನೆಯ ಮೂಲ ಧ್ಯೇಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ರೈತ ಸಂಘಟನೆಯ ಗದಗ ಜಿಲ್ಲಾಧ್ಯಕ್ಷ ಶ್ರೀ ಮುತ್ತಣ್ಣ ಚೌರಡ್ಡಿ ಹಾಗೂ ಹಿರಿಯ ರೈತ ಮುಖಂಡ ಶ್ರೀ ಶಿವಲಿಂಗಪ್ಪ ಭೂಪಳಾಪುರ ಮಾತನಾಡಿ, ರೈತರ ಮತ್ತು ಶೋಷಿತರ ಹೋರಾಟಗಳಿಗೆ ಮಾಧ್ಯಮಗಳು ಸದಾ ಧ್ವನಿಯಾಗಿವೆ. ಸತ್ಯದ ಹಾದಿಯಲ್ಲಿ ನಡೆಯುವ ಪತ್ರಕರ್ತರಿಗೆ ಸಮಸ್ತ ರೈತ ಸಮುದಾಯದ ಪೂರ್ಣ ಬೆಂಬಲವಿರುತ್ತದೆ ಎಂದರು.

ಕೆ. ಎಸ್. ಎಸ್. ಕಾಲೇಜಿನ ಪ್ರಾಚಾರ್ಯ ಶ್ರೀ ಸಿ. ಬಿ. ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.

 ಗಜೇಂದ್ರಗಡ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದ್ ಗೊಗೇರಿ ಸೇರಿದಂತೆ ಹಲವು ನಾಯಕರು ಅನಿಸಿಕೆ ಹಂಚಿಕೊಂಡರು.

ಗದಗ ಜಿಲ್ಲಾ ಘಟಕ:

ಅಧ್ಯಕ್ಷರು: ಅಂದಪ್ಪ ರಾಮಪ್ಪ ಮಾದರ್

ಉಪಾಧ್ಯಕ್ಷರು: ಮಂಜುನಾಥ ಹೂವಿನಹಾಳ

ಪ್ರಧಾನ ಕಾರ್ಯದರ್ಶಿ: ಎಸ್. ವಿ. ಸಂಕನಗೌಡ್ರ

ಸಂಘಟನಾ ಕಾರ್ಯದರ್ಶಿ: ಅಭಿಷೇಕ ಕೊಪ್ಪದ

ಸಹ ಕಾರ್ಯದರ್ಶಿ: ಹುಚ್ಚಿರಪ್ಪ ಇಟಿ

ಖಜಾಂಚಿ: ಮುರ್ತುಜ ಹುಬ್ಬಳ್ಳಿ

ನಿರ್ದೇಶಕರು: ಎಂ. ಎಸ್. ಮಲ್ಲನಗೌಡ, ರಮೇಶ್ ನಂದಿ

ಕಾರ್ಯಕಾರಿಣಿ ಸದಸ್ಯರು: ಮಲ್ಲಪ್ಪ ಮಾದರ್, ಸಾವಿತ್ರಿ ಸೋಮನಕಟ್ಟಿ, ಪ್ರಶಾಂತ್ ಜಕ್ಕಲಿ, ಮಂಜುನಾಥ ವಡ್ಡರ

ರೋಣ ತಾಲೂಕು ಘಟಕ:

ಅಧ್ಯಕ್ಷರು: ರುದ್ರಪ್ಪ ಹುಬ್ಬಳ್ಳಿ | ಸದಸ್ಯರು: ಶಿವಯೋಗಪ್ಪ ಬಾವಿ

ಗಜೇಂದ್ರಗಡ ತಾಲೂಕು ಘಟಕ:

ಪ್ರಧಾನ ಕಾರ್ಯದರ್ಶಿ: ಶಿವಾನಂದ್ ಗೊಗೇರಿ ಸದಸ್ಯರು: ಮಹಮ್ಮದ ರಫೀಕ್

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಜಿಲ್ಲಾಧ್ಯಕ್ಷ ಅಂದಪ್ಪ ರಾಮಪ್ಪ ಮಾದರ್, ನನ್ನ ಮೇಲೆ ನಂಬಿಕೆಯಿಟ್ಟು ನೀಡಿರುವ ಈ ಗುರುತರ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಗದಗ ಜಿಲ್ಲೆಯ ಪ್ರತಿಯೊಬ್ಬ ಪತ್ರಕರ್ತರ ಹಿತರಕ್ಷಣೆ ಹಾಗೂ ಸಮಾಜದ ಕುಂದುಕೊರತೆಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಲು ಸಂಘಟನೆ ಶ್ರಮಿಸಲಿದೆ ಎಂದು ವಚನ ನೀಡಿದರು.

ಸಮಾವೇಶದಲ್ಲಿ ಗದಗ ಜಿಲ್ಲೆಯ ಹಿರಿಯ-ಕಿರಿಯ ಪತ್ರಕರ್ತರು ರೈತ ನಾಯಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ